
ನವದೆಹಲಿ: ತನ್ನ ಪ್ರಯಾಣಿಕರಿಗೆ ತುರ್ತು ಸಂದರ್ಭಗಳಲ್ಲಿ ಸವಲತ್ತುಗಳನ್ನು ನೀಡಲು ವಿಫಲವಾದ ಏರ್ ಇಂಡಿಯಾ (Air India) ಸಂಸ್ಥೆಗೆ ನಾಗರಿಕ ವಿಮಾನಯಾನ ನಿಯಂತ್ರಣ ಪ್ರಾಧಿಕಾರ 10 ಲಕ್ಷ ರು. ದಂಡ ವಿಧಿಸಿದೆ. ನ.3ರಂದು ಪ್ರಾಧಿಕಾರವು (DGCA) ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿತ್ತು. ಅದರ ಸ್ಪಂದನೆಯಲ್ಲಿ ತನ್ನ ನಿಯಮಕ್ಕೆ ತಕ್ಕಂತೆ ನಾಗರಿಕ ವಿಮಾನಯಾನ ಅವಶ್ಯಕತೆ ಪೂರೈಸದ ವಿವರಣೆ ನೀಡಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಗೆ ದಂಡ ವಿಧಿಸಿ ಆದೇಶಿಸಿದೆ.
ಏರ್ ಇಂಡಿಯಾ ಸಂಸ್ಥೆಯ ಸೇವೆಗಳನ್ನು ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಸಿದ ನಿಯಂತ್ರಣಾ ಪ್ರಾಧಿಕಾರ, ತನ್ನ ಪ್ರಯಾಣಿಕರಿಗೆ ವಿಳಂಬದ ಸಮಯದಲ್ಲಿ ಹೋಟೆಲ್ ವಾಸ್ತವ್ಯ ಒದಗಿಸಿರುವುದಿಲ್ಲ, ತಮ್ಮ ಕೆಲವು ಸಿಬ್ಬಂದಿಗೆ ತರಬೇತಿ ನೀಡಿರುವುದಿಲ್ಲ ಮತ್ತು ಬಿಜಿ಼ನೆಸ್ ಕ್ಲಾಸ್ ಪ್ರಯಾಣಿಕರಿಗೆ ಕಾರಣಾಂತರಗಳಿಂದ ಎಕಾನಮಿ ಕ್ಲಾಸ್ ಸೀಟುಗಳನ್ನು ನೀಡಿದ ಸಂದರ್ಭದಲ್ಲಿ ಸೂಕ್ತ ಪರಿಹಾರವನ್ನು ನೀಡಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ನೋಟಿಸ್ ನೀಡಿತ್ತು.
ಹೃದಯಾಘಾತ: ದೆಹಲಿ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾದ ಯುವ ಪೈಲಟ್ ಸಾವು
ಡ್ರೈವಿಂಗ್ ಲೈಸೆನ್ಸ್ ನಿಯಮ ಬದಲಾವಣೆಗೆ ಸುಪ್ರೀಂ ಒಲವು: ಪರಾಮರ್ಶೆಗೆ ಕೇಂದ್ರಕ್ಕೆ ಸೂಚನೆ
ನವದೆಹಲಿ: ಕಾರಿನಂಥ ಲಘು ವಾಹನಗಳನ್ನು ಚಾಲನೆ ಮಾಡಲು ಪರವಾನಗಿ ಹೊಂದಿರುವವರು ಅಷ್ಟೇ ತೂಕದ ಸಾರಿಗೆ ವಾಹನ ಚಾಲನೆ ಮಾಡಬಹುದು ಎಂಬುದರ ಕುರಿತಾಗಿ ಜ.17ರೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಇದನ್ನು ಜಾರಿಗೊಳಿಸುವುದಕ್ಕಾಗಿ ಪ್ರಸ್ತುತ ಇರುವ ಡ್ರೈವಿಂಗ್ ಲೈಸೆನ್ಸ್ ಕಾನೂನಿಗೆ ತಿದ್ದುಪಡಿ ತರಬೇಕೆ ಎಂಬುದರ ಕುರಿತಾಗಿ ಸಮಾಲೋಚನೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ( D Y chandrachud)ಅವರನ್ನೊಳಗೊಂಡ 5 ಜನರ ಸಾಂವಿಧಾನಿಕ ಪೀಠ ಹೇಳಿದೆ.
ಈ ಕ್ರಿಯೆಯನ್ನು ಶೀಘ್ರವಾಗಿ ನಡೆಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಬೇಕಿದ್ದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜೊತೆ ರಾಜ್ಯ ಸರ್ಕಾರಗಳು (State Govt) ಸಮಾಲೋಚನೆ ನಡೆಸಬೇಕು ಎಂದು ನಾವು ಸೂಚಿಸುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಜ.17ರಂದು ಮತ್ತೆ ವಿಚಾರಣೆ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ಇದನ್ನು ಪೂರ್ಣಗೊಳಿಸಿ, ಕೋರ್ಟ್‌ಗೆ ಮಾಹಿತಿ ನೀಡಬೇಕು’ ಎಂದು ಪೀಠ ಹೇಳಿದೆ.
ಬೆಂಗಳೂರಿನಿಂದ ಸಿಂಗಾಪುರಕ್ಕೆ ಏರ್ ಇಂಡಿಯಾ ನಾನ್ ಸ್ಟಾಪ್ ವಿಮಾನ ಸೇವೆ ಆರಂಭ!
ಇದಕ್ಕೂ ಮೊದಲು ಕಾರ್‌ನ ಚಾಲನಾ ಪರವಾನಗಿ ಹೊಂದಿರುವವರು ಅದೇ ತೂಕದ ಸಾರಿಗೆ ವಾಹನ ಚಾಲನೆ ಮಾಡಲು ಅವಕಾಶ ಒದಗಿಸುವಂತೆ ಕಾನೂನನ್ನು ಬದಲಾವಣೆ ಮಾಡಬೇಕು ಎಂದು ಕೋರ್ಟ್, ಕೇಂದ್ರ ಸರ್ಕಾರಕ್ಕೆ (central Govt) ಸೂಚಿಸಿತ್ತು. ಆದರೆ ಸರ್ಕಾರ ನಿಯಮ ಬದಲಿಸಿರಲಿಲ್ಲ. ಹೀಗಾಗಿ ಈ ಬಗ್ಗೆ ಮತ್ತೊಮ್ಮೆ ಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ