Jackfruit Tree: ಶಿವಗಿರಿ ಮಠದಲ್ಲಿರುವ 122 ವರ್ಷದ ಹಲಸಿನ ಮರಕ್ಕೆ ಚಿಕಿತ್ಸೆ, ಗುರುವಿನ ಸ್ಪರ್ಶ ಕ್ಕೆ ಮತ್ತೆ ಚಿಗುರಿದೆ!

Published : Mar 22, 2026, 09:11 AM IST
122 Year Old Sacred Jackfruit Tree at Sivagiri Mutt Recovers After Treatment

ಸಾರಾಂಶ

ivagiri Mutt Jackfruit Tree: ತಿರುವನಂತಪುರಂನ ಶಿವಗಿರಿ ಮಠದಲ್ಲಿರುವ 122 ವರ್ಷದ ಹಳೆಯ ಹಲಸಿನ ಮರಕ್ಕೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಶ್ರೀ ನಾರಾಯಣ ಗುರುಗಳ ಸ್ಪರ್ಶ ಪಡೆದ ಈ ಮರವು 50 ದಿನಗಳ ಚಿಕಿತ್ಸೆಯ ನಂತರ ಮತ್ತೆ ಆರೋಗ್ಯದಿಂದ ಕಂಗೊಳಿಸುತ್ತಿದೆ.

ತಿರುವನಂತಪುರಂ: ಮಹಾಸಮಾಧಿ ಮಂದಿರದ ಪಕ್ಕದಲ್ಲಿಯೇ ಇರುವ 'ಅಜ್ಜಿ ಹಲಸಿನ ಮರ' ತನ್ನ ವಯೋಸಹಜ ಕಾಯಿಲೆಗಳಿಂದ ಒಣಗಿಹೋಗಿದ್ದ ಮರ ಈಗ ಚೇತರಿಸಿಕೊಂಡಿದೆ. ಶ್ರೀ ನಾರಾಯಣ ಗುರುದೇವರ ಕೈ ಸ್ಪರ್ಶ ಪಡೆದ ಈ ಮರಕ್ಕೆ 50 ದಿನಗಳ ಹಿಂದೆ ಚಿಕಿತ್ಸೆ ಆರಂಭಿಸಲಾಗಿತ್ತು. ಈಗ ಮರವು ಮತ್ತೆ ಆರೋಗ್ಯವಾಗಿರುವುದನ್ನು ಕಂಡು ಮಠದ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಪರಿಸರವಾದಿ ಹಾಗೂ 'ವೃಕ್ಷ ವೈದ್ಯ' ಎಂದೇ ಹೆಸರಾದ ಕೆ. ಬಿನು ಅವರ ನೇತೃತ್ವದಲ್ಲಿ 122 ವರ್ಷ ಹಳೆಯ ಈ ಮರಕ್ಕೆ ಚಿಕಿತ್ಸೆ ನೀಡಲಾಗಿತ್ತು.

ಶ್ರೀನಾರಾಯಣ ಧರ್ಮಸಂಘಂ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಶುಭಂಗಾನಂದ ಅವರು ಮರಕ್ಕೆ ಔಷಧಿ ಲೇಪಿಸುವ ಮೂಲಕ ಚಿಕಿತ್ಸೆಗೆ ಚಾಲನೆ ನೀಡಿದ್ದರು. ಮಠದ ಅಧ್ಯಕ್ಷರಾದ ಸಚ್ಚಿದಾನಂದ ಸ್ವಾಮಿ, ಖಜಾಂಚಿ ಶಾರದಾನಂದ ಸ್ವಾಮಿ ಹಾಗೂ ಇತರ ಹಿರಿಯ ಸ್ವಾಮೀಜಿಗಳು ಪ್ರತಿದಿನ ಚಿಕಿತ್ಸೆಯ ಪ್ರಗತಿಯನ್ನು ಗಮನಿಸುತ್ತಿದ್ದರು. ಕರುನಾಗಪಳ್ಳಿಯ ನಿವಾಸಿಯಾಗಿರುವ ಗುರುದೇವರ ಭಕ್ತ ಎಸ್. ಅಜಯಕುಮಾರ್ ಅವರು ವೈದ್ಯರ ಸಲಹೆಯಂತೆ ಮರದ ಆರೈಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಹಸುವಿನ ಹಾಲು, ಎಳ್ಳು, ಸಣ್ಣ ಜೇನು, ಕದಳಿ ಬಾಳೆಹಣ್ಣು, ಬೆಲ್ಲ ಸೇರಿದಂತೆ ಸುಮಾರು 20 ಬಗೆಯ ವಸ್ತುಗಳನ್ನು ಬಳಸಿ ತಯಾರಿಸಿದ ವಿಶೇಷ ಔಷಧೀಯ ಮಿಶ್ರಣವನ್ನು ಚಿಕಿತ್ಸೆಗಾಗಿ ಬಳಸಲಾಗಿದೆ. ಆರೋಗ್ಯದಿಂದ ಕಂಗೊಳಿಸುತ್ತಿರುವ ಈ ಮರವನ್ನು ನೋಡಲು ಶಿವಗಿರಿಗೆ ಬರುವ ಭಕ್ತರು ಬಹಳ ಕುತೂಹಲ ತೋರುತ್ತಿದ್ದಾರೆ. ವಿಶೇಷವೆಂದರೆ, ಈ ಬಾರಿ ಮರದಲ್ಲಿ ಸಾಕಷ್ಟು ಹಲಸಿನಕಾಯಿಗಳು ಕೂಡ ಬಿಟ್ಟಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಸ್ಪತ್ರೆ ಎಕ್ಸ್‌ರೇ ಕೋಣೆಯಲ್ಲಿ ವಿವಸ್ತ್ರ ಮಹಿಳೆಯರ ವಿಡಿಯೋ ಸೆರೆ ಹಿಡಿಯುತ್ತಿದ್ದ ಚಾಲಕ, ಕೇಸ್ ಆಗಲೇ ಇಲ್ಲ
ದೇಶದಲ್ಲಿ ಭಾರೀ ಮಳೆ, ಬಿರುಗಾಳಿ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ