12 Rajya Sabha MPs suspended: ಆಗ ಗಲಾಟೆ ಮಾಡಿದ್ದವರಿಗೆ ಈಗ ಸಸ್ಪೆಂಡ್ ಶಿಕ್ಷೆ

Published : Nov 30, 2021, 03:45 AM IST
12 Rajya Sabha MPs suspended: ಆಗ ಗಲಾಟೆ ಮಾಡಿದ್ದವರಿಗೆ ಈಗ ಸಸ್ಪೆಂಡ್ ಶಿಕ್ಷೆ

ಸಾರಾಂಶ

* 4 ತಿಂಗಳ ಹಿಂದಿನ ಗದ್ದಲ ಕೇಸ್ * 12 ರಾಜ್ಯಸಭಾ ಸದಸ್ಯರ ಅಮಾನತು! * ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ: ವಿಪಕ್ಷಗಳ ಕಟುಟೀಕೆ * ರಾಜ್ಯಸಭೆಯಲ್ಲಿ ಕೋಲಾಹಲ ಎದ್ದಿದ್ದ ಪ್ರಕರಣ

ನವದೆಹಲಿ(ನ. 30)  ಕಳೆದ ಸಂಸತ್‌ ಅಧಿವೇಶನದ ಕೊನೆಯ ದಿನ ರಾಜ್ಯಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿ, ಆಶಿಸ್ತು ತೋರಿದ ಪ್ರಕರಣ ಸಂಬಂಧ ರಾಜ್ಯಸಭೆಯ 12 ಸದಸ್ಯರನ್ನು, ಪ್ರಸಕ್ತ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಿ ರಾಜ್ಯಸಭೆ ನಿರ್ಧಾರ ಕೈಗೊಂಡಿದೆ. ಆದರೆ ಸರ್ಕಾರದ ನಿರ್ಧಾರವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ವಿಪಕ್ಷಗಳು ಟೀಕಿಸಿವೆ. ಅಲ್ಲದೆ ಈ ವಿಷಯದಲ್ಲಿ ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸಲು ಮಂಗಳವಾರ ಬೆಳಗ್ಗೆ ಸಭೆ ಸೇರಲು ಕಾಂಗ್ರೆಸ್‌, ಟಿಎಂಸಿ, ಶಿವಸೇನೆ ನಿರ್ಧರಿಸಿವೆ.

ಏನಾಗಿತ್ತು?:  ಕಳೆದ ಅಧಿವೇಶನದ ಆ.11ರ ಕಲಾಪದಲ್ಲಿ ಪೆಗಾಸಸ್‌ ವಿಚಾರವಾಗಿ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದ ವಿಪಕ್ಷಗಳು ಸದನದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದ್ದವು. ಕೆಲ ಸದಸ್ಯರು ಕಾಗದ ಪತ್ರಗಳನ್ನು ಹರಿದು ತೂರಾಡಿ, ಸಭಾಪತಿ ಪೀಠದತ್ತ ನುಗ್ಗಲು ಯತ್ನಿಸಿದ್ದರು. ಈ ವೇಳೆ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಲಾಗಿತ್ತು. ಆದರೆ ಅಧಿವೇಶನ ಮುಕ್ತಾಯಗೊಂಡ ಕಾರಣ ಆಗ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ.

ಅಮಾನತು:  ಸೋಮವಾರ ಮಧ್ಯಾಹ್ನ ಕಲಾಪ ಆರಂಭವಾಗುತ್ತಲೇ ಆಶಿಸ್ತು ತೋರಿಸಿದ ಸದಸ್ಯರನ್ನು ಅಮಾನತು ಮಾಡುವ ಗೊತ್ತುವಳಿಯನ್ನು ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ಮಂಡಿಸಿದರು. ಅದನ್ನು ವಿಪಕ್ಷಗಳ ಗದ್ದಲದ ನಡುವೆಯೇ ರಾಜ್ಯಸಭೆ ಧ್ವನಿಮತದಿಂದ ಅಂಗೀಕರಿಸಿತು.

ಮಮತಾ ಭೇಟಿ ಮಾಡಿದ ಸುಬ್ರಮಣಿಯನ್ ಸ್ವಾಮಿ

ಕಾಂಗ್ರೆಸ್‌ನ ದೇವಿ ನೇತಂ, ಚಾಯಾ ವರ್ಮಾ, ರುಪಿನ್‌ ಬೋರಾ, ರಾಜಮಣಿ ಪಟೇಲ್‌, ಸೈಯ್ಯದ್‌ ನಾಸಿರ್‌, ಅಖಿಲೇಶ್‌ ಪ್ರಸಾದ್‌ ಸಿಂಗ್‌, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಅನಿಲ್‌ ದೇಸಾಯಿ ಟಿಎಂಸಿಯ ದೋಲಾ ಸೇನ್‌, ಶಾಂತ ಚೆತ್ರಿ ಹಾಗೂ ಸಿಪಿಎಂನ ಎಲಮಾರಂ ಕರೀಮ್‌, ಸಿಪಿಐ ಪಕ್ಷದ ವಿಶ್ವಂ ಅಧಿವೇಶನದಿಂದ ಅಮಾನತುಗೊಂಡವರು.

ಕರ್ನಾಟಕದ ವಿಧಾನ ಪರಿಷತ್ ನಲ್ಲಿಯೂ  ಇಂಥದ್ದೇ ಘಟನೆ ನಡೆದಿತ್ತು.  ರಾಷ್ಟ್ರದ ಹಲವು ರಾಜ್ಯಗಳ ಸ್ಪೀಕರ್ ಗಳು ಸಭೆ  ನಡೆಸಿ ಶಿಸ್ತು ಪಾಲನೆ ಸಂಬಂಧ ನೀತಿ ನಿಯಮ ರೂಪಣೆ ಮಾಡಿಕೊಂಡಿದ್ದರ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದರು. 

ನವೆಂಬರ್ 17 ಮತ್ತು 18 ರಂದು ಹಿಮಾಚಲ ಪ್ರದೇಶದ(Himachal Pradesh) ಶಿಮ್ಲಾ ದಲ್ಲಿ  ಎಲ್ಲ ರಾಜ್ಯಗಳ ಸ್ಪೀಕರ್ ಗಳ ಸಭೆ ನಡೆಯಿತು. 27 ರಾಜ್ಯಗಳ ವಿಧಾನಸಭಾಧ್ಯಕ್ಷರು,  ಸಚಿವಾಲಯದ ಕಾರ್ಯದರ್ಶಿಗಳು ಅಧಿಕಾರಿಗಳು ಭಾಗವಹಿಸಿದ್ದರು. ಅತ್ಯಂತ ಯಶಸ್ವಿಯಾಗಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಎರಡು ವಿಷಯಗಳ ಬಗ್ಗೆ ವಿಶೇಷ ಚರ್ಚೆ ನಡೆದಿದೆ. ಶತಮಾನದ ಪಯಣ, ನಡೆಯಬೇಕಾದ ಮಾರ್ಗದ ಬಗ್ಗೆ ಚರ್ಚೆ ನಡೆಯಿತು. ಸಂವಿಧಾನ,ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಪೀಠಾಸಿನಾಧಿಕಾರಿಗಳ ಜವಾಬ್ದಾರಿ ಬಗ್ಗೆ ನಾನು ಮಾತನಾಡಿದ್ದೆ ರಾಜ್ಯದಲ್ಲಿ ನಡೆದ ರೀತಿಯಲ್ಲೇ ಹಿಮಾಚಲ ಪ್ರದೇಶ ವಿಧಾನಸಭಾ ಸಮ್ಮೇಳನ ಸಭಾಂಗಣದಲ್ಲಿ ಲೋಕಸಭೆ (Loksabha) ಸ್ಪೀಕರ್ ಎಲ್ಲರನ್ನೂ ಉದ್ದೆಶಿಸಿ ಮಾತನಾಡಿದರು ಎಂದು  ಕಾಗೇರಿ ತಿಳಿಸಿದ್ದರು.

ಇಲ್ಲಿ ಮಾಡಿದಂತೆ ಯಾರೂ ಅಲ್ಲಿ ವಿವಾದ ಮಾಡದೇ ಪ್ರಬುದ್ದವಾಗಿ ನಡೆದುಕೊಂಡರು. ಇನ್ಮುಂದೆ ವರ್ಷದಲ್ಲಿ ಎರಡು ಬಾರಿ  ಸಮ್ಮೇಳನ ಮಾಡಲು ನಿರ್ಧರಿಸಲಾಗಿದೆ. ಒಂದು ದೆಹಲಿಯಲ್ಲಿ, ಮತ್ತೊಂದು ಬೇರೆ ರಾಜ್ಯದಲ್ಲಿ ಮಾಡಬೇಕು ಎಂದು ನಿರ್ಧರಿಸಲಾಗಿದೆ. ರಾಷ್ಟ್ರಪತಿಗಳು, ರಾಜ್ಯಪಾಲರು ವಿಧಾನ ಸಭೆಯಲ್ಲಿ ಭಾಷಣ ಮಾಡುವಾಗ, ಗದ್ದಲಗಳಾಗದಂತೆ ಎಚ್ಚರ ವಹಿಸಲು ನಿರ್ಧರಿಸಲಾಗಿದೆ ಎಂದರು.

ಅಧಿವೇಶನ; ಬೆಳಗಾವಿಯ (Belagavi) ಸುವರ್ಣ ಸೌಧದಲ್ಲಿ (Suvarna Soudha)  ಡಿ. 13 ರಿಂದ 24 ರ ವರೆಗೆ ಅಧಿವೇಶನ (Karnataka assembly session)  ನಡೆಯಲಿದೆ. ಪ್ರವಾಹ ಮತ್ತು ಕೋವಿಡ್ (Coronavirus) ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿರಲಿಲ್ಲ. ಈಗ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ