ರಾಯಲ್ ಚಾಲೆಂಜರ್ಸ್ ತಂಡದ ಯುವ ವೇಗಿಗೆ ಟೀಂ ಇಂಡಿಯಾದಿಂದ ಬುಲಾವ್ ಬಂದಿದೆ. ಯಾರು ಆ ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಮ್ಯಾಂಚೆಸ್ಟರ್[ಜೂ.24]: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತೀಯ ಬ್ಯಾಟ್ಸ್’ಮನ್ ಗಳಿಗೆ ಅಭ್ಯಾಸಕ್ಕೆ ನೆರವಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ನವ್ ದೀಪ್ ಶೈನಿಗೆ ನೆಟ್ ಬೌಲರ್ ಆಗಿ ಕರೆ ಬಂದಿದೆ. ಸೋಮವಾರ ಸಂಜೆಯ ವೇಳೆಗೆ ಸೈನಿ ಮ್ಯಾಂಚೆಸ್ಟರ್ ಗೆ ಬಂದಿಳಿದಿದ್ದಾರೆ.
undefined
ಇಂಗ್ಲೆಂಡ್ ಎದುರು ಕಿತ್ತಳೆ ಜರ್ಸಿಯಲ್ಲಿ ಟೀಂ ಇಂಡಿಯಾ ಕಣಕ್ಕೆ..?
2019ರ ಆವೃತ್ತಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಬಲಗೈ ವೇಗಿ ಸೈನಿ, ಇದೀಗ ಟೀಂ ಇಂಡಿಯಾದ ಏಕೈಕ ನೆಟ್ ಬೌಲರ್ ಎನಿಸಿದ್ದಾರೆ. ಈ ಮೊದಲು ಮೀಸಲು ಬೌಲರ್ ಆಗಿದ್ದ ದೀಪಕ್ ಚಾಹರ್ ಮತ್ತು ಆವೇಶ್ ಖಾನ್ ಜೂನ್ ಮೊದಲ ವಾರದಲ್ಲೇ ಭಾರತಕ್ಕೆ ಹಿಂದಿರುಗಿದ್ದರು. ಅದಾದ ನಂತರ ಖಲೀಲ್ ಅಹಮ್ಮದ್ ತಂಡದೊಟ್ಟಿಗೆ ಉಳಿದಿದ್ದರು. ಇದೀಗ ಖಲೀಲ್ ಅಹಮ್ಮದ್ ಕೂಡಾ ತವರಿಗೆ ವಾಪಾಸ್ಸಾಗಿದ್ದರಿಂದ ಟೀಂ ಇಂಡಿಯಾದಲ್ಲಿ ನೆಟ್ ಬೌಲರ್ ಇರಲಿಲ್ಲ.
ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭುವನೇಶ್ವರ್ ಕುಮಾರ್ ಪಾಕಿಸ್ತಾನ[ಕೇವಲ 16 ಎಸೆತ]ದ ಜತೆಗೆ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಿಂದ ವಂಚಿತರಾಗಿದ್ದರು. ಒಂದು ವೇಳೆ ಭುವಿ ಚೇತರಿಸಿಕೊಳ್ಳದಿದ್ದರೆ ಮ್ಯಾನೇಜ್’ಮೆಂಟ್ ಶೈನಿಗೆ ತಂಡದಲ್ಲಿ ಅವಕಾಶ ಕಲ್ಪಿಸಿಕೊಡುವ ಸಾಧ್ಯತೆಯಿದೆ. ಇದೀಗ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ವೇಗದ ಬೌಲಿಂಗ್ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದಾರೆ.
ಟೀಂ ಇಂಡಿಯಾ ಆಡಿದ 5 ಪಂದ್ಯಗಳಲ್ಲಿ 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಫ್ಘಾನಿಸ್ತಾನ ವಿರುದ್ಧ 224 ರನ್ ಗಳನ್ನು ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು. ವೇಗಿಗಳಾದ ಶಮಿ 4, ಬುಮ್ರಾ 2 ಹಾಗೂ ಹಾರ್ದಿಕ್ 02 ವಿಕೆಟ್ ಪಡೆದು ಮಿಂಚಿದ್ದರು.