
ಕರ್ನೂಲ್(ಜು.01): ಲಾಕ್‌ಡೌನ್ ವೇಳೆ ಸಾವಿರಾರು ಜನ ನಡೆದುಕೊಂಡು ಇಲ್ಲವೇ ಸೈಕಲ್‌ನಲ್ಲೇ ಸಾವಿರಾರು ಕಿ.ಮೀ ಸಂಚರಿಸಿದ ಘಟನೆ ಕೇಳಿದ್ದೇವೆ. ಅಂಥದ್ದೇ ಒಂದು ಮನಕಲಕುವ ಘಟನೆ ನೆರೆಯ ಆಂಧ್ರದಲ್ಲಿ ನಡೆದಿದೆ. 10 ವರ್ಷದ ಬಾಲಕನೊಬ್ಬ ತನ್ನ ಅಂಗವಿಕಲ ತಾಯಿ ಮತ್ತು ಪುಟ್ಟತಂಗಿಯನ್ನು ಗಾಲಿ ಕುರ್ಚಿಯಲ್ಲಿ ಕುಳಿಸಿ ಹೈದ್ರಾಬಾದ್‌ನಿಂದ ಬೆಂಗಳೂರಿಗೆ ತಳ್ಳಿಕೊಂಡೇ ಹೊರಟ್ಟಿದ್ದಾನೆ. ಹೀಗೆ ಸುಮಾರು 250 ಕಿ.ಮೀ. ಪಾದಯಾತ್ರೆ ಬಳಿಕ ಅದೃಷ್ಟವಶಾತ್ ಸ್ಥಳೀಯರ ನೆರವಿನಿಂದಾಗಿ ಆತನ ಕುಟುಂಬ ಸುರಕ್ಷಿತವಾಗಿ ವಾಹನವೊಂದರ ಮೂಲಕ ಬೆಂಗಳೂರಿಗೆ ತಲುಪುವಲ್ಲಿ ಯಶಸ್ವಿಯಾದ ಘಟನೆ ಬೆಳಕಿಗೆ ಬಂದಿದೆ.
ಪುಟ್ಟಬಾಲಕನ ಬಾಲಕ ಶಾರುಖ್ ಧೈರ್ಯ, ಇಚ್ಛಾಶಕ್ತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿ ಗೌರವಿಸಿ ಅಂಚೆ ಚೀಟಿ ಬಿಡುಗಡೆ!
ಏನಾಯ್ತು?:
ಮೂಲತಃ ಉತ್ತರ ಪ್ರದೇಶದವಳಾದ ಹಸೀನಾ ತನ್ನ ಗಂಡನನ್ನು ಕಳೆದುಕೊಂಡ ಬಳಿಕ ಹೈದರಾಬಾದ್‌ಗೆ 5 ಮಕ್ಕಳ ಜತೆ ಆಗಮಿಸಿದ್ದಳು. ಅಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಳು. ಈ ನಡುವೆ ಲಾಕ್‌ಡೌನ್ ಘೋಷಣೆ ಆಗುವ ಕೆಲ ದಿನ ಮುನ್ನ ಈಕೆಯ 3 ಮಕ್ಕಳನ್ನು ಬೆಂಗಳೂರಿನ ಆಶ್ರಮವೊಂದಕ್ಕೆ ಕರೆದೊಯ್ಯಲಾಗಿತ್ತು. ಹಸೀನಾ, ಶಾರುಖ್ ಹಾಗೂ 1 ವರ್ಷದ ಮಗು ಕೂಡ ಬೆಂಗಳೂರಿಗೆ ತೆರಳಿ ಆಶ್ರಮ ಸೇರಿಕೊಳ್ಳಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆ ಆಗಿಬಿಟ್ಟಿತು. ಸಾರಿಗೆ ವ್ಯವಸ್ಥೆ ಸ್ತಬ್ಧವಾಯಿತು.
1200 ಕಿ.ಮಿ ಸೈಕಲ್ ತುಳಿದ ಬಾಲಕಿ ಹೊಗಳಿದ ಇವಾಂಕ!
ಹೀಗಾಗಿ ಹೈದರಾಬಾದ್‌ನಲ್ಲಿ 3 ತಿಂಗಳು ಪರದಾಡಿದ ಈ ಮೂವರೂ ಲಾಕ್‌ಡೌನ್ ಅಂತ್ಯಗೊಂಡ ಜೂನ್ ಆರಂಭದಲ್ಲಿ ಬೆಂಗಳೂರಿಗೆ ತೆರಳಲು ಮುಂದಾದರು. ಆದರೆ ಬಸ್ಸು, ರೈಲಲ್ಲಿ ತೆರಳಲು ದುಡ್ಡಿರಲಿಲ್ಲ. ಹೀಗಾಗಿ ಶಾರುಖ್ ತನ್ನ ತಾಯಿ ಹಸೀನಾ, 1 ವರ್ಷದ ಸೋದರಿಯನ್ನು ಗಾಲಿ ಕುರ್ಚಿಯಲ್ಲೇ ತಳ್ಳಿಕೊಂಡು ಬೆಂಗಳೂರಿಗೆ ಹೊರಟ. ಇದೇ ರೀತಿ 250 ಕಿ.ಮೀ.ನಷ್ಟುದೂರ ಕರ್ನೂಲ್‌ವರೆಗೆ ಸಾಗಿ ಬಂದಾಗ ಅಲ್ಲಿನ ಜನರಿಗೆ ವಿಷಯ ತಿಳಿಯಿತು. ಬಳಿಕ ಸ್ಥಳೀಯ ಜನರು, ಕರ್ನೂಲಿನ ಸಬ್ ಇನ್ಸ್‌ಪೆಕ್ಟರ್ ನರೇಂದ್ರ ಕುಮಾರ್ ರೆಡ್ಡಿ ಹಾಗೂ ಸ್ವಯಂಸೇವಾ ಸಂಸ್ಥೆಗಳು ಬೆಂಗಳೂರಿಗೆ ತೆರಳಲು ವಾಹನ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಬೆಂಗಳೂರಿನ ಆಶ್ರಮವೊಂದರಲ್ಲಿದ್ದ ತಮ್ಮ 3 ಸೋದರ ಸೋದರಿಯರ ಜತೆ ಶಾರುಖ್, ಅವರ ಅಮ್ಮ ಹಾಗೂ ತಂಗಿ ಸುರಕ್ಷಿತವಾಗಿ ಕಳೆದ ಭಾನುವಾರ ಸೇರಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ