
ಚೆನ್ನೈ(ಜೂ.19): ಜನರು 10 ರು. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದರಿಂದ ಬೇಸತ್ತ ತಮಿಳುನಾಡಿನ ವ್ಯಕ್ತಿಯೊಬ್ಬನು 10 ರು. ನಾಣ್ಯಗಳನ್ನು ಸಂಗ್ರಹಿಸಿ ಅದರಿಂದಲೇ 6 ಲಕ್ಷ ರು. ಮೌಲ್ಯದ ಕಾರು ಖರೀದಿಸಿದ್ದಾನೆ.
ಅರೂರು ನಿವಾಸಿಯಾದ ವೆಟ್ರಿವೇಲ್ ಎಂಬ ವ್ಯಕ್ತಿಯ ತಾಯಿಯು ಅಂಗಡಿಯನ್ನು ನಡೆಸುತ್ತಿದ್ದು, ಗ್ರಾಹಕರು 10 ರು. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ ಅಂಗಡಿಯಲ್ಲಿ 10 ರು. ನಾಣ್ಯಗಳು ದೊಡ್ಡ ಮಟ್ಟದಲ್ಲಿ ಸಂಗ್ರಹವಾಗಿದ್ದವು. 10 ರು. ನಾಣ್ಯಗಳು ಇನ್ನೂ ಬಳಕೆಗೆ ಯೋಗ್ಯವಾಗಿವೆ ಎಂದು ಅರಿವು ಮೂಡಿಸಲು ಸುಮಾರು 6 ಲಕ್ಷ ರು. ಮೌಲ್ಯದ ನಾಣ್ಯಗಳನ್ನು ಸಂಗ್ರಹಿಸಿ ಅದರಿಂದ ವೆಟ್ರಿವೇಲ ಕಾರನ್ನು ಖರೀದಿಸಿದ್ದಾನೆ.
Tamil Nadu: ವೈದ್ಯ ವಿದಾರ್ಥಿಗಳಿಗೆ ಚರಕ ಶಪಥ ಬೋಧನೆ: ಡೀನ್ ವಜಾ
‘ದೊಡ್ಡ ಚೀಲದಲ್ಲಿ ನಾಣ್ಯಗಳೊಂದಿಗೆ ಕಾರು ಖರೀದಿಸಲು ಬಂದಾಗ ಮೊದಲು ಆಶ್ಚರ್ಯವಾಯಿತು. ನಂತರ ವೆಟ್ರಿವೇಲ್ ದೃಢ ನಿರ್ಣಯ ನೋಡಿ ಕಾರು ಮಾರಾಟ ಮಾಡಲು ಒಪ್ಪಿಕೊಂಡೆ. ಚೀಲಗಟ್ಟಲೆ ನಾಣ್ಯಗಳನ್ನು ಎಣಿಸಿದ ನಂತರ ಕೊನೆಗೂ ಕಾರನ್ನು ವೆಟ್ರಿವೇಲನಿಗೆ ಹಸ್ತಾಂತರಿಸಲಾಗಿದೆ’ ಎಂದು ಅಂಗಡಿಯಾತ ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ