ಸಚಿನ್ ಅಪರೂಪದ ದಾಖಲೆ ಮುರಿಯಲು ರೋಹಿತ್‌ಗೆ ಬೇಕು 27 ರನ್‌!

By Web Desk  |  First Published Jul 9, 2019, 12:54 PM IST

ವಿಶ್ವಕಪ್ ಟೂರ್ನಿಯಲ್ಲಿ ಶತಕದ ಮೇಲೆ ಶತಕ ಬಾರಿಸುತ್ತಾ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಇದೀಗ ಮತ್ತೊಂದು ಅಪರೂಪದ ದಾಖಲೆಯ ಹೊಸ್ತಿಲಲ್ಲಿದ್ದು ಕೇವಲ 27 ರನ್ ಬಾರಿಸಿದರೆ ಇನ್ನೊಂದು ವಿಶ್ವದಾಖಲೆಗೆ ಹಿಟ್‌ಮ್ಯಾನ್ ಪಾತ್ರರಾಗಲಿದ್ದಾರೆ. ಈ ಪಂದ್ಯದ ಕುರಿತಾದ ವಿವರ ಇಲ್ಲಿದೆ ನೋಡಿ...


ಮ್ಯಾಂಚೆಸ್ಟರ್‌[ಜು.09]: ಶತಕದ ಮೇಲೆ ಶತಕ ಬಾರಿಸುತ್ತಿರುವ ಭಾರತ ತಂಡದ ಉಪನಾಯಕ ರೋಹಿತ್‌ ಶರ್ಮಾ, ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ವಿಶ್ವಕಪ್‌ ದಾಖಲೆ ಬರೆಯಲು ಉತ್ಸುಕರಾಗಿದ್ದಾರೆ. 

ಪ್ರಸ್ತುತ 647 ರನ್‌ಗಳೊಂದಿಗೆ ಈ ವಿಶ್ವಕಪ್‌ನ ಗರಿಷ್ಠ ರನ್‌ ಸರದಾರ ಎನಿಸಿರುವ ರೋಹಿತ್‌ಗೆ, ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ ರನ್‌ ಕಲೆಹಾಕಿದ ಆಟಗಾರ ಎನ್ನುವ ದಾಖಲೆ ಬರೆಯಲು ಇನ್ನು ಕೇವಲ 27 ರನ್‌ ಮಾತ್ರ ಬೇಕಿದೆ. 2003ರ ವಿಶ್ವಕಪ್‌ನಲ್ಲಿ ಸಚಿನ್‌ ತೆಂಡುಲ್ಕರ್‌ 673 ರನ್‌ ಕಲೆಹಾಕಿದ್ದರು.

Tap to resize

Latest Videos

undefined

ವಿಶ್ವಕಪ್ 2019: ಸರಣಿ ಶ್ರೇಷ್ಠ ಪ್ರಶಸ್ತಿಗೆ ನಾಲ್ವರು ಸ್ಪರ್ಧೆ!

2007ರ ವಿಶ್ವಕಪ್‌ನಲ್ಲಿ 659 ರನ್‌ ಗಳಿಸಿದ ಆಸ್ಪ್ರೇಲಿಯಾದ ಮ್ಯಾಥ್ಯೂ ಹೇಡನ್‌, ಸಚಿನ್‌ರ ದಾಖಲೆ ಮುರಿಯುವ ಹತ್ತಿರಕ್ಕೆ ಬಂದಿದ್ದರು. ರೋಹಿತ್‌ ಇನ್ನು 53 ರನ್‌ ಗಳಿಸಿದರೆ, ವಿಶ್ವಕಪ್‌ ಆವೃತ್ತಿಯೊಂದರಲ್ಲಿ 700 ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆ ಬರೆಯಲಿದ್ದಾರೆ.

ಲಂಕಾ ವಿರುದ್ಧ ರೋಹಿತ್ ಸೆಂಚುರಿ; ಸಚಿನ್, ಸಂಗಕ್ಕಾರ ದಾಖಲೆ ಪುಡಿ ಪುಡಿ!

ಸತತ 3 ಶತಕ ಸಿಡಿಸಿರುವ ರೋಹಿತ್‌, ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದರೆ, ಕುಮಾರ್‌ ಸಂಗಕ್ಕಾರ (ಸತತ 4 ಶತಕ) ದಾಖಲೆಯನ್ನು ಸರಿಗಟ್ಟಲಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಸಂಗಕ್ಕಾರ ಸತತ 3 ಶತಕ ಬಾರಿಸಿದ್ದರು.
 

click me!