ಆಫ್ಘನ್ ಎದುರು ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ

By Web DeskFirst Published Jun 24, 2019, 1:16 PM IST
Highlights

ವಿಶ್ವಕಪ್ ಟೂರ್ನಿಯಲ್ಲಿಂದು ಬಾಂಗ್ಲಾದೇಶ-ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಸೆಮೀಸ್ ಮೇಲೆ ಕಣ್ಣಿಟ್ಟಿರುವ ಬಾಂಗ್ಲಾದೇಶ ಪಾಲಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ಸೌಥಾಂಪ್ಟನ್(ಜೂ.24): ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ರೇಸ್ ನಲ್ಲಿ ಉಳಿಯಲು ಹರಸಾಹಸ ಪಡುತ್ತಿರುವ ಬಾಂಗ್ಲಾದೇಶ ಸೋಮವಾರ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಎದುರು ಸೆಣಸಲಿದೆ.

ಇದು ಬಾಂಗ್ಲಾ ಹುಲಿಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರೇ ಮಾತ್ರ ಬಾಂಗ್ಲಾ ಸೆಮೀಸ್ ರೇಸ್‌ನಲ್ಲಿಉಳಿಯಲಿದೆ. ಕಳೆದ ಶುಕ್ರವಾರ ಇಂಗ್ಲೆಂಡ್ ತಂಡದ ವಿರುದ್ಧ ಶ್ರೀಲಂಕಾ ಗೆದ್ದಿದ್ದರಿಂದ ಬಾಂಗ್ಲಾಕ್ಕೆ ಉಸಿರು ಬಿಗಿಹಿಡಿಯುವ ಪರಿಸ್ಥಿತಿ ಎದುರಾಗಿದೆ. ಇದೀಗ ಬಾಂಗ್ಲಾ ಆಫ್ಘನ್ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಇದೆ. ಸದ್ಯ ಬಾಂಗ್ಲಾ, ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯಿಸಿದ್ದು, 5 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಇನ್ನೂ ಆಫ್ಘಾನಿಸ್ತಾನ ಆಡಿರುವ 6 ಪಂದ್ಯಗಳನ್ನು ಸೋತಿದ್ದು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಭಾರತ ವಿರುದ್ಧ ಗೆಲುವಿನ ಅಂಚಿನಲ್ಲಿದ್ದರೂ ಅಂತಿಮವಾಗಿ ಸೋಲೊಪ್ಪಿಕೊಂಡಿತು. ಇದೀಗ ನೆರೆಯ ಬಾಂಗ್ಲಾ ವಿರುದ್ಧ ಜಯದ ಖಾತೆ ತೆರೆಯುವ ಉತ್ಸಾಹದಲ್ಲಿ ಆಫ್ಘನ್ ಕಣಕ್ಕಿಳಿಯುತ್ತಿದೆ.

ಧೋನಿ ಮೇಲೆ ಕಿಡಿಕಾರಿದ ಸಚಿನ್ ತೆಂಡುಲ್ಕರ್..!

ಬಾಂಗ್ಲಾ ಬ್ಯಾಟಿಂಗ್ / ಆಫ್ಘನ್ ಸ್ಪಿನ್ನರ್ಸ್‌: ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಬ್ಯಾಟಿಂಗ್ ಪಡೆ ಬಲಾಢ್ಯವಾಗಿದೆ. ಆಲ್ರೌಂಡರ್ ಶಕೀಬ್‌ರ ಅದ್ಭುತ ಬ್ಯಾಟಿಂಗ್ ಬಾಂಗ್ಲಾಗೆ ಹೆಚ್ಚಿನ ಬಲ ನೀಡಿದೆ. ಹಾಗೆ ಆಫ್ಘನ್ ಸ್ಪಿನ್ನರ್ಸ್‌ಗಳು ಗಮನ ಸೆಳೆದಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ಆಫ್ಘನ್ ಸ್ಪಿನ್ನರ್‌ಗಳು ಕಡಿವಾಣ ಹಾಕಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.
 

click me!