ಪಹಲ್ಗಾಂ ದಾಳಿ ಬಳಿಕ ಭಾರತದ ಮೇಲೆ 10 ಲಕ್ಷ ಸೈಬರ್‌ ದಾಳಿ!

Published : May 03, 2025, 05:47 AM ISTUpdated : May 03, 2025, 07:30 AM IST
ಪಹಲ್ಗಾಂ ದಾಳಿ ಬಳಿಕ ಭಾರತದ ಮೇಲೆ 10 ಲಕ್ಷ ಸೈಬರ್‌ ದಾಳಿ!

ಸಾರಾಂಶ

ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ಹ್ಯಾಕಿಂಗ್ ಗುಂಪುಗಳು ಭಾರತದ ವೆಬ್‌ಸೈಟ್‌ ಮತ್ತು ಪೋರ್ಟಲ್‌ ಗುರಿಯಾಗಿಸಿ 10 ಲಕ್ಷಕ್ಕೂ ಹೆಚ್ಚು ಸೈಬರ್‌ ದಾಳಿ ನಡೆಸಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಮುಂಬೈ (ಮೇ.3): ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ಹ್ಯಾಕಿಂಗ್ ಗುಂಪುಗಳು ಭಾರತದ ವೆಬ್‌ಸೈಟ್‌ ಮತ್ತು ಪೋರ್ಟಲ್‌ ಗುರಿಯಾಗಿಸಿ 10 ಲಕ್ಷಕ್ಕೂ ಹೆಚ್ಚು ಸೈಬರ್‌ ದಾಳಿ ನಡೆಸಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಏ.22ರ ಪಹಲ್ಗಾಂ ದಾಳಿಯ ಬಳಿಕ ಮಹಾರಾಷ್ಟ್ರದಲ್ಲಿ ಡಿಜಿಟಲ್ ದಾಳಿಗಳು ಹೆಚ್ಚಾಗಿರುವುದನ್ನು ಮಹಾರಾಷ್ಟ್ರ ಸೈಬರ್‌ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಸೈಬರ್‌ ಇಲಾಖೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಯಶಸ್ವಿ ಯಾದವ್ ಮಾಹಿತಿ ನೀಡಿದ್ದು, ‘ಪಹಲ್ಗಾಂ ದಾಳಿಯ ನಂತರ ಭಾರತದ ಮೇಲೆ 10 ಲಕ್ಷಕ್ಕೂ ಹೆಚ್ಚು ಸೈಬರ್‌ ದಾಳಿ ನಡೆದಿವೆ. ಈ ದಾಳಿಗಳನ್ನು ಪಾಕಿಸ್ತಾನ, ಮಧ್ಯಪ್ರಾಚ್ಯ, ಇಂಡೋನೇಷ್ಯಾ ಮತ್ತು ಮೊರಾಕ್ಕೋದಿಂದ ನಡೆಸಲಾಗಿದೆ. ಹಲವು ಹ್ಯಾಕಿಂಗ್ ಗುಂಪುಗಳು ತಮ್ಮನ್ನು ಇಸ್ಲಾಮಿಕ್ ಗುಂಪುಗಳು ಎಂದು ಹೇಳಿಕೊಂಡಿವೆ. ಇದು ಬಹುಶಃ ಸೈಬರ್ ಯುದ್ಧವಾಗಿರಬಹುದು’ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ದಾಳಿಗೆ ನಡುಕ । ಯುದ್ಧ ತಡೆಯಲು ಮುಸ್ಲಿಂ ದೇಶಗಳಿಗೆ ಪಾಕ್ ದುಂಬಾಲು!

ಪಹಲ್ಗಾಂ ನ್ಯಾಯಕ್ಕಾಗಿ ದೇಶ ಕಾಯುತ್ತಿದೆ: ಖರ್ಗೆ

ಪಹಲ್ಗಾಂ ದಾಳಿಯ ವಿಚಾರವಾಗಿ ‘ಇಡೀ ದೇಶ ಹೊಣೆಗಾರಿಕೆ, ಉತ್ತರ ಮತ್ತು ನ್ಯಾಯಕ್ಕಾಗಿ ಕಾಯುತ್ತಿದೆ. ‘ ಉಗ್ರ ದಾಳಿಯಿಂದ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಯಾವುದೇ ಕಾರ್ಯತಂತ್ರವನ್ನು ಹೊರತಂದಿಲ್ಲ. ಆದರೆ ಇಡೀ ವಿಪಕ್ಷವು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆಗಿದೆ’ ಎಂದರು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಡಬ್ಲ್ಯುಸಿ ಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಇದನ್ನೂ ಓದಿ: 12 ವರ್ಷದಿಂದ ಪಾಕ್‌ ಪರ ಬೇಹುಗಾರಿಕೆ: ರವಿ ಕಿಶನ್‌ ಹೆಸರಿನ ಪಠಾಣ್ ಖಾನ್‌ ಬಂಧನ!

ದೆಹಲಿಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಿಡಬ್ಲ್ಯುಸಿಯಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ‘ಇಡೀ ದೇಶ ಹೊಣೆಗಾರಿಕೆ, ಉತ್ತರಗಳು ಮತ್ತು ನ್ಯಾಯಕ್ಕಾಗಿ ಕಾಯುತ್ತಿದೆ. ಕ್ಷಮಿಸುವುದಕ್ಕೆ ಸಾಧ್ಯವಾಗದ ಇಂತಹ ಸಮಯದಲ್ಲಿ ಇದು ರಾಜಕೀಯಕ್ಕೆ ಸಮಯವಲ್ಲ. ಬದಲಾಗಿ ಏಕತೆ, ಶಕ್ತಿ ಮತ್ತು ರಾಷ್ಟ್ರೀಯ ಸಂಕಲ್ಪಕ್ಕಾಗಿ ಕರೆ ನೀಡುವ ಸಮಯ. ನಾವು ಪಕ್ಷಪಾತದ ವಿಭಜನೆಗಳನ್ನು ಮೀರಿ ನಿಂತು ಭಾರತ ಒಟ್ಟಾಗಿ ನಿಲ್ಲುತ್ತದೆ ಎಂಬ ಸಂದೇಶ ಸಾರಬೇಕು. ಪಾಕಿಸ್ತಾನಕ್ಕೆ ಪಾಠ ಕಲಿಸಲು ಮತ್ತು ಭಯೋತ್ಪಾದನೆ ನಿಗ್ರಹಿಸಲು ಒಗ್ಗಟ್ಟಾಗಿರಬೇಕು’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?