ಧೋನಿಗೆ ಸಚಿನ್ ಕ್ಲಾಸ್: ಕಿತ್ತಾಡಿಕೊಂಡ ಅಭಿಮಾನಿಗಳು

Published : Jun 25, 2019, 06:49 PM IST
ಧೋನಿಗೆ ಸಚಿನ್ ಕ್ಲಾಸ್:  ಕಿತ್ತಾಡಿಕೊಂಡ ಅಭಿಮಾನಿಗಳು

ಸಾರಾಂಶ

ಧೋನಿ ಹಾಗೂ ಸಚಿನ್ ಟೀಂ ಇಂಡಿಯಾ ಕ್ರಿಕೆಟ್ ಜಗತ್ತಿಗೆ ನೀಡಿದ ಎರಡು ಅಮೂಲ್ಯ ರತ್ನಗಳು. ಆದರೆ ಈ ಇಬ್ಬರು ಕ್ರಿಕೆಟಿಗರ ಅಭಿಮಾನಿಗಳೀಗ ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಬೆಂಗಳೂರು[ಜೂ.25] ಒಬ್ಬರು ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ ಮನ್, ಮತ್ತೊಬ್ಬ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ.  ಒಬ್ಬರು ಸುಮಾರು ಎರಡೂವರೆ ದಶಕಗಳ ಕಾಲ ಭಾರತ ತಂಡಕ್ಕೆ ಆಸರೆಯಾಗಿದ್ದ ಆಪತ್ಭಾಂದವ, ಮತ್ತೊಬ್ಬ ಒಂದೂವರೆ ದಶಕಗಳ ಕಾಲ ವಿಕೆಟ್ ಹಿಂದೆ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಚಾಣಾಕ್ಷ ಕ್ರಿಕೆಟಿಗ. ಇವರಿಬ್ಬರು ಯಾರು ಎಂದು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಬ್ಬರು ಸಚಿನ್ ತೆಂಡುಲ್ಕರ್, ಮತ್ತೊಬ್ಬರು ಮಹೇಂದ್ರ ಸಿಂಗ್ ಧೋನಿ. ಇದೀಗ ಸಚಿನ್ ತೆಂಡುಲ್ಕರ್ ಕೊಟ್ಟ ಒಂದು ಹೇಳಿಕೆ ಉಭಯ ಕ್ರಿಕೆಟಿಗರ ಅಭಿಮಾನಗಳಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಧೋನಿ ಮೇಲೆ ಕಿಡಿಕಾರಿದ ಸಚಿನ್ ತೆಂಡುಲ್ಕರ್..!

ಅಷ್ಟಕ್ಕೂ ಆಗಿದ್ದೇನು..?
ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ  ಮಂದಗತಿಯಲ್ಲಿ ಬ್ಯಾಟ್ ಬೀಸಿದ್ದ ಧೋನಿ ಬಗ್ಗೆ ಸಚಿನ್ ತೆಂಡುಲ್ಕರ್ ಅಸಮಾಧಾನ ವ್ಯಕ್ತೊಡಿಸಿದ್ದರು. ಧೋನಿ ಆಫ್ಘನ್ ಎದುರು 52 ಎಸೆತಗಳಲ್ಲಿ ಕೇವಲ 28 ರನ್ ಬಾರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿನ್, ನನಗೆ ಕೊಂಚ ಬೇಸರವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಧೋನಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬಹುದಿತ್ತು ಎಂದಿದ್ದರು. ಈ ಹೇಳಿಕೆ ಉಭಯ ಕ್ರಿಕೆಟಿಗರ ಅಭಿಮಾನಿಗಳಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. 

ಹೀಗಿದೆ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಕಿತ್ತಾಟ.... 

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!