ಮಂಗಳೂರಿನಲ್ಲಿ ದಾಖಲೆ ಬರೆದ 900 ಕೆ.ಜಿ‌ ತೂಕದ ತಿರಂಗ!

By Ravi Nayak  |  First Published Aug 14, 2022, 12:57 PM IST

ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ರಚಿಸಲಾಗಿರುವ ತಿರಂಗ ಬರೋಬ್ಬರಿ 900 ಕೆ.ಜಿ‌ ತೂಕದ್ದು. ಇದೊಂದು ದಾಖಲೆಯಾಗಿದೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ‌ಮಂಗಳೂರು

ಮಂಗಳೂರು (ಆ.14) : ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ಬಳಸಿ ರಚಿಸಿದ ತ್ರಿವರ್ಣ ಧ್ವಜದ ಚಿತ್ರಾಕೃತಿ ಎಲ್ಲರ ಗಮನಸೆಳೆಯುತ್ತಿದ್ದು, ಬರೋಬ್ಬರಿ 900 ಕೆ.ಜಿ‌ ಧಾನ್ಯಗಳನ್ನು ಬಳಸಿ ಇದನ್ನು ರಚಿಸಿರುವುದು ಮತ್ತೊಂದು ದಾಖಲೆ. ಕಲಾವಿದ ಹಾಗೂ ಛಾಯಾಗ್ರಾಹಕ ಪುನಿಕ್ ಶೆಟ್ಟಿ(Punik Shetty) ಅವರ ನೇತೃತ್ವದಲ್ಲಿ ಗುರುಬೆಳದಿಂಗಳು ಸಮಿತಿ(Gurubeladingalu samiti)ಯ ಮೂವತ್ತು ಸದಸ್ಯರು ಸೇರಿ 38 ಫೀಟ್ ವೃತ್ತದಲ್ಲಿ ಈ ವಿಶಿಷ್ಟ ರಚನೆಯನ್ನು ನಿರ್ಮಿಸಿದ್ದಾರೆ.

Tap to resize

Latest Videos

ಉಳ್ಳಾಲ 'ಪಾಕಿಸ್ತಾನ' ಎಂದವರಿಗೆ 20 ತಿಂಗಳ ಬಳಿಕ ಖಾದರ್ ಕೊಟ್ಟ ಉತ್ತರ ಇದು!

300ಕೆಜಿ ಸಾಗು , 300ಕೆಜಿ ಹೆಸರುಕಾಳು, 300 ಕೆಜಿ ಕೆಂಪು ತೊಗರಿ ಬಳಸಿ ಒಟ್ಟು 900 ಕೆಜಿ ಧಾನ್ಯಗಳ ಜೊತೆಗೆ ಸಾಬಕ್ಕಿ, ಬೆಂಡೆಕಾಯಿ, ಮೂಲಂಗಿ, ಅಡಕೆ, ಕ್ಯಾರೆಟ್ ಮುಂತಾದ ತರಕಾರಿಗಳನ್ನೂ ಸೇರಿಸಿ ನವ ವಿಧಾನದಲ್ಲಿ ಸುಮಾರು 54 ಕಳಶವಿಟ್ಟು ಅಲಂಕರಿಸಿದ ಸುಂದರ ವಿಭಿನ್ನ ಶೈಲಿಯ ಈ ತಿರಂಗ ಚಿತ್ರಾಕೃತಿ ನೋಡಲು ಜನರು ಉತ್ಸಾಹದಿಂದ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಕಲಾಸೊಬಗಿಗೆ 108 ಬಾಳೆ ಎಲೆಯನ್ನೂ ಕೂಡಾ ಉಪಯೋಗಿಸಿ ಎಲ್ಲರ ಚಿತ್ತ ಅದರತ್ತ ಆಕರ್ಷಿಸುವಂತೆ ಮಾಡಿದ ಈ ವಿಭಿನ್ನ ಚಿತ್ರಾಕೃತಿಗೆ ಉಪಯೋಗಿಸಿದ ಚೆಂಡು ಹೂ ಮತ್ತಷ್ಟು ಮೆರುಗು ನೀಡುತ್ತಿದೆ. ತಾಜಾ ತರಕಾರಿ, ಧಾನ್ಯ ಹಾಗೂ ಹೂಗಳನ್ನು ಬಳಸಿ ಅಮೃತಮಹೋತ್ಸವದ ಶುಭ ಘಳಿಗೆಯಲ್ಲಿ ನಿರ್ಮಿಸಿದ ಈ ಚಿತ್ರಾಕೃತಿ ಬರೋಬ್ಬರಿ ಅಂದಾಜು ಸಾವಿರ ಕೆ.ಜಿ‌ ತೂಗುತ್ತದೆ. 

ದೇಶಭಕ್ತಿ ಹವಾ: ಇಂದು ಮನೆ ಮನೆಯಲ್ಲಿ ತಿರಂಗಾ ಹಾರಾ​ಟ

12 ಗಂಟೆಗಳ ಶ್ರಮ: ಪೂಜಾರಿ ಮೆಚ್ಚುಗೆ!

ಇನ್ನು ಈ ತಿರಂಗ ಕಲಾಕೃತಿಯನ್ನು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಉದ್ಘಾಟನೆ ಮಾಡಿದರು. ಕುದ್ರೋಳಿ ದೇವಸ್ಥಾನದ ನವೀಕರಣದ ರೂವಾರಿಯೂ ಆಗಿರೋ ಪೂಜಾರಿ ಯುವಕರ ತಂಡದ ಈ ಕಾರ್ಯವನ್ನು ಶ್ಲಾಘಿಸಿದರು. ನಿನ್ನೆ ರಾತ್ರಿ 9 ಗಂಟೆಯಿಂದ ಇಂದು ಬೆಳಿಗ್ಗೆ 9 ಗಂಟೆಯವರೆಗೆ ‌ನಿರಂತರ ಶ್ರಮ ಬಳಸಿ ಈ ತಿರಂಗ ಕಲಾಕೃತಿ ರಚಿಸಲಾಗಿದೆ. 900 ಕೆ.ಜಿ ಧಾನ್ಯಗಳ ಜೊತೆಗೆ 90 ಕೆ.ಜಿ ತರಕಾರಿ ಹಾಗೂ  ಒಂದಷ್ಟು ಹೂ ಕೂಡ ಬಳಸಲಾಗಿದೆ. ಅಲ್ಲದೇ ಇದರ ಅಡಿ ಭಾಗದಲ್ಲಿ ಮೂರು ಬಣ್ಣಗಳ ಬಟ್ಟೆಯನ್ನ ಹಾಸಿದ್ದು, ನಿರಂತರ ಶ್ರಮ ಪಡಲಾಗಿದೆ. ಸದ್ಯ ದೇವಸ್ಥಾನಕ್ಕೆ ಬರೋ ಭಕ್ತರಿಗೆ ಈ ತಿರಂಗ ಕಲಾಕೃತಿ ಆಕರ್ಷಣೆಯ ಕೇಂದ್ರವಾಗಿದ್ದು, ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡ್ತಿದಾರೆ.

click me!