ಬಿಲಿಯನೇರ್ ಗೊತ್ತು ಮಿಲಿಯನೇರ್ ಗೊತ್ತು ಇದೇನಿದು ನಿಲಿಯನೇರ್‌: ನೀವು ನಿಲಿಯನೇರಾ ಚೆಕ್ ಮಾಡಿ

Published : Dec 31, 2025, 01:03 PM IST
Meaning of the word Nillianair

ಸಾರಾಂಶ

ಮಿಲಿಯನೇರ್ ಆಗ್ಬೇಕು, ಆಮೇಲೆ ಬಿಲಿಯನೇರ್ ಆಗ್ಬೇಕು ಅನ್ನೋದು ಅನೇಕರ ಆಸೆ. ಆದರೆ ಎಲ್ಲರಿಗೂ ಈ ಕನಸನ್ನು ನನಸು ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಇತ್ತೀಚೆಗೆ ಚಾಲ್ತಿಯಲ್ಲಿರುವ ಪದವೊಂದು ಇಂಟರ್‌ನೆಟ್‌ನಲ್ಲಿ ಬಹಳ ಸಂಚಲನ ಸೃಷ್ಟಿಸುತ್ತಿದೆ. ಅದುವೇ ನಿಲಿಯನೇರ್ ಹಾಗಿದ್ರ ನಿಲಿಯನೇರ್ ಅಂದ್ರೆ ಏನು

ಶ್ರೀಮಂತರಾಗಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ. ಅದಕ್ಕಾಗಿ ಅನೇಕರು ತಾನು ಬಿಲಿಯನೇರ್ ಆಗಬೇಕು ಮಿಲಿಯನೇರ್ ಆಗಬೇಕು ಅಂತಾರೆ ಅಂದ್ರೆ ನಾನು ಲಕ್ಷಾಧಿಪತಿ ಆಗ್ಬೇಕು ಕೋಟ್ಯಾಧಿಪತಿ ಆಗ್ಬೇಕು ಅಂತಾರೆ. ಮೊದಲಿಗೆ ಮಿಲಿಯನೇರ್ ಆಗ್ಬೇಕು, ಆಮೇಲೆ ಬಿಲಿಯನೇರ್ ಆಗ್ಬೇಕು ಅನ್ನೋದು ಅನೇಕರ ಆಸೆ. ಆದರೆ ಎಲ್ಲರಿಗೂ ಈ ಕನಸನ್ನು ನನಸು ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಇತ್ತೀಚೆಗೆ ಚಾಲ್ತಿಯಲ್ಲಿರುವ ಪದವೊಂದು ಇಂಟರ್‌ನೆಟ್‌ನಲ್ಲಿ ಬಹಳ ಸಂಚಲನ ಸೃಷ್ಟಿಸುತ್ತಿದೆ. ಅದುವೇ ನಿಲಿಯನೇರ್ ಹಾಗಿದ್ರ ನಿಲಿಯನೇರ್ ಅಂದ್ರೆ ಏನು ಹಾಗೂ ಯಾರು ನೀವು ನಿಲಿಯನೇರ್ ಹೌದಾ ಅಲ್ವಾ ತಿಳ್ಕೊಳೋದು ಹೇಗೆ? ಮುಂದೆ ಓದಿ..

ಈಗ ಪ್ರಚಲಿತದಲ್ಲಿರುವುದು ಡೆಂಜಿ ತಲೆಮಾರು, ಈ ಜನರೇಷನ್‌ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದೇ ದೊಡ್ಡ ಕಷ್ಟ. ಅವರು ಇರುವ ಪದಗಳನ್ನೆಲ್ಲಾ ಒಟ್ಟು ಸೇರಿಸಿ ಶಾರ್ಟ್‌ ಫಾರ್ಮ್‌ನಲ್ಲಿ ಮಾತನಾಡುತ್ತಾರೆ. ನಮ್ಮ ತಲೆಮಾರಿನ ಜನ ಇಂಗ್ಲೀಷ್ ಮಾತಾಡೋದೇ ಕಷ್ಟ ಎಂದು ಪರದಾಡಿದರೆ ಈ ತಲೆಮಾರು ನಾವು ಕಷ್ಟಪಟ್ಟು ಕಲಿತ ಇಂಗ್ಲೀಷನ್ನೇ ಮತ್ತೆ ಶಾರ್ಟ್‌ ಫಾರ್ಮ್ ಮಾಡಿ ಮಾತನಾಡುವ ಮೂಲಕ ಹಳೆ ತಲೆಮಾರಿಗೆ ಹುಚ್ಚು ಹಿಡಿಸುತ್ತಿದ್ದಾರೆ.

ಐ ಡೋಂಟ್ ನೋ ಅನ್ನೋದಕ್ಕೆ ಐಡಿಸಿ ಅಂತಾರೆ, ಐಡೋಂಟ್ ಕೇರ್ ಅನ್ನೋದಕ್ಕೆ ಐಡಿಸಿ ಅಂತಾರೆ ಬೈ ದಿ ವೇ ಅನ್ನೋದಕ್ಕೆ ಬಿಡ್ಬ್ಲ್ಯುಸಿ ಅಂತಾರೆ, ನೋ ಪ್ಲಾಬ್ಲಂ ಅನ್ನೋದಕ್ಕೆ ಎನ್‌ಪಿ ಅಂತಾರೆ. ಹೀಗೆ ಮಾತನಾಡುವ ಮೂಲಕ ಹಳೆ ತಲೆಮಾರಿನವರು ಏನೆಂದು ಅರ್ಥವಾಗದೇ ಹಾ ಅಂತ ಬಾಯ್ಬಿಟ್ಟು ನೋಡು ತರ ಮಾಡ್ತಿದ್ದಾರೆ ಈ ತಲೆಮಾರು ಹೀಗಿರುವಾಗ ಇವರ ಈ ಹೊಸ ಪದಗಳನ್ನು ಆಕ್ಸ್‌ಫರ್ಡ್ ಡಿಕ್ಷನರಿಯವರು ಕೂಡ ತಮ್ಮ ಡಿಕ್ಷನರಿಗೆ ಸೇರಿಸುತ್ತಿದ್ದಾರೆ. ಹೀಗಿರುವಾಗ ಇಂಟರ್‌ನೆಟ್‌ನಲ್ಲಿ ಈ ನಿಲಿಯನೇರ್ ಎಂಬ ಪದ ಸುಳಿದಾಡುತ್ತಿದೆ. ಹಾಗಂತ ಇದು ಡೆಂಜಿ ಕಿಡ್‌ಗಳು ಶುರು ಮಾಡಿದ ಪದ ಮಾತ್ರ ಅಲ್ಲ, ಹಾಗಿದ್ರೆ ಏನಿದು ನಿಲಿಯನೇರ್?

ಇದನ್ನೂ ಓದಿ: ಕೇರ್ ಟೇಕರ್ ನಂಬಿದ ಅಪ್ಪ ಮಗಳಿಗೆ ಆಗಬಾರದು ಆಗೋಯ್ತು: ನಂಬೋದು ಯಾರನ್ನು?

ನಿಲಿಯನೇರ್ ಅಂದ್ರೆ ಕೋಟ್ಯಾಧಿತಿಯೋ ಲಕ್ಷಾಧಿಪತಿಯೋ ಅಲ್ಲ, ಯಾರ ಕೈಯಲ್ಲಿ ನಯಾಪೈಸೆ ಇರುವುದಿಲ್ಲವೋ, ಒಂದು ರೂಪಾಯಿ ಇಲ್ಲದೇ ಹೋದರು ಯಾರೂ ಐಷಾರಾಮಿ ಜೀವನದ ಬಗ್ಗೆ ಬದುಕಿನಲ್ಲಿ ದೊಡ್ಡ ಸಾಧನೆ ಮಾಡುವ ಬಗ್ಗೆ ಕನಸು ಕಾಣುತ್ತಾರೋ ಅವರೇ ನಿಲಿಯನೇರ್ ಅಂತೆ. ಅಂದರೆ ಇಂಗ್ಲೀಷ್‌ನಲ್ಲಿ ನಿಲ್ ಅಂದರೆ ಏನಿಲ್ಲ ಅಂತ ಅರ್ಥ ಇದನ್ನೇ ಮಿಲಿಯನೇರ್ ಜೊತೆ ಸಂಯೋಜಿ ನಿಲಿಯನೇರ್ ಪದವನ್ನು ಮಾಡಲಾಗಿದೆ. ಇದೊಂದು ಹಾಸ್ಯಮಯವಾದ ಅನೌಪಚಾರಿಕ ಪದವಾಗಿದ್ದು, ಆರ್ಥಿಕವಾಗಿ ಹೆಣಗಾಡುತ್ತಿರುವುದರ ಜೊತೆಗೆ ದೊಡ್ಡದಾಗಿ ಕನಸು ಕಾಣುವ ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಇದನ್ನೂ ಓದಿ: ಬದುಕಿನಲ್ಲಿ ಮಾಡಬಾರದನ್ನು ಮಾಡಿದ ಯುವತಿ: ಅಪರಿಚಿತೆಯ ಬಳಿ ಬದುಕಿನ ಡಾರ್ಕೆಸ್ಟ್ ಸೀಕ್ರೇಟ್ ಕೇಳಿದವನಿಗೆ ಶಾಕ್

ಇದು ಹೆಚ್ಚುತ್ತಿರುವ ವೆಚ್ಚಗಳ ಹಿನ್ನೆಲೆಯಲ್ಲಿ ಆಕಾಂಕ್ಷೆಗಳು ಮತ್ತು ವಾಸ್ತವದ ನಡುವಿನ ಅಂತರವನ್ನು ಪ್ರತಿಬಿಂಬಿಸುತ್ತದೆ. ಭರವಸೆಯ, ಮಹತ್ವಾಕಾಂಕ್ಷೆಯ ಮನಸ್ಥಿತಿಯಿಂದ ಮುರಿದು ಹೋಗಿರುವುದನ್ನು ವಿವರಿಸಲು ಇದು ಒಂದು ಹಾಸ್ಯಮಯ ಮಾರ್ಗವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವ ವಯಸ್ಕರು ತಮ್ಮ ವೆಚ್ಚವನ್ನು ಮತ್ತು ಕನಸುಗಳನ್ನು ಸಮತೋಲನಗೊಳಿಸುವುತ್ತಾ ತಮ್ಮ ಸ್ಥಿತಿಯನ್ನು ಹೇಳುವುದಕ್ಕೆ ಈ ಪದವನ್ನು ಬಳಸುತ್ತಾರೆ. ಸೋ ಈಗ ಹೇಳಿ ನೀವು ಮಿಲಿಯನೇರೋ ಅಥವಾ ಬಿಲಿಯನೇರೋ ಅಥವಾ ನಿಲಿಯನೇರೋ ಅಂತ.

ಈ ಪದ ಸಾಮಾಜಿಕ ಜಾಲತಾಣದಲ್ಲಿ ಇತ್ತಿಚೆಗೆ ಭಾರಿ ವೈರಲ್ ಆಗ್ತಿದ್ದು, ಅನೇಕರು ಹಲವು ಹಾಸ್ಯಮಯ ಕಾಮೆಂಟ್ ಮಾಡ್ತಿದ್ದಾರೆ. ನಾನೊಬ್ಬ ಹೆಮ್ಮೆಯ ನಿಲಿಯನೇರ್, ನಾನೊಬ್ಬ ಶ್ರೀಮಂತ ನಿಲಿಯನೇರ್ ಎಂದೆಲ್ಲಾ ಜನ ಕಾಮೆಂಟ್ ಮಾಡ್ತಿದ್ದಾರೆ.

ಇದನ್ನೂ ಓದಿ: ಸಾವಿನಂಚಿನಲ್ಲಿದ್ದ ತಾಯಿಗೆ ಕೊನೆಕ್ಷಣದಲ್ಲಿ ಕಂಡಿದ್ದೇನು ಆಕೆ ಹೇಳಿದ್ದೇನು?: ವಿಚಿತ್ರ ಅನುಭವ ಬಿಚ್ಚಿಟ್ಟ ಮಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಂಕ್ರಾಂತಿಗೆ ಸರ್ಕಾರದ ಗಿಫ್ಟ್‌?: ಹೆದ್ದಾರಿಯಲ್ಲಿ ಟೋಲ್‌ ವಿನಾಯಿತಿ ನೀಡುವಂತೆ ನಿತಿನ್‌ ಗಡ್ಕರಿಗೆ ಮನವಿ
ಕೇರ್ ಟೇಕರ್ ನಂಬಿದ ಅಪ್ಪ ಮಗಳಿಗೆ ಆಗಬಾರದು ಆಗೋಯ್ತು: ನಂಬೋದು ಯಾರನ್ನು?