1918ರಲ್ಲಿ ಸ್ವಾನೀಶ್ ಜ್ವರ ಗೆದ್ದ, 2020ರಲ್ಲಿ ಕೊರೋನಾ ಮೆಟ್ಟಿನಿಂತ 106 ವರ್ಷದ ದೆಹಲಿ ವೃದ್ಧ!

Published : Jul 06, 2020, 03:50 PM IST
1918ರಲ್ಲಿ ಸ್ವಾನೀಶ್ ಜ್ವರ ಗೆದ್ದ, 2020ರಲ್ಲಿ ಕೊರೋನಾ ಮೆಟ್ಟಿನಿಂತ 106 ವರ್ಷದ ದೆಹಲಿ ವೃದ್ಧ!

ಸಾರಾಂಶ

ಕೊರೋನಾ ವೈರಸ್ ಹೆಚ್ಚಾಗುತ್ತಿದ್ದಂತೆ ದೆಹಲಿಯ ಕುಟುಂಬವೊಂದು ಎಚ್ಚರಿಕೆ ವಹಿಸಿತ್ತು. ಆದರೆ ಕೊರೋನಾ ಬಿಡಬೇಕಿಲ್ಲ. ಕುಟುಂಬದ 106 ವರ್ಷದ ವೃದ್ಧ, ಆತನ ಪುತ್ರ, ಮೊಮ್ಮಕ್ಕಳು ಸೇರಿದಂತೆ ಕೆಲವರಿಗೆ ಕೊರೋನಾ ಸೋಂಕು ಖಚಿತಗೊಂಡಿತ್ತು. ಕುಟುಂಬ ಸದಸ್ಯರು ಆಸ್ಪತ್ರೆ ದಾಖಲಾದರು. ಕುಟುಂಬದಲ್ಲಿನ ಯುಲಕರು, ಆರೋಗ್ಯವಂತರು ಇನ್ನೂ ಚೇತರಿಸಿಕೊಂಡಿಲ್ಲ ಆದರೆ 106 ವರ್ಷದ ವೃದ್ಧ ಕೊರೋನಾ ಗೆದ್ದು ಮನೆಗೆ ವಾಪಾಸ್ಸಾಗಿದ್ದಾರೆ. ಈ ವೃದ್ಧನ ರೋಚಕ ಕತೆ ಕೇಳಿದರೆ ರೋಮಾಂಚನವಾಗಲಿದೆ.

ದೆಹಲಿ(ಜು.06): ರೋಗ ನಿರೋಧಕ ಶಕ್ತಿ ಇದ್ದ ದೆಹಕ್ಕೆ ಕೊರೋನಾ ವೈರಸ್ ಬಹುಬೇಗನೆ ವಕ್ಕರಿಸುವುದಿಲ್ಲ. ಹೀಗಾಗಿ ಮಕ್ಕಳು, ವೃದ್ಧರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ, ಕೇಂದ್ರ ಸರ್ಕಾರ ಪದೇ ಪದೇ ಹೇಳುತ್ತಿದೆ. ಇದೀಗ ದೆಹಲಿಯ 106 ವರ್ಷದ ವೃದ್ಧ ಕೊರೋನಾ ವೈರಸ್ ತಗುಲಿ ಆಸ್ಪತ್ರೆ ಸೇರಿದ್ದರು. ಆದರೆ ಅಷ್ಟೇ ಬೇಗನೆ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಆದರೆ ವೃದ್ಧನ ಜೊತೆ ಆಸ್ಪತ್ರೆ ಸೇರಿದ್ದ ಮಕ್ಕಳು, ಕುಟುಂಬ ಸದಸ್ಯರು ಇನ್ನೂ ಚೇತರಿಸಿಕೊಂಡಿಲ್ಲ.

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ರೆಡಿಯಾಗ್ತಿದೆ ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್

ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಕೊರೋನಾ ಚಿಕಿತ್ಸೆ ಪೆಡದು ಬಹುಬೇಗನೆ ಗುಣಮುಖರಾದ 106 ವರ್ಷದ ವೃದ್ಧನ ಆರೋಗ್ಯ ಕಂಡು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದರೆ ಇದೇ ವೃದ್ಧ 4 ವರ್ಷ ವಯಸ್ಸಿದ್ದಾಗ, ವಿಶ್ವವನ್ನೇ ನಲುಗಿಸಿದ್ದ ಸ್ಪಾನೀಶ್ ಜ್ವರದಿಂದ ಬಳಲಿದ್ದ. 1918ರಲ್ಲಿ ಬಳಿಕ ಸ್ಪಾನಿಶ್ ಜ್ವರದಿಂದ ಚೇತರಿಸಿಕೊಂಡಿದ್ದ ವೃದ್ಧ ಇದೀಗ ತಮ್ಮ 106ನೇ ವಯಸ್ಸಿನಲ್ಲಿ ಕೊರೋನಾ ವೈರಸ್‌ನಿಂದಲೂ ಗೆದ್ದಿದ್ದಾರೆ.

 ರಾಜ್ಯದ ಮತ್ತೊಬ್ಬ ಶಾಸಕನಿಗೆ ಕೊರೋನಾ ದೃಢ..!

1918-19ರಲ್ಲಿ ಸ್ಪಾನೀಶ್ ಫ್ಲೂ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಈ ಜ್ವರದಿಂದ ವಿಶ್ವದಲ್ಲಿ ಸುಮಾರು 4 ಕೋಟಿ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಪಾನಿಶ್ ಜ್ವರ ಕಾಣಿಸಿಕೊಂಡಿತ್ತು.  ಭಾರತದ ಇತರ ಭಾಗಗಳಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಆದರೆ 1918ರ ಸಮಯದಲ್ಲಿ ಆಸ್ಪತ್ರೆ ಹಾಗೂ ರೋಗಿಗಳ ವಿವರ ದಾಖಲಿಸವು ವ್ಯವಸ್ಥೆ ಭಾರತದ ಎಲ್ಲಾ ಭಾಗಗಳಲ್ಲಿ ಇರಲಿಲ್ಲ. 

ಇದೀಗ ಕೊರೋನಾ ವೈರಸ್, 102 ವರ್ಷಗಳ ಹಿಂದೆ ಸ್ಪಾನೀಶ್ ಜ್ವರದಿಂದ ಚೇತರಿಸಿಕೊಂಡಿದ್ದ ವೃದ್ಧನ ಆರೋಗ್ಯ, ಮನಸ್ಸು ಉತ್ತಮವಾಗಿದೆ ಎಂದು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?