ಆಗ್ರಾದ ರಸ್ತೆಯಲ್ಲಿ ನಮಾಜ್, 150 ಜನರ ವಿರುದ್ಧ ಎಫ್ ಐಆರ್!

By Santosh Naik  |  First Published Apr 22, 2022, 9:53 PM IST

ರಸ್ತೆಯಲ್ಲಿ ನಮಾಜ್ ಮಾಡುವುದರಿಂದ ವಿಪರೀತ ದಟ್ಟಣೆ ಇರುವ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ  ಭಾರತೀಯ ದಂಡ ಸಂಹಿತೆಯ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಆಗ್ರಾ (ಏ.22): ಪೊಲೀಸರ ಅನುಮತಿಯಿಲ್ಲದೆ ಆಗ್ರಾದ (Agra) ಮಸೀದಿಯ (mosque )  ಮುಂಭಾಗದ ರಸ್ತೆಯಲ್ಲಿ ನಮಾಜ್ (namaaz ) ಮಾಡಿದ 150 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಸ್ತೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Chief Minister Yogi Adityanath) ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಇದು ವರದಿಯಾಗಿದೆ.

ರಸ್ತೆಯಲ್ಲಿ ನಮಾಜ್ ಮಾಡುವುದರಿಂದ ವಿಪರೀತ ದಟ್ಟಣೆ ಇರುವ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ  ಭಾರತೀಯ ದಂಡ ಸಂಹಿತೆಯ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜು ರಸ್ತೆಯಲ್ಲಿರುವ ಇಮ್ಲಿ ವಾಲಿ ಮಸೀದಿಯಲ್ಲಿ(Imli Wali Masjid) ಐದು ದಿನಗಳ ಕಾಲ ರಾತ್ರಿ 9 ರಿಂದ 11 ಗಂಟೆಯವರೆಗೆ  ನಮಾಜ್ ಮಾಡಲು ಅನುಮತಿ ಇತ್ತು. ಅವರು ಸ್ಥಳೀಯ ಅಂಗಡಿಕಾರರು ಮತ್ತು ಆಡಳಿತದ ಒಪ್ಪಿಗೆಯನ್ನು ಹೊಂದಿದ್ದರು. ಆದರೆ, ಈ ವರ್ಷ ರಸ್ತೆಯಲ್ಲಿ ಪ್ರಾರ್ಥನೆಗೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಹನುಮಾನ್ ಚಾಲೀಸಾ (Hanuman Chalisa) ಪಠಿಸುವುದಾಗಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಯಾವುದೇ ಅನಿರೀಕ್ಷಿತ ಕೋಮು ಘಟನೆಯನ್ನು ತಪ್ಪಿಸಲು ಜಿಲ್ಲಾಡಳಿತ ಅನುಮತಿ ಹಿಂಪಡೆದಿದೆ.
ಅನುಮತಿಯನ್ನು ಹಿಂತೆಗೆದುಕೊಂಡ ನಂತರ, ತಾರಾಬಿಹ್ ಅನ್ನು ಐದು ದಿನಗಳ ಬದಲಿಗೆ ಮೂರು ದಿನಗಳಲ್ಲಿ ಪೂರ್ಣಗೊಳಿಸಲು ಎಲ್ಲರ ಒಪ್ಪಿಗೆಯೊಂದಿಗೆ ನಿರ್ಧರಿಸಲಾಯಿತು. ಆದರೆ, ಅನುಮತಿ ಹಿಂಪಡೆಯುವ ಹೊತ್ತಿಗೆ ಎರಡು ದಿನ ತರಾಬಿಹ್ ನಮಾಜ್ ನೀಡಲಾಗಿತ್ತು ಮತ್ತು ಹೊಸ ಒಪ್ಪಂದದ ಪ್ರಕಾರ ಇನ್ನೊಂದು ದಿನ ಬಾಕಿ ಉಳಿದಿತ್ತು. ಆದರೆ ಈ ಒಂದು ದಿನ ಮುಸ್ಲೀಮರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದು, 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

"ತಾರಾಬಿಹ್ ನಮಾಜ್ ಅನ್ನು ರಸ್ತೆಯಲ್ಲಿ ಮಾಡಲಾಗಿದೆ. ಇದು ಸಂಚಾರಕ್ಕೆ ಅಡ್ಡಿಪಡಿಸುತ್ತದೆ ಮತ್ತು ಸ್ಥಳೀಯರಿಗೆ ತೊಂದರೆ ಉಂಟುಮಾಡುತ್ತದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಅನುಮತಿ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಮತ್ತು ಅನುಮತಿಯನ್ನು ಹಿಂಪಡೆಯಲಾಗಿದೆ" ಎಂದು ಅವರು ಹೇಳಿದರು, ಈ ಪ್ರಕರಣದಲ್ಲಿ ಮೂವರು ಹೆಸರಿಸಲಾದ ಮತ್ತು 150 ಇತರರನ್ನು ಆರೋಪಿಗಳಾಗಿ ಮಾಡಲಾಗಿದೆ.

"ಈ ಪ್ರಕರಣದಲ್ಲಿ, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಹೊರತಾಗಿ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್‌ಗಳನ್ನು ವಿಧಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.

Namaz Controversy ತರಗತಿ ಒಳಗಡೆ ನಮಾಜ್ ಮಾಡಿ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯಿಂದ ಕ್ಷಮಾಪಣಾ ಪತ್ರ!

Tap to resize

Latest Videos

ಎಫ್‌ಐಆರ್‌ನ ಪ್ರಕಾರ, ಏಪ್ರಿಲ್ 2 ಮತ್ತು ಏಪ್ರಿಲ್ 9 ರ ನಡುವೆ ಇಮ್ಲಿ ವಾಲಿ ಮಸೀದಿಯಲ್ಲಿ ರಾತ್ರಿ 8 ರಿಂದ 10 ರವರೆಗೆ ತಾರಾಬಿಹ್ ನಮಾಜ್ ಮಾಡಲು ಗದಯ್ಯ ಹಕಿಮಾನ್ ನಿವಾಸಿ ಇರ್ಫಾನ್ ಸಲೀಂ ಅವರಿಗೆ ಅನುಮತಿ ನೀಡಲಾಗಿತ್ತು. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ನಿಂದ ಇದಕ್ಕೆ ಅನುಮತಿ ಬಂದಿದೆ. ಆದರೆ, ಸಂಘಟಕರು ಸೂಚನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದ್ದು, ಏಪ್ರಿಲ್ 4 ರಂದು ಅನುಮತಿಯನ್ನು ರದ್ದುಗೊಳಿಸಲಾಗುದೆ ಹಾಗಿದ್ದರೂ ಪ್ರಾರ್ಥನೆ ಸಲ್ಲಿಸಲಾಗಿದೆ.  ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತರಗತಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯಿಂದ ಕ್ಲಾಸ್‌ರೂಂನಲ್ಲೇ ನಮಾಜ್, ವಿಡಿಯೋ ವೈರಲ್!

ಸ್ಥಳೀಯ ಅಂಗಡಿಕಾರರ ಸಹಕಾರ ಮತ್ತು ಬೆಂಬಲದೊಂದಿಗೆ ಸುಮಾರು 40 ವರ್ಷಗಳಿಂದ ಈ ಮಸೀದಿಯಲ್ಲಿ ರಂಜಾನ್ ಸಂದರ್ಭದಲ್ಲಿ ತಾರಾಬಿಹ್ ನಮಾಜ್ ನೀಡಲಾಗುತ್ತಿದೆ ಎಂದು ಮಸೀದಿಯ ವ್ಯವಸ್ಥಾಪಕ ಇರ್ಫಾನ್ ಸಲೀಂ ಮತ್ತು ಅವರ ಬೆಂಬಲಿಗರು ಹೇಳಿದರು. “ಆದರೆ ಈ ಬಾರಿ ಸಂಜಯ್ ಜಾಟ್ ನೇತೃತ್ವದಲ್ಲಿ ಹಿಂದೂ ಮಹಾಸಭಾದ ಸದಸ್ಯರು ಪ್ರಾರ್ಥನಾ ಸ್ಥಳಕ್ಕೆ ತಲುಪಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದರು. ಯಾವುದೇ ಸ್ಥಳೀಯ ನಿವಾಸಿ ಸಂಜಯ್ ಜಾಟ್ ಜೊತೆಗಿರಲಿಲ್ಲ. ಹಿಂದುತ್ವ ಸಂಘಟನೆಗಳ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ'' ಎಂದು ಹೇಳಿದ್ದಾರೆ.

click me!