
ಸೌಥಾಂಪ್ಟನ್[ಜೂ.22]: ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ-ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ನಿರೀಕ್ಷೆಯಂತೆಯೇ ಟೀಂ ಇಂಡಿಯಾದಲ್ಲಿ 1 ಬದಲಾವಣೆ ಮಾಡಲಾಗಿದ್ದು, ಭುವನೇಶ್ವರ್ ಕುಮಾರ್ ಬದಲಿಗೆ ಮೊಹಮ್ಮದ್ ಶಮಿ ತಂಡ ಕೂಡಿಕೊಂಡಿದ್ದಾರೆ. ಇತ್ತ ಆಫ್ಘಾನಿಸ್ತಾಾನ 2 ಬದಲಾವಣೆ ಮಾಡಿದೆ ನೂರ್ ಆಲಿ ಬದಲು ಹಝ್ರತ್ ತಂಡ ಸೇರಿಕೊಂಡಿದ್ದರೆ, ದವ್ಲತ್ ಬದಲು ಅಫ್ತಾಬ್ ಅಲಂ ತಂಡಕ್ಕೆ ಆಗಮಿಸಿದ್ದಾರೆ.
ಈ ಪಂದ್ಯವನ್ನು ಜಯಿಸಿದರೆ, ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ 50ನೇ ಗೆಲುವು ದಾಖಲಿಸಿದ ಮೂರನೇ ತಂಡ ಎನಿಸಿಕೊಳ್ಳಲಿದೆ. ಈ ಮೊದಲು ಆಸ್ಟ್ರೇಲಿಯಾ[67] ಹಾಗೂ ನ್ಯೂಜಿಲೆಂಡ್[52] ತಂಡಗಳು 50+ ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿವೆ. ಇದರ ಜತೆಗೆ ಉತ್ತಮ ರನ್ ರೇಟ್’ನಲ್ಲಿ ಜಯಿಸಿದರೆ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ.
ಕಳೆದ 5 ಪಂದ್ಯಗಳಲ್ಲೂ ಸೋಲು ಕಂಡಿರುವ ಆಫ್ಘಾನಿಸ್ತಾನ ತಂಡವು ಭಾರತದೆದುರು ಅಚ್ಚರಿಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಅದರಲ್ಲೂ ಇಂಗ್ಲೆಂಡ್ ಎದುರು 397 ರನ್ ಬಿಟ್ಟುಕೊಟ್ಟಿದ್ದ ಆಫ್ಘನ್ 150 ರನ್ ಗಳ ಅಂತರದ ಹೀನಾಯ ಸೋಲು ಕಂಡಿತ್ತು.
ತಂಡಗಳು ಹೀಗಿವೆ:
ಭಾರತ:
ಆಫ್ಘಾನಿಸ್ತಾನ: