ಇಂಡೋ-ಪಾಕ್ ಪಂದ್ಯ: ರಿಶಬ್ ಪಂತ್-ಝೀವಾ ತುಂಟಾಟ ಪುಲ್ ವೈರಲ್

Published : Jun 17, 2019, 05:14 PM ISTUpdated : Jun 17, 2019, 05:19 PM IST
ಇಂಡೋ-ಪಾಕ್ ಪಂದ್ಯ: ರಿಶಬ್ ಪಂತ್-ಝೀವಾ ತುಂಟಾಟ ಪುಲ್ ವೈರಲ್

ಸಾರಾಂಶ

ಪಾಕಿಸ್ತಾನದ ವಿರುದ್ಧ ಭಾರತ ಗೆದ್ದು ಬೀಗುತ್ತಿದ್ದರೆ ಇತ್ತ ಧೋನಿ ಮಗಳು ಝೀವಾ ಮತ್ತು ಕ್ರಿಕೆಟಿಗ ರಿಶಬ್ ಪಂತ್ ಮೈದಾನದ ಹೊರಗೆ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮ್ಯಾಂಚೆಸ್ಟರ್[ಜೂ. 17] ಪಾಕಿಸ್ತಾನದ ವಿರುದ್ಧ ಭಾರತ 89 ರನ್ ಗಳ ಭರ್ಜರಿ ಜಯ ದಾಖಲಿಸಿದ್ದು ವಿಶ್ವಕಪ್ ಪಂದ್ಯಾವಳಿಯಲ್ಲಿ ಅಜೇಯ ಓಟ ಮುಂದುವರಿಸಿದೆ.  ವಿಶ್ವಕಪ್ ನಂತಹ ಮಹತ್ತರ ಪಂದ್ಯಾವಳಿಯಲ್ಲಿ ಭಾರತ ಒಮ್ಮೆಯೂ ಪಾಕಿಸ್ತಾನಕ್ಕೆ ಮಣಿದಿಲ್ಲ.

ಭಾರತ ಅತ್ತ ಗೆಲುವಿನ ಕಡೆ ದಾಪುಗಾಲು ಹಾಕುತ್ತಿದ್ದರೆ ಇತ್ತ  ಮಹೇಂದ್ರ ಸಿಂಗ್ ಧೋನಿ ಪುತ್ರಿ ಝೀವಾ ಮತ್ತು ಕ್ರಿಕೆಟಿಗ ರಿಶಬ್ ಪಂತ್ ಶಿಳ್ಳೆ ಹಾಕುತ್ತ ಸಂಭ್ರಮಿಸಿದ್ದಾರೆ.

ವಾಘಾದಲ್ಲಿ ಘರ್ಜಿಸುವುದಕ್ಕಿಂತ ಮೈದಾನದಲ್ಲಿ ಆಡಿ- ಪಾಕ್‌ಗೆ ಅಖ್ತರ್ ತರಾಟೆ!

ಆರಂಭಿಕ ಶಿಖರ್ ಧವನ್ ಗಾಯಾಳುವಾಗಿ ಹೊರಹೋದಾಗ ಅವರ ಜಾಗದಲ್ಲಿ ರಿಶಬ್ ಆಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ ಕನ್ನಡಿಗ ರಾಹುಲ್ ಅವಕಾಶ ಪಡೆದುಕೊಂಡು ಅರ್ಧ ಶತಕವನ್ನು ದಾಖಲಿಸಿದ್ದರು. ರೀಶಬ್ ಪಂತ್ ಮತ್ತೊ ಧೋನಿ ಪುತ್ರಿಯ ತುಂಟಾಟ ಹೇಗಿತ್ತು? ನೀವು ಒಮ್ಮೆ ನೋಡಿಕೊಂಡು ಬನ್ನಿ..

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!