’60 ಸೆಕೆಂಡ್ ಚಾಲೆಂಜ್’ನಲ್ಲಿ ವಿಶ್ವಕಪ್ ಆಡುತ್ತಿರುವ ಎಲ್ಲಾ 10 ದೇಶಗಳ ಪ್ರತಿನಿಧಿಗಳು 60 ಸೆಕೆಂಡ್’ಗಳ ಕಾಲ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು. ಈ ವೇಳೆ ಭಾರತವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಪ್ರತಿನಿಧಿಸಿದ್ದರು. ಭಾರತದ ಪ್ರದರ್ಶನವನ್ನು ಮಲಾಲ ಲಘುವಾಗಿ ಟೀಕಿಸುವ ಮೂಲಕ ಸುದ್ದಿಯಾಗಿದ್ದಾರೆ.
ಲಂಡನ್[ಮೇ.31]: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್’ಝೈ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದ ಮುನ್ನ ನಡೆದ ’60 ಸೆಕೆಂಡ್ ಚಾಲೆಂಜ್’ನಲ್ಲಿ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ. ಆದರೆ ಇದೇ ವೇಳೆ ಭಾರತವನ್ನು ಕಾಲೆಳೆಯುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹೌದು, ’60 ಸೆಕೆಂಡ್ ಚಾಲೆಂಜ್’ನಲ್ಲಿ ವಿಶ್ವಕಪ್ ಆಡುತ್ತಿರುವ ಎಲ್ಲಾ 10 ದೇಶಗಳ ಪ್ರತಿನಿಧಿಗಳು 60 ಸೆಕೆಂಡ್’ಗಳ ಕಾಲ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು. ಈ ವೇಳೆ ಭಾರತವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಪ್ರತಿನಿಧಿಸಿದ್ದರು. ಈ ವೇಳೆ ಭಾರತದ ಜೋಡಿ ಕೇವಲ 19 ರನ್ ಬಾರಿಸಿ ಕೊನೆಯ ಸ್ಥಾನ ಪಡೆದರೆ, 74 ರನ್ ಚಚ್ಚಿದ ಇಂಗ್ಲೆಂಡ್ ಜೋಡಿ ಕೆವಿನ್ ಪೀಟರ್’ಸನ್, ಕ್ರಿಸ್ ಹ್ಯೂಸ್ ಜೋಡಿ 74 ರನ್ ಸಿಡಿಸುವ ಮೂಲಕ ಮೊದಲ ಸ್ಥಾನ ಪಡೆಯಿತು.
ಮಲಾಲ ಕ್ಯಾತೆ:
You praise Pakistan, a nation where you can't go.
You demean India like a typical brainwashed Pakistani, yet India is a nation which you can safely visit.
Stop being petty and disgusting . pic.twitter.com/MGugFTKCfV
ಇನ್ನು ಪಾಕಿಸ್ತಾನವನ್ನು ಪ್ರತಿನಿಧಿಸಿದ್ದ ಕ್ರಿಕೆಟಿಗ ಅಜರ್ ಅಲಿ-ಮಲಾಲ ಜೋಡಿ 38 ರನ್ ಬಾರಿಸುವುದರೊಂದಿಗೆ ಒಟ್ಟಾರೆ 5ನೇ ಸ್ಥಾನ ಪಡೆಯಿತು. ಕಾರ್ಯಕ್ರಮದ ಬಳಿಕ ಮಾತನಾಡಿದ ಮಲಾಲ, ನಮ್ಮ ಪ್ರದರ್ಶನ ಭಾರತದಷ್ಟೇನೂ ಕಳಪೆಯಾಗಿರಲಿಲ್ಲ. ನಾವು ಏಳನೇ ಸ್ಥಾನ ಪಡೆದಿದ್ದೇವೆ. ಭಾರತದಂತೆ ಕೊನೆಯ ಸ್ಥಾನ ಪಡೆಯಲಿಲ್ಲ ಎಂದು ಭಾರತವನ್ನು ಕಾಲೆಳೆದಿದ್ದಾರೆ. ಮಲಾಲ ಮಾತನ್ನು ಟ್ವಿಟರಿಗರು ಖಂಡಿಸಿದ್ದಾರೆ.