ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಜಡ್ಜ್ ಹುದ್ದೆಯಿಂದ ನಿವೃತ್ತರಾಗಿದ್ದ ಕರ್ನಾಟಕ ಮೂಲದ ನ್ಯಾ. ಎಸ್.ಅಬ್ದುಲ್ ನಜೀರ್ ಸೇರಿದಂತೆ 13 ಜನರನ್ನು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu)ನೇಮಿಸಿದ್ದಾರೆ.
ನವದೆಹಲಿ: ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಜಡ್ಜ್ ಹುದ್ದೆಯಿಂದ ನಿವೃತ್ತರಾಗಿದ್ದ ಕರ್ನಾಟಕ ಮೂಲದ ನ್ಯಾ. ಎಸ್.ಅಬ್ದುಲ್ ನಜೀರ್ ಸೇರಿದಂತೆ 13 ಜನರನ್ನು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu)ನೇಮಿಸಿದ್ದಾರೆ. ಈ ಪೈಕಿ 7 ಜನರನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದ್ದರೆ, 6 ಜನರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ನ್ಯಾ. ನಜೀರ್ ಅವರಿಗೆ ಆಂಧ್ರಪ್ರದೇಶ ರಾಜ್ಯಪಾಲ ಹುದ್ದೆ ನೀಡಲಾಗಿದೆ.
ಇದೇ ವೇಳೆ, ವಿವಾದಗಳಿಂದ ಸುದ್ದಿ ಮಾಡಿದ್ದ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ (Bhagatsingh Koshyari) ಮತ್ತು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ (d Ladakh Lieutenant Governor) ಆರ್.ಕೆ.ಮಾಥುರ್ ನೀಡಿದ್ದ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. ಇವರ ಜಾಗಕ್ಕೂ ಹೊಸಬರನ್ನು ನೇಮಿಸಲಾಗಿದೆ.
undefined
ಭಾರತದ ಅನ್ನ ತಿಂದವರು, ನೀರು ಕುಡಿದವರೆಲ್ಲರೂ ಹಿಂದುಗಳೇ, ನಾನೂ ಕೂಡ ಹಿಂದು: ಆರಿಫ್ ಮೊಹಮದ್!
ನೂತನ ರಾಜ್ಯಪಾಲರು:
ಅಯೋಧ್ಯೆ ವಿವಾದ ಸೇರಿದಂತೆ ಸುಪ್ರೀಂಕೋರ್ಟ್‌ನಲ್ಲಿ ಹಲವು ಮಹತ್ವದ ತೀರ್ಪು ನೀಡಿದ್ದ ನ್ಯಾ.ನಜೀರ್ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಉಳಿದಂತೆ ಲೆ.ಜ. ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ (Lt.J. Kaivalya Trivikram Parnaik) ಅವರನ್ನು ಅರುಣಾಚಲ ಪ್ರದೇಶದ ರಾಜ್ಯಪಾಲರನ್ನಾಗಿ, ಉಳಿದಂತೆ ಲಕ್ಷ್ಮಣ್ ಪ್ರಸಾದ್ ಆಚಾರ್ಯ (ಹಾಲಿ ಯುಪಿ ವಿಧಾನ ಪರಿಷತ್ ಸದಸ್ಯ) ಅವರನ್ನು ಸಿಕ್ಕಿಂ, ತಮಿಳುನಾಡು ಬಿಜೆಪಿ ಮುಖಂಡ ಸಿ.ಪಿ.ರಾಧಾಕೃಷ್ಣನ್ (CP Radhakrishnan) (ಕೊಯಮತ್ತೂರು ಕ್ಷೇತ್ರದಿಂದ 2 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು) ಅವರನ್ನು ಜಾರ್ಖಂಡ್, ಶಿವಪ್ರತಾಪ್ ಶುಕ್ಲಾ (ಮಾಜಿ ಕೇಂದ್ರ ಸಚಿವ) ಅವರನ್ನು ಹಿಮಾಚಲ ಪ್ರದೇಶ ಮತ್ತು ಗುಲಾಬ್ ಚಂದ್ ಕಟಾರಿಯಾ (ರಾಜಸ್ಥಾನ ವಿಧಾನಸಭೆಯ ವಿಪಕ್ಷ ನಾಯಕ, ಬಿಜೆಪಿ ಮುಖಂಡ) ಅವರನ್ನು ಅಸ್ಸಾಂನ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಕನ್ನಡಿಗ, ನಿವೃತ್ತ ಜಸ್ಟೀಸ್ ಎಸ್ ಅಬ್ದುಲ್ ನಜೀರ್ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕ
ವರ್ಗಾವಣೆಗೊಂಡವರು:
ಜಾರ್ಖಂಡ್ ರಾಜ್ಯಪಾಲರಾಗಿದ್ದ ರಮೇಶ್ ಬ್ಯಾಸ್ ಅವರನ್ನು ಮಹಾರಾಷ್ಟ್ರಕ್ಕೆ, ಆಂಧ್ರಪ್ರದೇಶದ ಹಾಲಿ ರಾಜ್ಯಪಾಲ ಬಿಶ್ವಭೂಷಣ್ ಹರಿಚಂದನ್ ಅವರನ್ನು ಛತ್ತೀಸ್‌ಗಢಕ್ಕೆ, ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ ಅವರನ್ನು ಲಡಾಖ್‌ಗೆ, ಛತ್ತೀಸ್‌ಗಢದ ರಾಜ್ಯಪಾಲ ಅನುಸೂಯಾ ಉಯ್ಕೆ ಅವರನ್ನು ಮಣಿಪುರಕ್ಕೆ, ಎಲ್. ಗಣೇಶನ್ ಅವರನ್ನು ಮಣಿಪುರದಿಂದ ನಾಗಾಲ್ಯಾಂಡ್‌ಗೆ, ಫಗು ಚೌಹಾಣ್ ಅವರನ್ನು ಬಿಹಾರದಿಂದ ಮೇಘಾಲಯಕ್ಕೆ ಮತ್ತು ರಾಜೇಂದ್ರ ಅರಳೇಕರ್ ಅವರನ್ನು ಹಿಮಾಚಲದಿಂದ ಬಿಹಾರಕ್ಕೆ ವರ್ಗ ಮಾಡಲಾಗಿದೆ.
ಹೊಸ ರಾಜ್ಯಪಾಲರು
ವರ್ಗಾವಣೆಗೊಂಡವರು