Covid cases ಮತ್ತೆ ಏರಿಕೆ ಕಂಡ ಕೊರೋನಾ ಪ್ರಕರಣ, ಕಳೆದ 24 ಗಂಟೆಯಲ್ಲಿ 1,150 ಕೇಸ್!

By Suvarna News  |  First Published Apr 17, 2022, 4:55 PM IST
  • ಇಳಿಕೆಯಾಗಿದ್ದ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಳ
  • ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 1,150 ಕೇಸ್ ಪತ್ತೆ
  • ದೆಹಲಿ ಪಾಸಿಟಿಟಿ ರೇಟ್ ಶೇ.26ಕ್ಕೆ ಏರಿಕೆ
     

ನವದೆಹಲಿ(ಏ.17): ಕೆಲ ರಾಜ್ಯಗಳಲ್ಲಿ ಕೊರೋನಾ ಏರಿಕೆಯಾಗಿದ್ದರೂ ಒಟ್ಟಾರೆ ಭಾರತದಲ್ಲಿ ಕೊರೋನಾ ಪ್ರರಕರಣ ಸಂಖ್ಯೆ ಇಳಿಕೆಯತ್ತ ಸಾಗಿತ್ತು.  ಆದರೆ ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ವರದಿ ಆತಂಕ ತರುತ್ತಿದೆ. ಇದೀಗ ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ 1,150 ಪ್ರಕರಣ ದಾಖಲಾಗಿದೆ. ಇದರಲ್ಲಿ ದೆಹಲಿಯಲ್ಲೇ ಗರಿಷ್ಠ ಪ್ರಕರಣಗಳು ಪತ್ತೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಸಕ್ರೀಯ ಕೊರೋನಾ ಪ್ರಕರಣ ಸಂಖ್ಯೆ 11,558ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ ನಾಲ್ವರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ  5,21,751ಕ್ಕೆ ಏರಿಕೆಯಾಗಿದೆ.

Latest Videos

undefined

ನಿರ್ಬಂಧ ಸಡಿಲಿಕೆಯಿಂದ ಕೊರೋನಾ ಸೋಂಕು ಹೆಚ್ಚಳ: WHO ಎಚ್ಚರಿಕೆ

ಭಾರತದ ಒಟ್ಟು ಕೊರೋನಾ ಪಾಸಿಟಿವಿಟಿ ರೇಟ್ 0.31. ಆದರೆ ದೆಹಲಿಯಲ್ಲಿ ತದ್ವಿರುದ್ಧವಾಗಿದೆ. ದೆಹಲಿ ಪಾಸಿಟಿವಿಟಿ ರೇಟ್ ಶೇಕಡಾ 26ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 5.33ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 461 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಶುಕ್ರವಾರ ಹೊಸ ಪ್ರಕರಣಗಳ ಸಂಖ್ಯೆ 366 ಆಗಿತ್ತು.

ಬೆಂಗಳೂರಿನಲ್ಲಿ 41 ಹೊಸ ಪ್ರಕರಣ ಪತ್ತೆ
ನಗರದಲ್ಲಿ ಶನಿವಾರ 41 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 33 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ.ಸದ್ಯ 1,371 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 3,300 ನಡೆದಿದ್ದು, ಪಾಸಿಟಿವಿಟಿ ದರ ಶೇ.1ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು 6 ಕಡಿಮೆಯಾಗಿವೆ (ಶುಕ್ರವಾರ 47 ಮಂದಿಗೆ ಸೋಂಕು, ಶೂನ್ಯ ಸಾವು). ಸದ್ಯ ಸಕ್ರಿಯ ಸೋಂಕಿತರ ಪೈಕಿ 6 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ವೆಂಟಿಲೇಟರ್‌ ಮತ್ತು ಆಕ್ಸಿಜನ್‌ ಹಾಸಿಗೆಯಲ್ಲಿ ತಲಾ ಒಬ್ಬರು, ಸಾಮಾನ್ಯ ಹಾಸಿಗೆಗಳಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 1,351 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.6 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,964 ಇದೆ. ಎರಡು ವಾರದಿಂದ ಸೋಂಕು ಹೆಚ್ಚಿರುವ ಕಂಟೈನ್ಮೆಂಟ್‌ ಪ್ರದೇಶಗಳು ವರದಿಯಾಗಿಲ್ಲ.

ಕರ್ನಾಟಕದ ಲಸಿಕೆ ಪ್ರಯೋಗ ಯಶಸ್ವಿ: ಬೆಂಗಳೂರಿನ ಐಐಎಸ್ಸಿಯಿಂದ ಅಭಿವೃದ್ಧಿ

ದ.ಕ.ದಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್‌
ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಒಂದು ಕೊರೋನಾ ಪ್ರಕರಣ ಪತ್ತೆಯಾಗಿದೆ. ಇಬ್ಬರು ಗುಣಮುಖರಾಗಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 4ಕ್ಕೆ ಇಳಿದಿದೆ. ಇದುವರೆಗೆ ಒಟ್ಟು ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 1,35,498 ಆಗಿದ್ದು, ಅವರಲ್ಲಿ 1,33,644 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,850 ಆಗಿದೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ ತಿಳಿಸಿದೆ. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 65 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಯಾರಲ್ಲೂ ಕೋವಿಡ್‌ ಪತ್ತೆಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳೂ ಇಲ್ಲ. ಜಿಲ್ಲೆಲ್ಲಿ ಇದುವರೆಗೆ 539 ಸೋಂಕಿತರು ಮೃತಪಟ್ಟಿದ್ದಾರೆ.

ಮಕ್ಕಳಿಗೆ ಕೋರೋನಾ ಸೋಂಕು ತಗುಲಿದರೆ ಚಿಂತೆ ಬೇಡ: ತಜ್ಞ
ಭಾರತದಲ್ಲಿ ಕೊರೋನಾ ಪ್ರಕರಣಗಳು ತೀವ್ರ ಇಳಿಕೆ ಕಂಡಿವೆ. ಆದರೆ ಇತ್ತೀಚೆಗೆ ದೆಹಲಿ ಸೇರಿದಂತೆ ಕೆಲ ನಗರಗಳಲ್ಲಿ ಮಕ್ಕಳಲ್ಲಿ ಕೋವಿಡ್‌ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಭಾರತದ ಪ್ರಮುಖ ಬಯೋಮೆಡಿಕಲ್‌ ವಿಜ್ಞಾನಿ ಡಾ.ಗಗನ್‌ದೀಪ್‌ ಕಾಂಗ್‌, ‘ಕೊರೋನಾ ಸೋಂಕಿಗೆ ತುತ್ತಾಗುವ ಅತ್ಯುತ್ತಮ ಸಮಯ ಎಂದರೆ ನೀವು ಆರೋಗ್ಯವಂತ ಮಕ್ಕಳಾಗಿದ್ದಾಗ ಎಂದು ನಾನು ಭಾವಿಸುತ್ತೇನೆ. ಮೂಲತಃ ಸೋಂಕಿಗೆ ಒಳಗಾದ ಬಹುಪಾಲು ಮಕ್ಕಳಲ್ಲಿ ತೀವ್ರ ರೋಗಲಕ್ಷಣಗಳಿರುವುದಿಲ್ಲ. ಇತ್ತೀಚಿನ ಸೆರೋ ಸಮೀಕ್ಷೆ ಪ್ರಕಾರ ಶೇ.80ರಷ್ಟುಮಕ್ಕಳು ಈಗಾಗಲೇ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ. ನಾವು ಸೋಂಕಿನಿಂದ ರಕ್ಷಣೆ ನಿರೀಕ್ಷಿಸಬಾರದು. ವೈರಸ್‌ ವಿಕಸನಗೊಳ್ಳುತ್ತಿದ್ದಂತೆ ಮತ್ತೆ ಮತ್ತೆ ವಿಶೇಷವಾಗಿ ಮಕ್ಕಳಿಗೆ ಸೋಂಕು ತಗುಲುತ್ತಲೇ ಇರುತ್ತದೆ’ ಎಂದು ತಿಳಿಸಿದ್ದಾರೆ. ಇದೇ ವೇಳೆ ಕೊರೋನಾ ಕಾರಣದಿಂದ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವುದು ಒ್ಳಯ ನಿರ್ಧಾರ ಅಲ್ಲ ಎಂದು ತಿಳಿಸಿದರು.

click me!