ವಿಶ್ವಕಪ್ 2019: ಸೌತ್ ಆಫ್ರಿಕಾಗೆ 127 ರನ್ ಟಾರ್ಗೆಟ್ ನೀಡಿದ ಅಫ್ಘಾನ್!

By Web DeskFirst Published Jun 15, 2019, 10:13 PM IST
Highlights

ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಳೆ ಅಡ್ಡಿಯಾದ ಕಾರಣ  ಅಫ್ಘಾನಿಸ್ತಾನ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಅಫ್ಘಾನ್ ಮಳೆ ಬಳಿಕ ದಿಢೀರ್ ವಿಕೆಟ್ ಪತನಗೊಂಡಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

ಕಾರ್ಡಿಫ್(ಜೂ.15): ಮಳೆಯಿಂದ ಸ್ಥಗಿತಗೊಂಡಿದ್ದ ಪಂದ್ಯ ಪುನರ್ ಆರಂಭವಾಗುತ್ತಿದ್ದಂತೆ ಅಫ್ಘಾನಿಸ್ತಾನ ತಂಡ ದಿಢೀರ್ ಕುಸಿತ ಕಾಣೋ ಮೂಲಕ ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ. ಸೌತ್ ಆಫ್ರಿಕಾ ವಿರುದ್ಧ ಹೋರಾಟ ನಡಸುತ್ತಿರುವ ಅಫ್ಘಾನಿಸ್ತಾನ ಓವರ್‌ಗಳಲ್ಲಿ 125 ರನ್‌ಗೆ ಆಲೌಟ್ ಆಗಿದೆ.ಡಕ್‌ವರ್ತ್ ನಿಯಮದ ಪ್ರಕಾರ ಸೌತ್ ಆಫ್ರಿಕಾಗೆ 127 ರನ್ ಟಾರ್ಗೆಟ್ ನೀಡಲಾಯಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ಹಝ್ರತುಲ್ಹಾ ಜಝೈ ಹಾಗೂ ನೂಕಕ್ ಆಲಿ ಝರ್ದಾನ್ 39 ರನ್ ಜೊತೆಯಾಟ ನೀಡಿದರು. ಜಝೈ 22 ರನ್ ಸಿಡಿಸಿ ಔಟಾದರು. ಇದೇ ವೇಳೆ ಸುರಿದ ಮಳೆಯಿಂದ ಪಂದ್ಯವನ್ನು 48 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಪಂದ್ಯ ಪುನರ್ ಆರಂಭವಾಗುತ್ತಿದ್ದಂತೆ ಅಫ್ಘಾನಿಸ್ತಾನ ದಿಢೀರ್ ಕುಸಿತ ಕಂಡಿತು.

ನೂರ್ ಆಲಿ ಝರ್ದಾನ್ 32 ರನ್ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ ರಶೀದ್ ಖಾನ್ 35 ರನ್ ಸಿಡಿಸಿದರು.  ಇತರ ಬ್ಯಾಟ್ಸ್‌ಮನ್‌ಗಳು ಹೋರಾಟ ನೀಡಲಿಲ್ಲ. ಹೀಗಾಗಿ ಅಫ್ಘಾನಿಸ್ತಾನ 34.1 ಓವರ್‌ಗಳಲ್ಲಿ 125 ರನ್‌ಗೆ ಆಲೌಟ್ ಆಯಿತು. ಇಮ್ರಾನ್ ತಾಹೀರ್ 4, ಕ್ರಿಸ್ ಮೊರಿಸ್ 3 ವಿಕೆಟ್ ಕಬಳಿಸಿ ಮಿಂಚಿದರು. 

click me!