ಕೇರಳದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ| ವಿವಾಹಕ್ಕೆ 50 ಜನರ ಮಿತಿಯೂ ವಿಸ್ತರಣೆ
ತಿರುವನಂತಪುರಂ(ಜು.06): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಯಲ್ಲಿ ಕೇರಳ ಸರ್ಕಾರ ಸುರಕ್ಷತಾ ಕ್ರಮಗಳ ಪಾಲನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿ ಭಾನುವಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ.
ಕೇರಳ ಸರ್ಕಾರದ ಈ ಆದೇಶ 2021 ಜುಲೈವರೆಗೂ ಅನ್ವಯ ಆಗಲಿದೆ. ಈ ಸಂಬಂಧ ಕೇರಳ ಸರ್ಕಾರ ಕೊರೋನಾ ಸುಗ್ರೀವಾಜ್ಞೆಗೆ ತಿದ್ದುಪಡಿ ಮಾಡಿದೆ.
undefined
ಗಡಿಯಲ್ಲಿ ದಾರಿ ತಪ್ಪಿದ ವಿದ್ಯಾರ್ಥಿ: ಶಿಕ್ಷಕರ ಸಾಹಸದಿಂದ ಕೊನೆಗೂ ಎಕ್ಸಾಂ ಬರೆದ..!
ಇದೇ ವೇಳೆ ಮದುವೆಗೆ 50ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಮತ್ತು ಅಂತ್ಯಕ್ರಿಯೆಗೆ 20 ಜನರಷ್ಟೇ ಭಾಗವಹಿಸಬೇಕು. ಪೂರ್ವಾನುಮತಿ ಇಲ್ಲದೇ ಸಮುದಾಯ ಕಾರ್ಯಕ್ರಮ, ಸಭೆ- ಸಮಾರಂಭಗಳನ್ನು ನಡೆಸುವಂತಿಲ್ಲ. ಯಾವುದೇ ಅಂಗಡಿ ಮತ್ತು ಮಾರಾಟ ಮಳಿಗೆಗಳಲ್ಲಿ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಮಾಸ್ಕ್ ಧರಿಸದಿದ್ದರೆ 10 ಸಾವಿರ ದಂಡ:
ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿದೇ ಇದ್ದರೆ 10 ಸಾವಿರ ರು. ದಂಡ ಇಲ್ಲವೇ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮುನ್ನ ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ 2 ಸಾವಿರ ರು. ದಂಡ ವಿಧಿಸಲಾಗುತ್ತಿತ್ತು.