ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ ಭೀಕರ ಅಪಘಾತ: ಆಶ್ರಮದ 4 ಬಾಲಕಿಯರ ಆಘಾತಕಾರಿ ಸಾವು!

By Suvarna NewsFirst Published Apr 20, 2022, 4:19 PM IST
Highlights

* ಮಧ್ಯಪ್ರದೇಶದ ಓಂಕಾರೇಶ್ವರದಿಂದ ಭಾರೀ ಅಪಘಾತ

* ಕೋಠಿ ಗ್ರಾಮದ ಸಾಧ್ವಿ ಋತಂಭರದ ಪೀತಾಂಬರೇಶ್ವರ ಆಶ್ರಮದ ಮಕ್ಕಳು ಸಾವು

* ಘಟನೆಯ ನಂತರ ಆಶ್ರಮ ಆಡಳಿತದಲ್ಲಿ ಅಲ್ಲೋಲ ಕಲ್ಲೋಲ 

ಭೋಪಾಲ್(ಏ.20): ಮಧ್ಯಪ್ರದೇಶದ ಓಂಕಾರೇಶ್ವರದಿಂದ ಭಾರೀ ಅಪಘಾತದ ಸುದ್ದಿ ಬೆಳಕಿಗೆ ಬಂದಿದೆ. ಕೋಠಿ ಗ್ರಾಮದ ಸಾಧ್ವಿ ಋತಂಭರದ ಪೀತಾಂಬರೇಶ್ವರ ಆಶ್ರಮದ ಬಳಿ ಹಾದು ಹೋಗುವ ಕಾಲುವೆಯಲ್ಲಿ ಮುಳುಗಿ ನಾಲ್ವರು ಬಾಲಕಿಯರು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ಆಶ್ರಮ ಆಡಳಿತದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಅದೇ ಸಮಯದಲ್ಲಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಅಪಘಾತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹೌದು ಧಾರ್ಮಿಕ ನಾಯಕಿ ಸಾಧ್ವಿ ಋತಂಭರಾ ಅವರು ನಡೆಸುತ್ತಿದ್ದ ವಸತಿ ಆಶ್ರಮ ಶಾಲೆಯಲ್ಲಿ ಓದುತ್ತಿದ್ದ ನಾಲ್ವರು ಬಾಲಕಿಯರು ಬುಧವಾರ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಧಾತ (ಓಂಕಾರೇಶ್ವರ) ಪೊಲೀಸ್ ಠಾಣೆ ವ್ಯಾಪ್ತಿಯ ಕೋಠಿ ಗ್ರಾಮದಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Latest Videos

ಸಂತ್ರಸ್ತರು 10 ರಿಂದ 11 ವರ್ಷ ವಯಸ್ಸಿನವರು, 5 ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಸಾಧ್ವಿ ಋತಂಭರಾ ಅವರು ನಡೆಸುತ್ತಿದ್ದ ಆಶ್ರಮದಲ್ಲಿ ವಾಸಿಸುತ್ತಿದ್ದರು. ಬಾಲಕಿಯರು ಸ್ನಾನಕ್ಕಾಗಿ ಕಾಲುವೆಗೆ ಹೋಗಿದ್ದರು, ಹೀಗಿರುವಾಗ ಒಬ್ಬಾಕೆ ಮುಳುಗಲಾರಂಭಿಸಿದ್ದು, ಇತರರು ಅವಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ಯತ್ನದಲಲ್ಇ ನಾಲ್ವರೂ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಂಧಾತ ಪೊಲೀಸ್ ಠಾಣೆಯ ಉಸ್ತುವಾರಿ ಬಲರಾಮ್ ಸಿಂಗ್ ಹೇಳಿದ್ದಾರೆ.

ಮೃತರನ್ನು ವೈಶಾಲಿ, ಪ್ರತಿಜ್ಞಾ, ದಿವ್ಯಾಂಶಿ ಮತ್ತು ಅಂಜನಾ ಎಂದು ಗುರುತಿಸಲಾಗಿದ್ದು, ಖಾರ್ಗೋನ್ ಜಿಲ್ಲೆಯವರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆಯಲ್ಲಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

click me!