ಮೆಂತ್ಯದ ಎಲೆ ಎಂದು ಭಾವಿಸಿ ಗಾಂಜಾದ ಸಬ್ಜಿ ಸೇವಿಸಿದ ಕುಟುಂಬ!

Published : Jun 30, 2020, 10:12 PM ISTUpdated : Jun 30, 2020, 10:18 PM IST
ಮೆಂತ್ಯದ ಎಲೆ ಎಂದು ಭಾವಿಸಿ ಗಾಂಜಾದ ಸಬ್ಜಿ ಸೇವಿಸಿದ ಕುಟುಂಬ!

ಸಾರಾಂಶ

ಮೆಂತ್ಯದ ಸೊಪ್ಪೆಂದು ಗಾಂಜಾ ಸೊಪ್ಪಿನ ಅಡುಗೆ/ ಆಸ್ಪತ್ರೆ ಸೇರಿದ ಕುಟುಂಬ/ ಪ್ಯಾಕೇಟ್ ನೀಡಿದ್ದ ವ್ಯಕ್ತಿಯ ಬಂಧನ/ ಉತ್ತರ ಪ್ರದೇಶದ ಘಟನೆ

ಉತ್ತರ ಪ್ರದೇಶ(ಜೂ. 30)  ಮೆಂತ್ಯದ ಸೊಪ್ಪೆಂದು ಭಾವಿಸಿ ಗಾಂಜಾ ಎಲೆಯ ಖಾದ್ಯ ಮಾಡಿ ಸೇವಿಸಿದ ಕುಟುಂಬ ಆಸ್ಪತ್ರೆ ಸೇರಿದೆ. 

ಉತ್ತರ ಪ್ರದೇಶಸ ಕನೌಜ್ ನ ಘಟನೆ ಹೇಳುತ್ತೇವೆ ಕೇಳಿ. ನಾವಲ್ ಕಿಶೋರ್ ಎಂಬಾತ ತನ್ನದೆ ಹಳ್ಳಿಯ ಹುಡುಗನೊಬ್ಬನಿಗೆ ಗಾಂಜಾದ ಎಲೆ ತುಂಬಿರುವ ಪ್ಯಾಕೇಟ್ ನೀಡಿದ್ದಾನೆ. ಈ ಪ್ಯಾಕೇಟ್ ತೆಗೆದುಕೊಂಡು ಹೋದ ಹುಡುಗ ತನ್ನ ಅತ್ತಿಗೆ ಕೈಗೆ ಕೊಟ್ಟು ಸಬ್ಜಿ ಮಾಡುವಂತೆ ಹೇಳಿದ್ದಾನೆ.

ಗುದದ್ವಾರದಲ್ಲಿ ಕೆಜಿ ಚಿನ್ನ, ಎಂಥಾ ಚಾಲಾಕಿ ಕಣ್ರಲಾ!

ಟೊಮೆಟೋ ಬಳಸಿ ಸಬ್ಜಿ ಮಾಡಲಾಗಿದೆ. ಕುಟುಂಬದ ಆರು ಜನ ಗಾಂಜಾ ಸೊಪ್ಪಿನಿಂದ ತಯಾರಿಸಿದ ಪದಾರ್ಥ ಸೇವಿಸಿದ್ದಾರೆ.  ಇದಾದ ಮೇಲೆ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಗಾಟ ಕೇಳಿ ಪಕ್ಕದ ಮನೆಯವರು ಆಸ್ಪತ್ರೆಗೆ ಸುದ್ದಿ ಮುಟ್ಟಿಸಿದ್ದಾರೆ.

ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಗಾಂಜಾ ಬಳಕೆ ಮಾಡಿರುವುದು ಗೊತ್ತಾಗಿದೆ. ಪ್ಯಾಕೇಟ್ ನೀಡಿದ್ದ ಕಿಶೋರ್ ನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.  ಕುಟುಂಬದ ಸದಸ್ಯರಿಗೆ ತಲೆನೋವು ಕಾಡುತ್ತಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ವಿಷಪೂರಿತ ಅಣಬೆ ಸೇವಿಸಿ ಒಂದೆ ಕುಟುಂಬದ 5 ಜನ ಮೃತಪಟ್ಟಿದ್ದು ವರ್ಷಗಳ ಹಿಂದೆ ವರದಿಯಾಗಿತ್ತು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
India Latest News Live: 2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ