ವಿಶ್ವಕಪ್ 2019: ವೆಸ್ಟ್ ಇಂಡೀಸ್‌ಗೆ 269 ರನ್ ಟಾರ್ಗೆಟ್ ನೀಡಿದ ಭಾರತ!

By Web DeskFirst Published Jun 27, 2019, 6:56 PM IST
Highlights

ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತದ ಲೆಕ್ಕಾಚಾರ ಹಾಕಿಕೊಂಡಿದ್ದ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನದ ಹೈಲೈಟ್ಸ್ ಇಲ್ಲಿದೆ. 

ಭಾರತ vs ವೆಸ್ಟ್ ಇಂಡೀಸ್ ಸ್ಕೋರ್ ಎಷ್ಟು?

ಮ್ಯಾಂಚೆಸ್ಟರ್(ಜೂ.27): ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಮತ್ತೆ ವೈಫಲ್ಯ ಅನುಭವಿಸಿದ್ದಾರೆ. ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ  ಹಿನ್ನಡೆ ಬಳಿಕ ಇದೀಗ ವೆಸ್ಟ್ ಇಂಡೀಸ್ ವಿರುದ್ಧವೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ  ಎಂ.ಎಸ್.ಧೋನಿ ಸಿಡಿಸಿದ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 268 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸೋ ಲೆಕ್ಕಾಚಾರದಲ್ಲಿತ್ತು. ಆದರೆ ಸಾಧ್ಯವಾಗಲಿಲ್ಲ. ಆರಂಭದಲ್ಲೇ ರೋಹಿತ್ ಶರ್ಮಾ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ರೋಹಿತ್ 18 ರನ್ ಸಿಡಿಸಿ ಔಟಾದರು. ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಕಟ್ಟಿದರು. ರಾಹುಲ್ 48 ರನ್ ಕಾಣಿಕೆ ನೀಡಿದರು.

ವಿಜಯ್ ಶಂಕರ್ ಹಾಗೂ ಕೇದಾರ್ ಜಾಧವ್ ಅಬ್ಬರಿಸಲಿಲ್ಲ. ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರು. 37 ರನ್ ಸಿಡಿಸುತ್ತಿದ್ದಂತೆ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಪೂರೈಸಿದರು. ಏಕದಿನ ಕ್ರಿಕೆಟ್‌ನಲ್ಲಿ 53ನೇ ಅರ್ಧಶತಕ ಪೂರೈಸಿದರು. ಆದರ ಕೊಹ್ಲಿ 72 ರನ್ ಸಿಡಿಸಿ ಔಟಾದರು.

ಎಂ.ಎಸ್.ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಭಾರತಕ್ಕೆ ಕೊಂಚ ಚೇತರಿಕೆ ನೀಡಿತು. ಹಾರ್ಧಿಕ್ ಪಾಂಡ್ಯ  46 ರನ್ ಸಿಡಿಸಿ ಔಟಾದರು. ಮೊಹಮ್ಮದ್ ಶಮಿ ಡಕೌಟ್ ಆದರು. ಅಂತಿಮ ಓವರ್‌ನಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಧೋನಿ ಅಜೇಯ 56 ರನ್ ಸಿಡಿಸೋ ಮೂಲಕ ಭಾರತ ವಿಕೆಟ್ 7 ನಷ್ಟಕ್ಕೆ 268 ರನ್ ಸಿಡಿಸಿತು. 

click me!