ಭಾರತ ರತ್ನ ಗೌರವ ಪಡೆದ ಏಕೈಕ ಕ್ರೀಡಾಪಟು ಸಚಿನ್ ತೆಂಡೂಲ್ಕರ್, ವಿವಾದವಿಲ್ಲದ ವೃತ್ತಿ ಬದುಕು!

By Suvarna News  |  First Published Apr 22, 2022, 1:14 PM IST

* ಭಾರತದ ಸ್ವಾತಂತ್ರ್ಯೋತ್ಸವಕ್ಕೆ 75ರ ಸಂಭ್ರಮ

* ಅಮೃತ ಮಹೋತ್ಸವದ ವೇಳೆ ಭಾರತ ಮಾತೆ ಹೆಸರು ಬೆಳಗಿದ ಪ್ರತಿಭೆಗಳು

* ಭಾರತ ರತ್ನ ಗೌರವ ಪಡೆದ ಏಕೈಕ ಕ್ರೀಡಾಪಟು ಸಚಿನ್ ತೆಂಡೂಲ್ಕರ್


ಮುಂಬೈ(ಏ.22): ಭಾರತವು ಈ ವರ್ಷ ತನ್ನ ಸ್ವಾತಂತ್ರ್ಯದ 75 ನೇವರ್ಷವನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭದಲ್ಲಿ, ನಮ್ಮ ಓದುಗರಿಗಾಗಿ ವಿಶೇಷ ವ್ಯಕ್ತಿಗಳಿಗೆ ಸಂಬಂಧಿಸಿದ ವಿಶೇಷ ಮಾಹಿತಿಯನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ. ಈ 75 ವರ್ಷಗಳಲ್ಲಿ, ಇವರೆಲ್ರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ್ದು ಮಾತ್ರವಲ್ಲದೆ ತಮ್ಮ ವಿಶಿಷ್ಟ ನಡವಳಿಕೆಯಿಂದ ಇಡೀ ರಾಷ್ಟ್ರಕ್ಕೇ ಪ್ರೇರಣೆಯಾಗಿದ್ದಾರೆ. ಸದ್ಯ ನಾವು ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಬಗ್ಗೆ ಕೆಲ ಮಾಹಿತಿ.

ಆರಂಭಿಕ ಜೀವನ, ಕುಟುಂಬದ ಹಿನ್ನೆಲೆ

Tap to resize

Latest Videos

undefined

ಸಚಿನ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ಆರಂಭಿಕ ಜೀವನ, ಬಾಲ್ಯ, ಕ್ರಿಕೆಟ್ ಪ್ರಯಾಣ ಮತ್ತು ಪ್ರಶಸ್ತಿಗಳನ್ನು ಬಗ್ಗೆ ಕೆಲ ಮಾಹಿತಿ. ಸಚಿನ್ ತೆಂಡೂಲ್ಕರ್ ಅವರು ಏಪ್ರಿಲ್ 24, 1973 ರಂದು ಮುಂಬೈನ ದಾದರ್‌ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಸಚಿನ್ ರಮೇಶ್ ತೆಂಡೂಲ್ಕರ್. ಅವರು ಸಾರಸ್ವತ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಅವರ ತಂದೆ ರಮೇಶ್ ತೆಂಡೂಲ್ಕರ್ ಮರಾಠಿ ಕವಿ ಮತ್ತು ಕಾದಂಬರಿಕಾರರಾಗಿದ್ದರು. ಅವರ ತಾಯಿ ರಜನಿ ವಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.

ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್​​, ಕ್ರಿಕೆಟ್ ದೇವರ ಕಾಲಿಗೆ ಬಿದ್ದಿದ್ಯಾಕೆ?

ಸಚಿನ್‌ಗೆ ಇಬ್ಬರು ಸಹೋದರರಿದ್ದಾರೆ, ಅವರ ಹೆಸರು ನಿತಿನ್ ಮತ್ತು ಅಜಿತ್. ಅವರಿಗೆ ಒಬ್ಬ ಸಹೋದರಿಯೂ ಇದ್ದಾರೆ, ಅವರ ಹೆಸರು ಸವಿತಾ. ಅವರು ಶಾರದಾಶ್ರಮ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ತನ್ನ ಶಾಲಾ ದಿನಗಳಲ್ಲಿ, ಅವರು ವೇಗದ ಬೌಲರ್ ಆಗಲು ಬಯಸಿದ್ದರು. ಇದಕ್ಕಾಗಿ ಅವರು MRF ಪೇಸ್ ಫೌಂಡೇಶನ್‌ಗೆ ಹಾಜರಾಗಿದ್ದರು, ಆದರೆ ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಅವರು ಸೂಚಿಸಿದಂತೆ ಬ್ಯಾಟಿಂಗ್‌ನತ್ತ ಗಮನ ಹರಿಸಿದರು. ಸಚಿನ್ ತೆಂಡೂಲ್ಕರ್ ಕೂಡ ಬಾಲ್ಯದಲ್ಲಿ ಟೆನಿಸ್ ಆಡುವುದನ್ನು ಇಷ್ಟಪಡುತ್ತಿದ್ದರು.


ಕ್ರಿಕೆಟ್ ವೃತ್ತಿಜೀವನ

ಸಚಿನ್ ತೆಂಡೂಲ್ಕರ್ ಅವರು 14ನೇ ವಯಸ್ಸಿನಲ್ಲಿ ಶಾಲಾ ಪಂದ್ಯವೊಂದರಲ್ಲಿ ವಿನೋದ್ ಕಾಂಬ್ಳಿ ಅವರೊಂದಿಗೆ 664 ರನ್‌ಗಳ ದಾಖಲೆಯ ಜೊತೆಯಾಟವನ್ನು ಆಡಿದರು. ಈ ಜೊತೆಯಾಟದಲ್ಲಿ ಅವರು 326 ರನ್ ಗಳಿಸಿದರು. ಈ ಇನ್ನಿಂಗ್ಸ್ ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತು. ಒಂದು ವರ್ಷದ ನಂತರ, 15 ನೇ ವಯಸ್ಸಿನಲ್ಲಿ, ಅವರು ಬಾಂಬೆಗೆ (ಈಗ ಮುಂಬೈ) ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಒಂದು ವರ್ಷದ ನಂತರ, 16 ಮತ್ತು 205 ದಿನಗಳ ವಯಸ್ಸಿನಲ್ಲಿ, ನವೆಂಬರ್ 1989 ರಲ್ಲಿ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಪಾದಾರ್ಪಣೆ ಮಾಡಿದ ಅವರು ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.

ಸಚಿನ್ ಮೇ 24, 1995 ರಂದು ಅಂಜಲಿಯನ್ನು ವಿವಾಹವಾದರು. ಅಂಜಲಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರು, ಆದರೆ ಕುಟುಂಬವನ್ನು ನೋಡಿಕೊಳ್ಳಲು ತಮ್ಮ ವೃತ್ತಿಜೀವನವನ್ನು ತೊರೆದರು. ಸಚಿನ್ ಇಬ್ಬರು ಮಕ್ಕಳ ತಂದೆ (ಸಾರಾ ತೆಂಡೂಲ್ಕರ್ ಮತ್ತು ಅರ್ಜುನ್ ತೆಂಡೂಲ್ಕರ್). ಸಾರಾ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿದ್ದು, ಅರ್ಜುನ್ ತಂದೆಯ ಹಾದಿಯಲ್ಲೇ ಕ್ರಿಕೆಟ್ ಆಡುತ್ತಿದ್ದಾರೆ.

ಆಗಸ್ಟ್ 1996 ರಲ್ಲಿ, 23 ನೇ ವಯಸ್ಸಿನಲ್ಲಿ, ತೆಂಡೂಲ್ಕರ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ಮಾಡಲಾಯಿತು. ಆದರೆ, 1996ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋಲನುಭವಿಸಿತ್ತು. ಸಚಿನ್ 523 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿದ್ದರು. 1998 ರಲ್ಲಿ ಅವರನ್ನು 'ಖೇಲ್ ರತ್ನ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು, ಇದು 1997-98 ಋತುವಿನಲ್ಲಿ ಅವರ ಪ್ರಬಲ ಪ್ರದರ್ಶನಕ್ಕಾಗಿ ಭಾರತೀಯ ಕ್ರೀಡಾಪಟುಗಳಿಗೆ ನೀಡಲಾದ ಅತ್ಯುನ್ನತ ಪ್ರಶಸ್ತಿಯಾಗಿದೆ. 1999ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಭಾರತ ವಿಶ್ವಕಪ್‌ನಿಂದ ಹೊರಬಿದ್ದಿತ್ತು. ಅದೇ ವರ್ಷದಲ್ಲಿ ಭಾರತವು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.

2003ರ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೆ ಪ್ರಯಾಣ ಬೆಳೆಸಿತ್ತು. ತೆಂಡೂಲ್ಕರ್ ತಮ್ಮ ತಂಡವನ್ನು ಫೈನಲ್ ತಲುಪಲು ಸಂಪೂರ್ಣ ಕೊಡುಗೆ ನೀಡಿದರು. ಆದರೆ, ಆಸ್ಟ್ರೇಲಿಯಾ ವಿರುದ್ಧ ಸೋಲುಂಡು ಭಾರತಕ್ಕೆ ವಿಶ್ವಕಪ್ ಗೆಲುವು ಸಿಗಲಿಲ್ಲ. ಆ ಟೂರ್ನಿಯಲ್ಲಿ ಸಚಿನ್ 60.20ರ ಸರಾಸರಿಯಲ್ಲಿ 673 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು. ಅವರು ಪಂದ್ಯಾವಳಿಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಸಚಿನ್ ಡಿಸೆಂಬರ್ 2005 ರಲ್ಲಿ ಇತಿಹಾಸ ನಿರ್ಮಿಸಿದರು. ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ತಮ್ಮ ದಾಖಲೆಯ 35 ನೇ ಶತಕವನ್ನು ಗಳಿಸಿದರು. 125ನೇ ಟೆಸ್ಟ್‌ನಲ್ಲಿ ಅವರು ಈ ಸಾಧನೆ ಮಾಡಿದರು. ಈ ಮೂಲಕ ಅವರು ಭಾರತದ ಶ್ರೇಷ್ಠ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (34 ಶತಕ) ದಾಖಲೆಯನ್ನು ದಾಟಿದರು.

Sachin Tendulkar ಕೋಲ್ಕತಾದ ಕ್ಷೌರಿಕನ ಪುತ್ರಗೆ ಸಚಿನ್‌ 5 ದಿನ ಕೋಚಿಂಗ್‌!

ಜೂನ್ 2007 ರಲ್ಲಿ, ತೆಂಡೂಲ್ಕರ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟಿದರು. ಆ ಸಮಯದಲ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ 15,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರರಾದರು. ಇದರ ನಂತರ, ನವೆಂಬರ್ 2011 ರಲ್ಲಿ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 15,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಒಂದು ತಿಂಗಳ ನಂತರ, ಅವರು ದಕ್ಷಿಣ ಆಫ್ರಿಕಾ ವಿರುದ್ಧ ODI ನಲ್ಲಿ ದ್ವಿಶತಕ ಗಳಿಸಿದರು. ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ 200 ರನ್ ಗಳಿಸಿದ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ವ್ಯಕ್ತಿ ಎನಿಸಿಕೊಂಡರು.

ಸಚಿನ್ ಅವರನ್ನು 2010ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ವರ್ಷದ ಕ್ರಿಕೆಟಿಗ ಎಂದು ಹೆಸರಿಸಿದೆ. ಮಾರ್ಚ್ 2012 ರಲ್ಲಿ, ಬಾಂಗ್ಲಾದೇಶ ವಿರುದ್ಧದ ODI ನಲ್ಲಿ ಸಚಿನ್ ತಮ್ಮ ದಾಖಲೆಯ 100 ನೇ ಅಂತಾರಾಷ್ಟ್ರೀಯ ಶತಕವನ್ನು (51 ಟೆಸ್ಟ್ ಮತ್ತು 49 ODI) ಗಳಿಸಿದರು. ಸಚಿನ್ 2012 ರಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. 2013ರಲ್ಲಿ ಸಚಿನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ಸಮಯದಲ್ಲಿ, ಸಚಿನ್ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರ ದಾಖಲೆ ಇಂದಿಗೂ ಉಳಿದಿದೆ.

ಸಚಿನ್ ಅವರ ಹೆಸರಿನಲ್ಲಿ ಒಟ್ಟು 34,357 ರನ್‌ಗಳಿವೆ. ಇದರಲ್ಲಿ ಟೆಸ್ಟ್‌ನಲ್ಲಿ 15,921 ರನ್‌ಗಳು ಮತ್ತು ಏಕದಿನದಲ್ಲಿ 18,426 ರನ್‌ಗಳು ದಾಖಲಾಗಿವೆ. 2013ರಲ್ಲಿಯೇ ಐಪಿಎಲ್‌ನ 6 ಸೀಸನ್‌ಗಳನ್ನು ಆಡಿದ ನಂತರ ಸಚಿನ್ ಅವರಿಗೆ ವಿದಾಯ ಹೇಳಿದರು. ಸಚಿನ್ ಐಪಿಎಲ್‌ನಲ್ಲಿ 78 ಪಂದ್ಯಗಳಲ್ಲಿ 2,334 ರನ್ ಗಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟನ್‌ಗಟ್ಟಲೆ ರನ್‌ಗಳನ್ನು ಗಳಿಸಿದ್ದು ಮತ್ತು ಆಟದ ಕಡೆಗೆ ಅವರ ಸಮರ್ಪಣೆ ಅವರನ್ನು ಶ್ರೇಷ್ಠರನ್ನಾಗಿ ಮಾಡಿದೆ. ಅವರ ಪ್ರಬಲ ಆಟದಿಂದಾಗಿ, ಅವರನ್ನು ದಿವಂಗತ ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗ ಸರ್ ಡಾನ್ ಬ್ರಾಡ್‌ಮನ್‌ಗೆ ಹೋಲಿಸಲಾಯಿತು.

ಭಾರತ ರತ್ನ ಸಚಿನ್

2012 ರಲ್ಲಿ, ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರಾದರು. ಆ ಸ್ಥಾನ ಅಲಂಕರಿಸಿದ ಮೊದಲು ಕ್ರಿಯಾಶೀಲ ಕ್ರೀಡಾಪಟು ಎನಿಸಿಕೊಂಡರು. ಅವರ ರಾಜ್ಯಸಭೆಯ ಅವಧಿ 2018 ರಲ್ಲಿ ಕೊನೆಗೊಂಡಿತು. 2014 ರಲ್ಲಿ, ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಲಾಯಿತು. ಇಂತಹ ಗೌರವಕ್ಕೆ ಪಾತ್ರರಾದ ದೇಶದ ಏಕೈಕ ಆಟಗಾರ ಸಚಿನ್ ಆಗಿದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 'ಹಾಲ್ ಆಫ್ ಫೇಮ್'ಗೆ ಸೇರಿಸಲಾಯಿತು. ಸಚಿನ್ ಕ್ರಿಕೆಟ್ ಆಡಿದ ಸಮಯದಲ್ಲಿ, ಅವರ ವೃತ್ತಿಜೀವನವು ಸಂಪೂರ್ಣವಾಗಿ ನಿರ್ಮಲವಾಗಿತ್ತು. ಈ ಸಮಯದಲ್ಲಿ, ಅವರು ವಿವಾದಗಳಿಂದ ದೂರವಿರುವುದು ಮಾತ್ರವಲ್ಲದೆ, ಅವರು ವರ್ಷಗಳ ಕಾಲ ದೇಶದ ಯುವಕರನ್ನು ಪ್ರೇರೇಪಿಸಿದರು.
 

click me!