ಐಟಿ ಕಂಪನಿಗಳಿಗೆ ಗುಡ್‌ ನ್ಯೂಸ್: ಸರ್ಕಾರದ ಈ ಆದೇಶದಿಂದ ಫುಲ್ ಖುಷ್!

By Suvarna NewsFirst Published Jul 22, 2020, 3:47 PM IST
Highlights

ಕೊರೋನಾತಂಕ ನಡುವೆ ವರ್ಕ್ ಫ್ರಂ ಹೋಂ ಮೊರೆ ಹೋದ ಐಟಿ ಕಂಪನಿಗಳು| ಸರ್ಕಾರದ ಒಂದು ಆದೇಶದಿಂದ ಐಟಿ ಕಂಪನಿಗಳಳು ನಿರಾಳ| ಅಷ್ಟಕ್ಕೂ ಸರ್ಕಾರ ಕೊಟ್ಟ ಈ ಆದೇಶವೇನು?

ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ವರ್ಕ್ ಫ್ರಂ ಹೋಂ ಸಡಿಲಿಕೆಯನ್ನು, 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಕೊರೋನಾತಂಕದ ನಡುವೆ ಸರ್ಕಾರದ ಈ ಆದೇಶ ಐಟಿ ಕಂಪನಿಗಳಿಗೆ ಕೊಂಚ ನೆಮ್ಮದಿ ನೀಡಿದೆ. 

ಈ ಸಡಿಲಿಕೆಯನ್ವಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಈ ವರ್ಷದ ಕೊನೆವರೆಗೆ ಅಂದರೆ ಡಿಸೆಂಬರ್‌ವರೆಗೂ ಮನೆಯಿಂದಲೇ ಕೆಲಸ ನಿರ್ವಹಿಸಲು ಹೇಳಹುದು. ಈ ಹಿಂದೆ ಜುಲೈವರೆಗಷ್ಟೇ ಸರ್ಕಾರ ಈ ಅವಕಾಶ ನೀಡಿತ್ತು.

Once again a big thank you from the IT fraternity to for extending the OSP relaxations.

Great step to ensure business operates seamlessly in the current environment. pic.twitter.com/EID8HGC8dU

— CP Gurnani (@C_P_Gurnani)

ಸರ್ಕಾರ ಈ ನಿಯಮ ಸಡಿಲಿಕೆ ಮಾಡಿದ ಬೆನ್ನಲ್ಲೇ ಟೆಕ್ ಮಹೀಂದ್ರ ಸಿಇಒಸಿ. ಪಿ. ಗುರ್ನಾನಿ ಟ್ವೀಟ್ ಮಾಡುತ್ತಾ ಸರ್ಕಾರದ ಈ ನಡೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೇ ವರ್ಕ್‌ ಫ್ರಂ ಹೋಂಗೆ ಸರ್ಕಾರ ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದ ಎಂದಿದ್ದಾರೆ.

ಕೊರೋನಾತಂಕ ನಡುವೆ ಬಹುತೇಕ ಎಲ್ಲಾ ಕಂಪನಿಗಳು ವರ್ಕ್ ಫ್ರಂ ಹೋಂ ಮೊರೆ ಹೋಗಿವೆ. ಅಲ್ಲದೇ ಮುಂದಿನ ದಿನಗಳಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇದೇ ವ್ಯವಸ್ಥೆಯನ್ನು ಮುಂದುವರೆಸುವ ಸಾಧ್ಯತೆಗಳೂ ಇವೆ.

click me!