ಸಿದ್ದಗಂಗಾ ಮಠದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

By Ravi Nayak  |  First Published Aug 14, 2022, 12:29 PM IST
  • ಸಿದ್ದಗಂಗಾ ಮಠದಲ್ಲಿ 75ನೇ ಸ್ವಾತಂತ್ರೋತ್ಸವದ ಸಂಭ್ರಮ
  • ಸಿದ್ದಗಂಗಾ ಮಠದಲ್ಲಿ ರಾರಾಜಿಸಿದ ಕೇಸರಿ, ಬಿಳಿ, ಹಸಿರು
  • ಮಠದ ಕಟ್ಟಡಕ್ಕೆ ತಿರಂಗ ಬಣ್ಣದ ವಿದ್ಯುತ್ ದೀಪಾಲಂಕಾರ
  • ಭಾರತ ನಕ್ಷೆ ಸೃಷ್ಟಿಸಿ ಧ್ವಜಾರೋಹಣ

ತುಮಕೂರು (ಆ.14) : ಈ ಬಾರಿಯ 75 ನೇ ಸ್ವಾತಂತ್ರ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ತುಮಕೂರಿನ ಕ್ಯಾತಸಂದ್ರದಲ್ಲಿರುವ ಪ್ರಸಿದ್ದ  ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳು ರಾರಾಜಿಸಿವೆ. ಶ್ರೀ ಮಠದಲ್ಲಿ ಜೋಡಿಸಲಾದ ವಿದ್ಯುತ್ ದೀಪಾಲಂಕಾರದಲ್ಲಿ ತ್ರಿವರ್ಣ ಧ್ವಜದ ಮೂರು ಬಣ್ಣಗಳಿಂದ ಕಂಗೊಳಿಸಿದೆ.  

ಚಿಕ್ಕಮಗಳೂರು: ಮಾಜಿ ಯೋಧನ ಜತೆ ಮಲೆನಾಡಿಗರ ತಿರಂಗಾ ಸಂಭ್ರಮ..!

Tap to resize

Latest Videos

ಇಂದು ಸಂಜೆಯಿಂದ ಮಠದಲ್ಲಿ  ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ವಿದ್ಯುತ್ ದೀಪಾಲಂಕಾರವನ್ನು  ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠ‌ದಲ್ಲಿ ಅಳವಡಿಸಲಾಗಿತ್ತು. ಇಂದಿನಿಂದ  ಮೂರು ದಿನಗಳ‌ ಕಾಲ ಸಿದ್ದಗಂಗಾ ಮಠದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳು ಕಂಗೊಳಿಸಲಿದೆ. ನಿತ್ಯವು ಮಠಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಮಠದಲ್ಲಿನ ತ್ರಿವರ್ಣ ಧ್ವಜದ ಬಣ್ಣ  ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಮಠದ ಸಂಸ್ಕೃತ ಪಾಠ ಶಾಲೆ  ಕಟ್ಟಡ ಹಾಗೂ ಶಿವಕುಮಾರಸ್ವಾಮೀಜಿಗಳ ಗದ್ದುಗೆಗೆ ತಿರಂಗ ರಂಗಿನ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ದೇಶಭಕ್ತಿ ಹವಾ: ಇಂದು ಮನೆ ಮನೆಯಲ್ಲಿ ತಿರಂಗಾ ಹಾರಾ​ಟ

ಭಾರತ ನಕ್ಷೆ ಸೃಷ್ಟಿಸಿದ ವಿದ್ಯಾರ್ಥಿಗಳು

ಇನ್ನೊಂದೆಡೆ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಂದ ಭಾರತದ ನಕ್ಷೆ ಸೃಷ್ಟಿಸಿ ಧ್ವಜಾರೋಹಣ ನೆರವೇರಿಸಲಾಗಿದೆ. ಭಾರತ ನಕ್ಷೆಯೊಳಗೆ ಶಿವಕುಮಾರ್ ಸ್ವಾಮೀಜಿಗಳು ಹಾಗೂ ಸಿದ್ಧಲಿಂಗ ಶ್ರೀಗಳ ಭಾವಚಿತ್ರ ಇಟ್ಟು ಶ್ರೀಗಳಿಗೆ ಗೌರವ ಸಲ್ಲಿಸಲಾಗಿದೆ. ನೂರಾರು ವಿದ್ಯಾರ್ಥಿಗಳಿಂದ ಭಾರತದ ನಕ್ಷೆ ರೂಪಿಸಿದ್ದರು.ಸಿದ್ದಗಂಗಾ ಮಠದ ವಸ್ತುಪ್ರದರ್ಶ ಆವರಣದಲ್ಲಿ ನಡೆದ ಕಾರ್ಯಕ್ರಮ ನಡೆದಿದೆ. ವಿದ್ಯಾರ್ಥಿಗಳಿಂದ ಧ್ವಜಾರೋಹಣ ನಕ್ಷೆಯ ರೂಪವನ್ನು ಭಕ್ತರು ಕಣ್ತುಂಬಿಸಿಕೊಂಡಿದ್ದಾರೆ.

click me!