ವಿಶ್ವಕಪ್ 2019: ಧವನ್ ದಾಖಲೆ ಅಳಿಸಿಹಾಕಿದ ಬಾಬರ್ ಅಜಂ..!

By Web DeskFirst Published Jun 26, 2019, 11:00 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಯುವ ಕ್ರಿಕೆಟಿಗ ಬಾಬರ್ ಅಜಂ ಅಪರೂಪದ ದಾಖಲೆ ಮಾಡಿದ್ದಾರೆ. ಇದರ ಜತೆಗೆ ಧವನ್ ಹೆಸರಿನಲ್ಲಿದ್ದ ದಾಖಲೆ ಇದೀಗ ಪಾಕ್ ಕ್ರಿಕೆಟಿಗ ಪಾಲಾಗಿದೆ. ಅಷ್ಟಕ್ಕೂ ಯಾವುದದು ದಾಖಲೆ ನೀವೇ ನೋಡಿ... 

ಬರ್ಮಿಂಗ್ ಹ್ಯಾಮ್[ಜೂ.26]: ಪಾಕಿಸ್ತಾನ ತಂಡದ ಪ್ರತಿಭಾನ್ವಿತ ಕ್ರಿಕೆಟಿಗ ಬಾಬರ್ ಅಜಂ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್’ನಲ್ಲಿ ಅತಿವೇಗವಾಗಿ ಮೂರು ಸಾವಿರ ರನ್ ಪೂರೈಸಿದ ಏಷ್ಯಾದ ಮೊದಲ ಹಾಗೂ ವಿಶ್ವದ ಎರಡನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಧವನ್ ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿದ್ದಾರೆ.  ಬಾಬರ್ ಅಜಂ 52 ಪಂದ್ಯಗಳಲ್ಲಿ 9 ಶತಕ ಹಾಗೂ 15* ಆರ್ಧಶತಕ ಸಿಡಿಸಿ ಮಿಂಚಿದ್ದಾರೆ. 

ವಿಶ್ವಕಪ್ ಬಳಿಕ ಭಾರತ ವಿರುದ್ಧ ಕ್ರಿಕೆಟ್ ಆಡಲು ರೆಡಿ: ಗೇಲ್

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವೈಯುಕ್ತಿಕ 29 ರನ್ ಬಾರಿಸುತ್ತಿದ್ದಂತೆ ಅಜಂ ಮೂರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.  ಕೇವಲ 68 ಇನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಪೂರೈಸುವ ಮೂಲಕ ವೀವ್ ರಿಚರ್ಡ್ಸ್[69], ಧವನ್[72], ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿದ್ದಾರೆ. ಇನ್ನು ಅತಿ ವೇಗವಾಗಿ ಮೂರು ಸಾವಿರ ರನ್ ಪೂರೈಸಿದ ದಾಖಲೆ ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ[57] ಹೆಸರಿನಲ್ಲಿದೆ.

ಮಾಲಿಂಗ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ

ನ್ಯೂಜಿಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ದಿಟ್ಟ ಹೋರಾಟ ನಡೆಸುತ್ತಿದ್ದು 238 ರನ್ ಗಳ ಗುರಿ ಬೆನ್ನಟ್ಟಿದೆ. ಪಾಕಿಸ್ತಾನ 35 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 145 ರನ್ ಬಾರಿಸಿದ್ದು, ಬಾಬರ್ ಅಜಂ ಅಜೇಯ 57 ರನ್ ಬಾರಿಸಿದೆ. 

ಅತಿ ವೇಗವಾಗಿ ಮೂರು ಸಾವಿರ ರನ್ ಪೂರೈಸಿದ ಏಷ್ಯಾದ ಕ್ರಿಕೆಟಿಗರು:
ಬಾಬರ್ ಅಜಂ: 68 ಇನಿಂಗ್ಸ್
ಶಿಖರ್ ಧವನ್:  72 ಇನಿಂಗ್ಸ್
ವಿರಾಟ್ ಕೊಹ್ಲಿ: 75 ಇನಿಂಗ್ಸ್

click me!