ರಾಜಸ್ಥಾನ(ಏ.22): ದೇಶದ ಎಲ್ಲಾ ರಾಜ್ಯಗಳಲ್ಲಿ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದೆ. ಒಂದೊಂದು ರಾಜ್ಯಗಳಲ್ಲಿ ಪರೀಕ್ಷೆ ನಡೆಸಲು ಒಂದೊಂದು ಸಮಸ್ಯೆ ಎದುರಾಗುತ್ತಿದೆ. ಕರ್ನಾಟಕದಲ್ಲಿ ಹಿಜಾಬ್ ಸಮಸ್ಯೆಯಾದರೆ ರಾಜಸ್ಥಾನದಲ್ಲಿ ಪ್ರಶ್ನೆಗಳ ಸಮಸ್ಯೆ ಎದುರಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅಂಕ ಗಳಿಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಹೊಗಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊಗಳುವ 6 ಪ್ರಶ್ನೆಗಳನ್ನು ಕೇಳಲಾಗಿದೆ.ಇದರಿಂದ ಕಾಂಗ್ರೆಸ್ ಸಾಧನೆಯನ್ನು ವಿದ್ಯಾರ್ಥಿಗಳು ಬರೆಯಲೇಬೇಕಾದ ಅನಿವಾರ್ಯತೆ ಸೃಷ್ಟಿ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
Udupi ಪರೀಕ್ಷೆ ಬರೆಯಲು ಬಂದ ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ
ರಾಜ್ಯಶಾಸ್ತ್ರ ಪರೀಕ್ಷೆಯ 12ನೇ ಪ್ರಶ್ನೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಹಾಗೂ ಬೌದ್ಧಿಕ ಮೈತ್ರಿ ಕುರಿತು ವಿವರಿಸಿ ಎಂಬ ಪ್ರಶ್ನೆ ಕೇಳಲಾಗಿದೆ. ಈ ಮೂಲಕ ಕಾಂಗ್ರೆಸ್ ಸಾಧನೆ, ಮೈತ್ರಿ ಸಾಮಾಜಿಕ ಬದ್ಧತೆ ಕುರಿತು ಮಕ್ಕಳು ಬರೆಯಬೇಕಿದೆ. ಮತ್ತೊಂದು ಪರೀಕ್ಷೆಯಲ್ಲಿ 1984ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಸ್ಥಾನವೆಷ್ಟು? ಅನ್ನೋ ಪ್ರಶ್ನೆಯನ್ನು ಕೇಳಲಾಗಿದೆ.
ಮೊದಲ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷ ಅಧಿಪತ್ಯ ಸಾಧಿಸಿದೆ? ಅನ್ನೋ ಪ್ರಶ್ನೆಯನ್ನು ಕೇಳಲಾಗಿದೆ. 1971ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪುನರುತ್ಥಾನ ಹೇಗಾಯ್ತು? ವಿವರಿಸಿ ಸೇರಿದಂತೆ 6 ಪ್ರಶ್ನೆಗಳನ್ನು ಕಾಂಗ್ರೆಸ್ ಸಾಧನೆ ವಿವರಿಸುವಂತೆ ಕೇಳಲಾಗಿದೆ.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಮಕ್ಕಳಲ್ಲೇ ಕಾಂಗ್ರೆಸ್ ಪ್ರೀತಿ ಹುಟ್ಟಿಸಲು ಭ್ರಷ್ಟಾಚಾರ, ಕೆಟ್ಟ ಆಡಳಿತ ಮರೆ ಮಾಚಿ ಸಾಧನೆಗಳನ್ನೇ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
6 ಲಕ್ಷ ವಿದ್ಯಾರ್ಥಿಗಳು ಮುಖ್ಯವೇ ಹೊರತು, 6 ವಿದ್ಯಾರ್ಥಿಗಳಲ್ಲ: ಸಚಿವ ನಾಗೇಶ್
ಕರ್ನಾಟಕದಲ್ಲಿ ಹಿಜಾಬ್ ವಿವಾದ
ಕರ್ನಾಟಕದಲ್ಲೂ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದೆ. ಉಡುಪಿಯಲ್ಲಿ ಹಿಜಾಬ್ ಹೋರಾಟ ಮಾಡಿದ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಾಸ್ಸಾಗಿದ್ದಾರೆ. ಹಿಜಾಬ್ ಅವಕಾಶ ನೀಡಲು ಪಟ್ಟು ಹಿಡಿದ ವಿದ್ಯಾರ್ಥಿಗಳ ಮನವಿಯನ್ನು ಶಾಲೆ ತಿರಸ್ಕರಿಸಿದೆ. ಪರಿಣಾಮ ಪರೀಕ್ಷೆ ಬರೆಯದೆ ವಾಪಾಸ್ಸಾಗಿದ್ದರು.
ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿದ್ದು, ಉಪನ್ಯಾಸಕರು, ಅಧಿಕಾರಿಗಳು ಧೈರ್ಯ ತುಂಬಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಬೆಂಗಳೂರು ನಗರ 5.83 ಲಕ್ಷ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಕೇಂದ್ರ, ಕೊಡಗು 6093 ವಿದ್ಯಾರ್ಥಿಗಳಿರುವ ಚಿಕ್ಕ ಕೇಂದ್ರ. ಉಳಿದಂತೆ ಪರೀಕ್ಷೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದೇನೆ. ಎಲ್ಲ ಜಿಲ್ಲೆಗಳಲ್ಲೂ ಉತ್ತಮವಾಗಿ ವ್ಯವಸ್ಥೆ ಮಾಡಿದ್ದಾರೆ. ಮೊದಲನೆ ದಿನ ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆಗಳಿದ್ದರೆ ಮುಂದೆ ಅದನ್ನು ಸರಿಪಡಿಸುವ ಕೆಲಸ ಇಲಾಖೆ ಮಾಡುತ್ತದೆ. ಅಧಿಕಾರಿಗಳು ಪರೀಕ್ಷೆಗಳನ್ನು ಉತ್ತಮವಾಗಿ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡು ವರ್ಷ ಪರೀಕ್ಷೆಗಳನ್ನು ಬರೆಯಲಾಗದೆ ಕೋರೊನಾ ನಂತರ ಮೊದಲ ಬಾರಿ ಪರೀಕ್ಷೆಗೆ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳು ಆತ್ಮವಿಶ್ವಾಸದಿಂದಿದ್ದಾರೆ. ಅವರ ಪಾಲಕರು ಧೈರ್ಯವಾಗಿ ಬೆನ್ನುತಟ್ಟಿಕಳುಹಿಸಿದರೆ ಪರೀಕ್ಷೆಯನ್ನು ಚೆನ್ನಾಗಿ ಬರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.