
ಕಾರ್ಡಿಫ್(ಜೂ.15): ಸೌತ್ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ 48 ಓವರ್‌ಗೆ ಸೀಮಿತಗೊಳಿಸಲಾಗಿದೆ. 20 ಓವರ್ ಪಂದ್ಯ ಮುಕ್ತಾಯಗೊಂಡ ಬೆನ್ನಲ್ಲೇ ಸುರಿದ ಮಳೆಯಿಂದಾಗಿ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆ ನಿಂತಿದ್ದು, ಪಂದ್ಯ ಪುನರ್ ಆರಂಭಗೊಂಡಿದೆ. ಆದರೆ 2 ಓವರ್ ಕಡಿತಗೊಳಿಸಲಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 69 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಝರ್ದಾನ್ ಅಜೇಯ 32 ಹಾಗೂ ಹಶ್ಮುತುಲ್ಹಾ ಶಾಹಿದಿ ಅಜೇಯ 8 ರನ್ ಸಿಡಿಸಿದ್ದರು. ಪಂದ್ಯ ಪುನರ್ ಆರಂಭಗೊಳ್ಳುತ್ತಿದ್ದಂತೆ, ಅಫ್ಘಾನಿಸ್ತಾನ ದಿಢೀರ್ ವಿಕೆಟ್ ಕಳೆದುಕೊಂಡಿದೆ.