ಕಿವೀಸ್ ಎದುರು ವಿಂಡೀಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ

By Web DeskFirst Published Jun 22, 2019, 1:12 PM IST
Highlights

ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿಂದು ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಕೆರಿಬಿಯನ್ ತಂಡದ ಪಾಲಿಗಿದು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. 

ಮ್ಯಾಂಚೆಸ್ಟರ್‌[ಜೂ.22]: ಪಾಕಿಸ್ತಾನ ವಿರುದ್ಧ ಅನಾಯಾಸವಾಗಿ ಗೆದ್ದು ಭಾರಿ ನಿರೀಕ್ಷೆ ಹುಟ್ಟಿಸಿದ್ದ ವೆಸ್ಟ್‌ಇಂಡೀಸ್‌, ಏಕದಿನ ವಿಶ್ವಕಪ್‌ನ ಸೆಮೀಸ್‌ ರೇಸ್‌ನಿಂದ ಹೊರಬೀಳುವ ಆತಂಕದಲ್ಲಿದೆ. 

ಶನಿವಾರ ನಡೆಯಲಿರುವ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿರುವ ವಿಂಡೀಸ್‌ ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಕ್ರಿಸ್ ಗೇಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ. ಇನ್ನು ಐಪಿಎಲ್’ನಲ್ಲಿ ಅಬ್ಬರಿಸಿದ್ದ ಅನುಭವಿ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಕೂಡಾ ಸಿಡಿಯುತ್ತಿಲ್ಲ. ಇನ್ನು ಕಳಪೆ ಕ್ಷೇತ್ರ ರಕ್ಷಣೆ ಕೆರಿಬಿಯನ್ ಪಾಳಯದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆಫ್ಘನ್‌ ಬೇಟೆಯಾಡಲು ಟೀಂ ಇಂಡಿಯಾ ರೆಡಿ!

ಇನ್ನು ನ್ಯೂಜಿಲೆಂಡ್ ತಂಡ ಆಡಿದ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಜಯಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಟೂರ್ನಿಯಲ್ಲಿ ಭಾರತ ಬಳಿಕ ಅಜೇಯವಾಗಿ ಮುನ್ನುಗ್ಗುತ್ತಿರುವ ಕಿವೀಸ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್, ರಾಸ್ ಟೇಲರ್ ಹಾಗೆಯೇ ಬಲಿಷ್ಠ ಬೌಲಿಂಗ್ ಪಡೆ ಆಸರೆಯಾಗುತ್ತಿದೆ. ಹೀಗಾಗಿ ಕಿವೀಸ್ ಗೆಲುವಿನ ನಾಗಾಲೋಟಕ್ಕೆ ಕೆರಿಬಿಯನ್ನರು ಬ್ರೇಕ್ ಹಾಕ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.  

ಆಫ್ಘನ್ ವಿರುದ್ಧದ ಪಂದ್ಯ: ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

ಒಟ್ಟು ಮುಖಾಮುಖಿ: 64

ನ್ಯೂಜಿಲೆಂಡ್‌: 27

ವಿಂಡೀಸ್‌: 30

ಫಲಿತಾಂಶವಿಲ್ಲ: 07

ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ vs ವಿಂಡೀಸ್‌

ಪಂದ್ಯ: 07

ನ್ಯೂಜಿಲೆಂಡ್‌: 04

ವಿಂಡೀಸ್‌: 03

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಗಪ್ಟಿಲ್‌, ಮನ್ರೊ, ವಿಲಿಯಮ್ಸನ್‌(ನಾಯಕ), ಟೇಲರ್‌, ಲೇಥಮ್‌, ನೀಶಮ್‌, ಕಾಲಿನ್‌, ಸ್ಯಾಂಟ್ನರ್‌, ಹೆನ್ರಿ, ಫಗ್ರ್ಯೂಸನ್‌, ಬೌಲ್ಟ್‌

ವಿಂಡೀಸ್‌: ಗೇಲ್‌, ಲೆವಿಸ್‌, ಹೋಪ್‌, ಪೂರನ್‌, ಹೆಟ್ಮೇಯರ್‌, ರಸೆಲ್‌, ಹೋಲ್ಡರ್‌(ನಾಯಕ), ಬ್ರಾವೋ, ಥಾಮಸ್‌, ಕಾಟ್ರೆಲ್‌, ಗೇಬ್ರಿಯಲ್‌.

ಸ್ಥಳ: ಮ್ಯಾಂಚೆಸ್ಟರ್‌ 
ಪಂದ್ಯ ಆರಂಭ: ಸಂಜೆ 6ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!