Aero India-2023ರಲ್ಲಿ 100ಕ್ಕೂ ಅಧಿಕ ದೇಶಗಳು ಭಾಗಿ: ಉದ್ಯೋಗಕ್ಕೆ ವಿಪುಲ ಅವಕಾಶ- ರಾಜನಾಥ್‌ ಸಿಂಗ್

By Sathish Kumar KH  |  First Published Feb 12, 2023, 7:19 PM IST

ಏರೋ ಇಂಡಿಯಾ-2023ರಲ್ಲಿ 100ಕ್ಕೂ ಅಧಿಕ ದೇಶಗಳು ಭಾಗವಹಿಸುತ್ತಿವೆ.  ನಮ್ಮ ಉತ್ಪಾದನೆ ಹಾಗು ಕೌಶಲ್ಯಗಳ ಪ್ರದರ್ಶನ ಮಾಡುವುದಕ್ಕೆ ಸೂಕ್ತ ವೇದಿಕೆ ಆಗಲಿದ್ದು, ವಿಪುಲ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ.


ಬೆಂಗಳೂರು (ಫೆ.12):  ಬೆಂಗಳೂರಿನಲ್ಲಿ ಈ ವರ್ಷ ಆಯೋಜನೆ ಮಾಡುತ್ತಿರುವ ಏರೋ ಇಂಡಿಯಾ-2023ರಲ್ಲಿ ಜಗತ್ತಿನ 100 ಕ್ಕೂ ಅಧಿಕ ಫ್ರೆಂಡ್ಲಿ ದೇಶಗಳು ಭಾಗವಹಿಸುತ್ತಿವೆ. ಕಳೆದ ಎಲ್ಲ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಶೋ ಮುರಿಯಲಿದೆ. ನಮ್ಮ ಉತ್ಪಾದನೆ ಹಾಗು ಕೌಶಲ್ಯಗಳ ಪ್ರದರ್ಶನ ಮಾಡುವುದಕ್ಕೆ ಸೂಕ್ತ ವೇದಿಕೆ ಆಗಲಿದ್ದು, ವಿಪುಲ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ತಿಳಿಸಿದ್ದಾರೆ.

ಏರೋ ಇಂಡಿಯಾ- 2023ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಏರೋ ಶೋ ಬಗ್ಗೆ ಸಿದ್ಧತೆ, ಸಾರ್ವಜನಿಕರಿಗೆ ಮಾಹಿತಿ, ಗಣ್ಯರ ಉಪಸ್ಥಿತಿ, ಕಂಪನಿಗಳ ಭಾಗಿ, ಒಪ್ಪಂದಗಳ ಬಗ್ಗೆ ಸುದ್ದಿಗೋಷ್ಠಿಯ ಮೂಲಕ ಮಾಹಿತಿ ಹಂಚಿಕೊಂಡರು. ಈ ಬಗ್ಗೆ ಮಾತನಾಡಿದ ಅವರು, ಏರೋ ಇಂಡಿಯಾ ದೇಶದ ಐಟಿ ಕ್ಯಾಪಿಟಲ್ ನಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು, ಲೀಡರ್‌ಗಳು ಆಗಮಿಸುತ್ತಿದ್ದಾರೆ. ನಮ್ಮ ಉತ್ಪಾದನೆ ಹಾಗು ಕೌಶಲ್ಯಗಳ ಪ್ರದರ್ಶನ ಮಾಡೋಕೆ ಇದು ವೇದಿಕೆಯಾಗಿದೆ.2020ರಲ್ಲಿ ನಾವು ತುಂಬಾ ದೊಡ್ಡ ಈವೆಂಟ್ ಪ್ಲಾನ್ ಮಾಡಿದ್ದೆವು. ಆದರೆ, ಈ‌ ಬಾರಿ ಅದಕ್ಕಿಂತ ದೊಡ್ಡ ಈವೆಂಟ್ ನಡೆಯಲಿದೆ. 100 ಕ್ಕೂ ಅಧಿಕ ಫ್ರೆಂಡ್ಲಿ ದೇಶಗಳು ಈ ಶೋನಲ್ಲಿ ಭಾಗಿಯಾಗುತ್ತಿದ್ದು, ಕಳೆದ ಎಲ್ಲ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಶೋ ಮುರಿಯಲಿದೆ ಎಂದರು.

Tap to resize

Latest Videos

ನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

32 ದೇಶಗಳ ರಕ್ಷಣಾ ಸಚಿವರು ಏರ್ ಶೋದಲ್ಲಿ‌ ಭಾಗಿ: ಇನ್ನು ಏರೋ ಶೋನ ಎರಡನೇ ದಿನವಾದ ಫೆಬ್ರವರಿ 14 ರಂದು 32 ದೇಶಗಳ ರಕ್ಷಣಾ ಸಚಿವರು ಏರ್ ಶೋದಲ್ಲಿ‌ ಭಾಗವಹಿಸಲಿದ್ದಾರೆ. ಅಂದು ಸಿಇಒ ರೌಂಡ್ ಟೇಬಲ್‌ ಮೀಟ್‌ ಕೂಡ ಆಯೋಜಿಸಲಾಗಿದೆ. ಒಂದೇ ದಿನದಲ್ಲಿ ಒಟ್ಟು ಒಟ್ಟು 73 ಕಂಪನಿಗಳು ಭಾಗಿಯಾಗಲಿವೆ. ಇದರಲ್ಲಿ 27 ಭಾರತೀಯ ಕಂಪನಿಗಳು‌‌ ಭಾಗವಹಿಸಲಿವೆ.  ಇನ್ನು ಮೂರು ದಿನಗಳಲ್ಲಿ ಒಟ್ಟು 9 ಸೆಮಿನಾರ್‌ಗಳ ಆಯೋಜನೆ ಮಾಡಲಾಗಿದೆ. ಇದರಲ್ಲಿ 1ನೇ‌ ಸೆಮಿನಾರ್‌ನಲ್ಲಿ ಮಾಜಿ ಯೋಧರನ್ನು ವಾಪಸ್ ಹೇಗೆ ಬಳಸಿಕೊಳ್ಳಬಹುದು ಎಂದು ಚರ್ಚೆ ಮಾಡಲಾಗುತ್ತದೆ. 251 ಕ್ಕೂ‌ ಹೆಚ್ಚು ಒಪ್ಪಂದಗಳನ್ನು ನಿರೀಕ್ಷೆ ಮಾಡಲಾಗಿದೆ. ಒಪ್ಪಂದಗಳಿಂದ 75,000 ಕೋಟಿ ವ್ಯಾಪಾರ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ ರಾಜ್ಯ ಸರ್ಕಾರದ ಜತೆ 32 ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದರು.

ರಕ್ಷಣಾ ಸಚಿವರ ಕಾನ್‌ಕ್ಲೇವ್‌ ಆಯೋಜನೆ: ಕರ್ನಾಟಕ ದೇಶದ‌ ಎಕಾನಾಮಿಕ್ ಕಾಂಟ್ರೀಬ್ಯೂಶನ್ ನೀಡೋದ್ರಲ್ಲಿ ಮೇಲಿನ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೇನೆಗೆ ಬೇಕಾದ ಅನೇಕ ಕಂಪನಿಗಳಿಗೆ ಜಾಗ ನೀಡಿದೆ. ಐಟಿ ಹಾಗೂ ಉತ್ಪಾದನಾ ಕ್ಯಾಪಿಟಲ್ ಆಗಿದೆ. ಏರೋ ಇಂಡಿಯಾ ಶೋ ವಿಂಗ್ಸ್ ಆಫ್ ದ ಫ್ಯೂಚರ್ ಹೆಸರನಲ್ಲಿ ಇಂಡಿಯಾ‌ ಪೆವಿಲಿಯನ್ ಕಾಣಲಿದೆ. ಸ್ಟಾರ್ಟ್ ಅಪ್ ಗಳು ತಮ್ಮ ಕಲೆಯನ್ನು ಇಲ್ಲಿ‌ ಪ್ರದರ್ಶಿಸಲಿವೆ. ಡಿಫೆನ್ಸ್ ಮಿನಿಸ್ಟರ್‌ಗಳ ಕಾನ್‌ಕ್ಲೇವ್‌ ಇರಲಿದೆ. ಸ್ಪೀಡ್ ಕಾನ್‌ಕ್ಲೇವ್ ಆಯೋಜಿಸಲಾಗಿದೆ. ಸೈಬರ್ ಸೆಕ್ಯೂರಿಟಿ, ಆಗ್ಯುಮೆಂಟೆಡ್ ರಿಯಾಲಿಟಿ ಸೇರಿದಂತೆ ಅನೇಕ ಹೊಸತನಗಳನ್ನು ಇಲ್ಲಿ ಕಾಣಬಹುದು ಎಂದು ಮಾಹಿತಿ ನೀಡಿದರು.

Aero India-2023: ನಾಲ್ಕು ದಿನ ಬೆಂಗಳೂರಿನ ಪ್ರಮುಖ ರಸ್ತೆಗಳು ಬಂದ್‌: ಮಾರ್ಗ ಬದಲಾವಣೆ ವಿವರ ಇಲ್ಲಿದೆ

ಸಾರ್ವಜನಿಕರ ವೀಕ್ಷಣೆಗೆ ಸುಸಜ್ಜಿತ ವ್ಯವಸ್ಥೆ:  ಸಾರ್ವಜನಿಕರಿಗೆ ಸ್ಯಾಟಲೈಟ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗಾಂಧಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ) ಹಾಗೂ ಜಕ್ಕೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಏರೋ ಇಂಡಿಯಾ ಶೋಗೆ ಬರಲು ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳಿನ ಉದ್ಘಾಟನೆ ಕಾರ್ಯಕ್ರಮಕ್ಕೆ 4000 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಇಂಡಿಯಾ ಪೆವಿಲಿಯನ್‌ನಲ್ಲಿ 115 ಕಂಪನಿಗಳು ಭಾಗವಹಿಲಸಿವೆ. ಇಲ್ಲಿ 227  ಪ್ರಾಡಕ್ಟ್ ಗಳ‌ ಪ್ರದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌, ಅಜಯ್ ಭಟ್, ಗಿರಿಧರ್ ಅರಮಾನೆ, ವಂದಿತಾ ಶರ್ಮ, ಇವಿಎಂ ರಮಣ ರೆಡ್ಡಿ, ಗೌರವ್ ಗುಪ್ತ, ಟಿ. ನಟರಾಜನ್, ಅನುರಾಗ್ ಭಾಜಪೇಯಿ ಹಾಗೂ ಅಚಲ್ ಮಲ್ಹೋತ್ರ ಉಪಸ್ಥಿತಿ ಇದ್ದರು.

ಏರೋ ಇಂಡಿಯಾ ವಿಶೇಷತೆಗಳು:

  • 35,000 ಚದರ ಅಡಿಗಳಲ್ಲಿ ಎಕ್ಸಿಬಿಶನ್ ಆಯೋಜನೆ
  • 67 ಫ್ಲೈಯಿಂಗ್  ಡಿಸ್‌ಪ್ಲೇ
  • 36 ಸ್ಟಾಂಡಿಂಗ್ ಡಿಸ್ ಪ್ಲೇ
  • 809 ಪ್ರದರ್ಶಕರು
  • 98 ವಿದೇಶಿ ಕಂಪನಿಗಳು ಭಾಗಿ 
  • 251  ಒಪ್ಪಂದಗಳು
click me!