ವಿಶ್ವಕಪ್ 2019: ಸೆಂಚುರಿ ಸಿಡಿಸಿ ರೋಹಿತ್ ಶರ್ಮಾ ಔಟ್!

By Web DeskFirst Published 16, Jun 2019, 5:45 PM
Highlights

ವಿಶ್ವಕಪ್ ಟೂರ್ನಿಯಲ್ಲಿ ಅಬ್ಭರಿಸುತ್ತಿರುವ ರೋಹಿತ್ ಶರ್ಮಾ, ಪಾಕ್ ವಿರುದ್ಧ ಸೆಂಚುರಿ ಸಾಧನೆ ಮಾಡಿದ್ದಾರೆ. ರೋಹಿತ್ 140 ರನ್ ಸಿಡಿಸಿ ಔಟಾಗಿದ್ದಾರೆ. ಜೊತೆಗೆ ದಾಖಲೆಯನ್ನೂ ಬರೆದಿದ್ದಾರೆ. 

ಮ್ಯಾಂಚೆಸ್ಟರ್(ಜೂ.16): ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುುರಿ ಸಿಡಿಸಿದ ರೋಹಿತ್ ಶರ್ಮಾ ವಿಕೆಟ್ ಪತನಗೊಂಡಿದೆ. ರೋಹಿತ್ 113 ಎಸೆತದಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್  ನೆರವಿನಿಂದ 140 ರನ್ ಸಿಡಿಸಿ ಔಟಾದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಗರಿಷ್ಠ ರನ್ ಸಿಡಿಸಿದ 2ನೇ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ.

2003ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಆ್ಯಂಡ್ರೂ ಸೈಮಂಡ್ಸ್ ಪಾಕಿಸ್ತಾನ ವಿರುದ್ದ ಅಜೇಯ 143 ರನ್ ಸಿಡಿಸಿದ್ದರು. ಇದೀಗ ರೋಹಿತ್ ಶರ್ಮಾ 140 ರನ್ ಸಿಡಿಸೋ ಮೂಲಕ ಗರಿಷ್ಠ ರನ್ ಸಿಡಿಸಿದ 2ನೇ ಬ್ಯಾಟ್ಸ್‌ಮನ್ ಅನ್ನೋ ಕೀರ್ತಿಗೆ ಪಾತ್ರರಾಗಿದ್ದಾರೆ. 


 

Rohit Sharma finally goes for a quite brilliant 140!

Hassan Ali is the man with the wicket, India are 234/2. | pic.twitter.com/rJf8ejAVdw

— Cricket World Cup (@cricketworldcup)

Read Exclusive COVID-19 Coronavirus News updates, from Karnataka, India and World at Asianet News Kannada.

Last Updated 16, Jun 2019, 5:45 PM