ದೇಶದಲ್ಲಿ ಭಾರೀ ಮಳೆ, ಬಿರುಗಾಳಿ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

Kannadaprabha News   | Kannada Prabha
Published : Mar 22, 2026, 08:11 AM IST
 IMD Rain

ಸಾರಾಂಶ

ದೇಶದಲ್ಲಿ ಬೇಸಿಗೆ ನಿಧಾನಕ್ಕೆ ಕಾಲಿಟ್ಟಿರುವ ನಡುವೆ ಹಲವು ರಾಜ್ಯಗಳಲ್ಲಿ ಮಾ.24ರ ತನಕ ಗುಡುಗು, ಆಲಿಕಲ್ಲು ಸಹಿತ ಮಹಿಳೆ ಸಂಭವಿಸಬಹುದು. ಜತೆಗೆ ಪ್ರಬಲ ಬಿರುಗಾಳಿಯೂ ಬೀಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನವದೆಹಲಿ: ದೇಶದಲ್ಲಿ ಬೇಸಿಗೆ ನಿಧಾನಕ್ಕೆ ಕಾಲಿಟ್ಟಿರುವ ನಡುವೆ ಹಲವು ರಾಜ್ಯಗಳಲ್ಲಿ ಮಾ.24ರ ತನಕ ಗುಡುಗು, ಆಲಿಕಲ್ಲು ಸಹಿತ ಮಹಿಳೆ ಸಂಭವಿಸಬಹುದು. ಜತೆಗೆ ಪ್ರಬಲ ಬಿರುಗಾಳಿಯೂ ಬೀಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪಶ್ಚಿಮ ಬಂಗಾಳ, ಸಿಕ್ಕಿಂ , ಒಡಿಶಾ ಭಾಗದಲ್ಲಿ ಆಲಿಕಲ್ಲು ಸಹಿತ ವ್ಯಾಪಕ ಮಳೆ

ಮಾ.24ರ ತನಕ ಪಶ್ಚಿಮ ಬಂಗಾಳ, ಸಿಕ್ಕಿಂ , ಒಡಿಶಾ ಭಾಗದಲ್ಲಿ ಆಲಿಕಲ್ಲು ಸಹಿತ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈ ವೇಳೆ ಗಾಳಿಯ ಅಬ್ಬರವೂ 70-80 ಕಿ.ಮೀ ವೇಗದಲ್ಲಿದ್ದು ಜನರು ಎಚ್ಚರವಾಗಿರುವಂತೆ ಸೂಚನೆ ನೀಡಿದೆ. ಇದು ಮಾತ್ರವಲ್ಲದೇ ಈಶಾನ್ಯ, ಉತ್ತರ ಭಾರತದ ಇನ್ನೂ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅತಿಯಾದ ತಾಪಮಾನದಿಂದ ಹೈರಾಣ

ಇದರ ನಡುವೆಯೇ ಅತಿಯಾದ ತಾಪಮಾನದಿಂದ ಹೈರಾಣಾಗಿದ್ದ ದೆಹಲಿಯಲ್ಲಿ ಶುಕ್ರವಾರದಿಂದ ಮಳೆಯಾಗುತ್ತಿದ್ದು, ತಾಪಮಾನದಲ್ಲಿಯೂ 2-3 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಇಳಿಕೆ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಕರ್ನಾಟಕದಲ್ಲಿ ಬಿಸಿ ವಾತಾವರಣ: ದಕ್ಷಿಣ ಭಾರತದ ಹಲವೆಡೆ ಚದುರಿದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಕರ್ನಾಟಕ, ಗೋವಾ ಮತ್ತು ಕೇರಳದಲ್ಲಿ ಬಿಸಿ ಮತ್ತು ಆದ್ರತೆಯ ವಾತವರಣ ಇರಬಹುದು ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಯುದ್ಧದ ಹೊಡೆತ,ಭಾರತದಲ್ಲಿ ವಿಮಾನ ಟಿಕೆಟ್ ದರ ಏರಿಕೆ ಆತಂಕ
ಮಧ್ಯಪ್ರಾಚ್ಯದ ಮೂಲ ಸೌಕರ್ಯ ಹಾನಿಗೆ ಪ್ರಧಾನಿ ಮೋದಿ ಆಕ್ಷೇಪ