ABD ರೆಕಾರ್ಡ್ ನುಚ್ಚುನೂರು ಮಾಡಲು ರೆಡಿಯಾದ ಗೇಲ್..!

Published : May 31, 2019, 04:06 PM IST
ABD ರೆಕಾರ್ಡ್ ನುಚ್ಚುನೂರು ಮಾಡಲು ರೆಡಿಯಾದ ಗೇಲ್..!

ಸಾರಾಂಶ

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ವಿಶ್ವಕಪ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲೊಂದು ಸ್ಥಾಪಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರೊಂದಿಗೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದ್ದ ದಾಖಲೆಯೂ ನುಚ್ಚು ನೂರಾಗಲಿದೆ. ಏನದು ದಾಖಲೆ ನೀವೇ ನೋಡಿ....

ನಾಟಿಂಗ್ ಹ್ಯಾಮ್[ಮೇ.31]: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೊಸ ದಾಖಲೆ ಬರೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಗೇಲ್ ಇನ್ನೊಂದು ಸಿಕ್ಸ್ ಬಾರಿಸಿದರೆ ಹೊಸ ಅಪರೂಪದ ದಾಖಲೆ ಜಮೈಕ ಕ್ರಿಕೆಟಿಗನ ಪಾಲಾಗಲಿದೆ.

ಹೌದು, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತಲಾ 37 ಸಿಕ್ಸರ್ ಸಿಡಿಸುವುದರೊಂದಿಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಎಬಿ ಡಿವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಘೋಷಿಸಿರುವುದರಿಂದ ಈ ವಿಶ್ವಕಪ್’ನಲ್ಲಿ ಎಬಿಡಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಗೇಲ್ ಇನ್ನೊಂದು ಸಿಕ್ಸರ್ ಸಿಡಿಸಿದರೂ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಆಟಗಾರ ಎನಿಸಲಿದ್ದಾರೆ.

ವಿಶ್ವಕಪ್ 2019: ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಇಮ್ರಾನ್ ತಾಹಿರ್..!

ಇದು ಗೇಲ್ ಪಾಲಿಗೆ ಇದು ಕೊನೆಯ ವಿಶ್ವಕಪ್ ಟೂರ್ನಿ ಆಗಿರುವುದರಿಂದ ಇದೇ ಆವೃತ್ತಿಯಲ್ಲಿ ಗೇಲ್ 50 ಸಿಕ್ಸರ್ ಪೂರ್ಣಗೊಳಿಸಿದರೂ ಅಚ್ಚರಿಪಡಬೇಕಿಲ್ಲ. 2015ರ ಏಕದಿನ ವಿಶ್ವಕಪ್ ಟೂರ್ನಿಯೊಂದರಲ್ಲೇ ಗೇಲ್ 26 ಸಿಕ್ಸರ್ ಸಿಡಿಸಿದ್ದರು.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...


 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!