ಜಾಕ್ ಪಾಟ್, ಸಿಕ್ಕಿದ್ದು ಬರೋಬ್ಬರಿ ಅರ್ಧಕೋಟಿ ಮೌಲ್ಯದ ವಜ್ರ

By Suvarna NewsFirst Published Jul 22, 2020, 4:00 PM IST
Highlights

ರೈತನಿಗೆ ಸಿಕ್ಕಿದ್ದು ಬರೋಬ್ಬರಿ  50  ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಜ್ರ/ ಮೌಲ್ಯಮಾಪನದ ನಂತರ ಹರಾಜು/ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ಪತ್ತೆಯಾದ ವಜ್ರ 

ಮಧ್ಯಪ್ರದೇಶ(ಜು. 22) ಮಧ್ಯಪ್ರದೇಶದ ಗಣಿಯೊಂದರಲ್ಲಿ 10.69 ಕ್ಯಾರಟ್ ನ ಬರೋಬ್ಬರಿ  50  ಲಕ್ಷ ರೂ. ಮೌಲ್ಯದ ವಜ್ರವೊಂದು ಸಿಕ್ಕಿದೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ವಜ್ರ ಸಿಕ್ಕಿದೆ. 

ರಾಣಿಪುರ ಪ್ರದೇಶದಲ್ಲಿ 35 ವರ್ಷದ ಆನಂದಿಲಾಲ್ ಖುಷ್ವಾ ಎಂಬುವವರು ಗಣಿಯನ್ನು ಭೋಗ್ಯಕ್ಕೆ ಪಡೆದಿದ್ದು, ಅವರು 10.69 ಕ್ಯಾರಟ್ ನ ವಜ್ರವನ್ನು ಸ್ಥಳೀಯ ವಜ್ರದ ಕಚೇರಿಗೆ ನೀಡಿದ್ದಾರೆ ಎಂದು  ಪನ್ನಾ ಜಿಲ್ಲೆಯ ವಜ್ರದ ಅಧಿಕಾರಿ ಆರ್.ಕೆ. ಪಾಂಡೆ ಮಾಹಿತಿ ನೀಡಿದ್ದಾರೆ.

ಮಾರುಕಟ್ಟೆಗೆ ಬಂದ ವಜ್ರದ ಮಾಸ್ಕ್

ಇತ್ತ ಖುಷ್ವಾ 70 ಸೆಂಟ್ ವಜ್ರವನ್ನು ಡೆಪಾಸಿಟ್ ಮಾಡಿದ್ದರು. ಕೊರೋನಾ ಲಾಕ್​ಡೌನ್ ವಿನಾಯಿತಿ ನೀಡಿದ ಮೇಲೆ ಸಿಕ್ಕಂಥ  ಅದ್ಭುತ ವಜ್ರ ಇದಾಗಿದೆ ಎಂದು ಹೇಳಿದ್ದಾರೆ.

ವಜ್ರವನ್ನು ಇನ್ನು ಮೌಲ್ಯಮಾಪನ ಮಾಡಲಾಗಿಲ್ಲ. ಅಂಧಾಜು 50  ಲಕ್ಷ ಆರಂಭಿಕ ಬೆಲೆ ಆಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ನಾನು ಹಾಗೂ ನನ್ನ ಸ್ನೇಹಿತರು ಆರು ತಿಂಗಳಿಂದ ಗಣಿಯಲ್ಲಿ ಕೆಲಸ ಮಾಡುತ್ತಿದ್ದು ಈ ವಜ್ರ ನಮಗೆ ಹೊಸ ಹುರುಪು ನೀಡಿದೆ ಎಂದು ಆನಂದಿಲಾಲ್ ಖುಷ್ವಾ ಹೇಳಿದ್ದಾರೆ.

 ಪನ್ನಾ ಜಿಲ್ಲೆ ಇರುವುದು ಮಧ್ಯಪ್ರದೇಶದ ಬುಂದೇಲ್ ಖಂಡ್ ಭಾಗದಲ್ಲಿ. ಇದು ವಜ್ರದ ನಿಕ್ಷೇಪಗಳಿಗೆ ದಶಕಗಳಿಂದಲೂ ಹೆಸರುವಾಸಿ. ಹಿಂದೊಮ್ಮೆ ಆಂಧ್ರಪ್ರದೇಶದ ರೈತರೊಬ್ಬರಿಗೆ ಭೂಮಿಯಲ್ಲಿ ವಜ್ರದ ಹರಳುಗಳು ಸಿಕ್ಕಿದ್ದವು. 

 

click me!