ಜೀವದಾನ ಸಿಕ್ಕರೆ ರೋಹಿತ್ ಶರ್ಮಾ ಸೆಂಚುರಿ ಖಚಿತ!

By Web DeskFirst Published Jul 3, 2019, 4:54 PM IST
Highlights

10 ರನ್ ಒಳಗೆ ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲಿದರೆ, ಎದುರಾಳಿಗಳು ಭಾರಿ ದಂಡ ತೆರಬೇಕು. ಕಾರಣ ಜೀವದಾನ ಪಡೆದರೆ ರೋಹಿತ್ ಸೆಂಚುರಿ ಸಿಡಿಸೋದು ಖಚಿತ. ಇನ್ನು ತಮ್ಮದೇ ತಂಡದ ನಾನ್‌ಸ್ಟ್ರೈಕ್ ಬ್ಯಾಟ್ಸ್‌ಮನ್‌ನ್ನು ರೋಹಿತ್ ರನೌಟ್ ಮಾಡಿದರೆ ದ್ವಿಶತಕ ಸಿಡಿಸೋದು ಖಚಿತ. ಇಲ್ಲಿದೆ ರೋಹಿತ್ ಜೀವದಾನದ ರಹಸ್ಯ.

ಬರ್ಮಿಂಗ್‌ಹ್ಯಾಮ್(ಜು.03): ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಜೀವದಾನವನ್ನು ಸದುಪಯೋಗ ಪಡಿಸಿಕೊಳ್ಳೋ ಬ್ಯಾಟ್ಸ್‌ಮನ್‌ಗಳ ಪೈಕಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಕಾರಣ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಜೀವದಾನ ಪಡೆದು 3 ಶತಕ ಹಾಗೂ  1 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲೂ ರೋಹಿತ್ ಶರ್ಮಾ ಜೀವನದಾನ ಪಡೆದು ಸೆಂಚುರಿ ಸಿಡಿಸಿದ್ದಾರೆ.

ಇದನ್ನೂ ಓದಿ: 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಸಾಕ್ಷಿಯಾಗಿದ್ದ ಚಾರುಲತಾ,2019ರಲ್ಲೂ ಹಾಜರ್!

ವಿರುದ್ಧ ಜೀವದಾನ ಸಿಕ್ಕಾಗ ಸ್ಕೋರ್‌ ಅಂತಿಮ ಸ್ಕೋರ್‌
ದ.ಆಫ್ರಿಕಾ 01 122*
ಆಸ್ಪ್ರೇಲಿಯಾ 02 57
ಇಂಗ್ಲೆಂಡ್‌ 04 104
ಬಾಂಗ್ಲಾ 09 104

ರೋಹಿತ್ ಶರ್ಮಾ ಜೀವದಾನ ಸಿಕ್ಕರೆ ಶತಕ, ನಾನ್ ಸ್ಟ್ರೈಕ್ ಬ್ಯಾಟ್ಸ್‌ಮನ್‌ನ್ನು ರನೌಟ್ ಮಾಡಿದರೆ ದ್ವಿಶತಕ ಅನ್ನೋ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ಕಾರಣ 2 ಬಾರಿ ತಮ್ಮ ತಂಡದ ನಾನ್‌ಸ್ಟ್ರೈಕ್ ಬ್ಯಾಟ್ಸ್‌ಮನ್‌ನ್ನು ರೋಹಿತ್ ರನೌಟ್ ಮಾಡಿ ದ್ವಿಶತಕ ಸಿಡಿಸಿದ್ದಾರೆ.  
 

click me!