ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಲಂಕಾ ವೇಗಿ ನುವಾನ್ ಪ್ರದೀಪ್

By Web Desk  |  First Published Jun 29, 2019, 8:16 PM IST

ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿ ಆಘಾತ ಅನುಭವಿಸಿರುವ ಶ್ರೀಲಂಕಾ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಏನದು ಶಾಕ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...


ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಂಡನ್[ಜೂ.29]: ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು ತಂಡದ ಪ್ರಮುಖ ವೇಗಿ ನುವಾನ್ ಪ್ರದೀಪ್ ಚಿಕನ್’ಫಾಕ್ಸ್[ಸಿಡುಬು]ನಿಂದ ಬಳಲುತ್ತಿದ್ದು ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 

Latest Videos

undefined

ಗೆಲುವಿನ ಸಿಹಿ ಕಂಡ ಸೌತ್ ಆಫ್ರಿಕಾ-ಲಂಕಾ ಸಮೀಸ್ ಹಾದಿ ಕಠಿಣ

JUST IN: Sri Lanka pacer Nuwan Pradeep is out of the World Cup with chickenpox. Kasun Rajitha has been named his replacement.

— Cricbuzz (@cricbuzz)

32 ವರ್ಷದ ಪ್ರದೀಪ್ 5 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದಷ್ಟೇ ಅಲ್ಲದೇ ಇಂಗ್ಲೆಂಡ್ ಹಾಗೂ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಸಂಪೂರ್ಣ ಫಿಟ್ ಇರದಿದ್ದ ಹಿನ್ನಲೆಯಲ್ಲಿ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ನುವಾನ್ ಪ್ರದೀಪ್ ಸ್ಥಾನಕ್ಕೆ ಲಂಕಾದ ಮತ್ತೋರ್ವ ವೇಗಿ ಕುಸಾನ್ ರಜಿತಾ ತಂಡಕೂಡಿಕೊಂಡಿದ್ದಾರೆ. 

 

ಕುಸಾನ್ ರಜಿತಾ ಲಂಕಾ ಪರ 6 ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ಸೋತಿದ್ದರೂ ಲಂಕಾದ ಸೆಮೀಸ್ ಕನಸು ಇನ್ನೂ ಜೀವಂತವಾಗಿದ್ದು, ಆಡಿದ 7 ಪಂದ್ಯಗಳಿಂದ 6 ಅಂಕ ಗಳಿಸಿದೆ. ಇದೀಗ ಶ್ರೀಲಂಕಾ ತಂಡವು ಮುಂದಿನ 2 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡವನ್ನು ಎದುರಿಸಲಿದ್ದು, ಉತ್ತಮ ರನ್ ರೇಟ್’ನೊಂದಿಗೆ ಜಯಸಾಧಿಸಿದರೆ ಅಂತಿಮ ನಾಲ್ಕರಘಟ್ಟಕ್ಕೇರಬಹುದಾಗಿದೆ. 

click me!