ವಿಶ್ವಕಪ್ ಅತ್ಯುತ್ತಮ ಕ್ಯಾಚ್ ಅವಾರ್ಡ್‌ಗೆ 7 ಕ್ರಿಕೆಟಿಗರ ನಡುವೆ ಸ್ಪರ್ಧೆ!

By Web DeskFirst Published Jul 8, 2019, 8:00 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಫೀಲ್ಡರ್‌ಗಳು ಅದ್ಭುತ ಕ್ಯಾಚ್ ಹಿಡಿಯೋ ಮೂಲಕ ಗಮನಸೆಳೆದಿದ್ದಾರೆ. ಇದದರ ಪೈಕಿ 7 ಕ್ಯಾಚ್‌ಗಳು ಬೆಸ್ಟ್ ಕ್ಯಾಚ್ ಪ್ರಸಸ್ತಿ ರೇಸ್‌ನಲ್ಲಿದೆ. 

ಲಂಡನ್(ಜು.08): ವಿಶ್ವಕಪ್ ಟೂರ್ನಿಯ ವಿವಿದ ವಿಭಾಗದ ಪ್ರಶಸ್ತಿಗೆ ಪೈಪೋಟಿ ಜೋರಾಗಿದೆ. ಸರಣಿ ಶ್ರೇಷ್ಠ ಪ್ರಶಸ್ತಿಗೆ ನಾಲ್ವರು ಹೋರಾಟ ನಡೆಸುತ್ತಿದ್ದರೆ, ಟೂರ್ನಿಯ ಅತ್ಯುತ್ತಮ ಕ್ಯಾಚ್‌ ಪ್ರಶಸ್ತಿಗೆ ಟೀಂ ಇಂಡಿಯಾದ ರವೀಂದ್ರ ಜಡೇಜಾ ಸೇರಿದಂತೆ 7 ಕ್ರಿಕೆಟಿಗರ ನಡುವೆ ಸ್ಪರ್ಧೆ ಹೆಚ್ಚಾಗಿದೆ. ಸದ್ಯ ರೇಸ್‌ನಲ್ಲಿರುವ 7 ಅದ್ಭುತ ಕ್ಯಾಚ್ ವಿವರ ಇಲ್ಲಿದೆ.

ಇದನ್ನೂ ಓದಿ: ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ವೆಟೋರಿ ಟಿಪ್ಸ್!

ಫ್ಯಾಬಿಯನ್ ಅಲೆನ್(ವೆಸ್ಟ್ ಇಂಡೀಸ್ VS ಆಫ್ಘಾನಿಸ್ತಾನ)
ಆಫ್ಘಾನ್ ಬ್ಯಾಟ್ಸ್‌ಮನ್ ಸೈಯದ್ ಶಿರ್ಜಾದ್ ನೀಡಿದ ಕ್ಯಾಚನ್ನು ಅದ್ಭುತವಾಗಿ ಹಿಡಿದ ಫ್ಯಾಬಿಯನ್ ಅಲೆನ್ ಅತ್ಯುತ್ತಮ ಕ್ಯಾಚ್ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ರವೀಂದ್ರ ಜಡೇಜಾ(ಭಾರತ VS ಇಂಗ್ಲೆಂಡ್)
ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದ ರವೀಂದ್ರ ಜಡೇಜಾ, ಜೇಸನ್ ರಾಯ್ ನೀಡಿದ ಅಸಾಧ್ಯ  ಕ್ಯಾಚನ್ನು ಅದ್ಭುತವಾಗಿ ಹಿಡಿದು ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟಿದರು. ಈ ಕ್ಯಾಚ್ ವಿಶ್ವಕಪ್ ಟೂರ್ನಿಯ ಅತ್ಯುತ್ತಮ ಕ್ಯಾಚ್ ರೇಸ್‌ನಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಜಾಂಟಿ ರೋಡ್ಸ್

ಸ್ಟೀವ್ ಸ್ಮಿತ್(ಆಸ್ಟ್ರೇಲಿಯಾ VS ನ್ಯೂಜಿಲೆಂಡ್)
ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಟಾಮ್ ಲಾಥ್ ಸಿಡಿಸಿದ ಕ್ಯಾಚ್, ಡೈವ್ ಮೂಲಕ ಸ್ಟೀವ್ ಸ್ಮಿತ್ ಹಿಡಿದು ಎಲ್ಲರ ಹುಬ್ಬೇರಿಸಿದ್ದರು. ಈ ಕ್ಯಾಚ್ ಕೂಡ ಪ್ರಸಸ್ತಿ ರೇಸ್‌ನಲ್ಲಿದೆ.

ಮಾರ್ಟಿನ್ ಗಪ್ಟಿಲ್(ಆಸ್ಟ್ರೇಲಿಯಾ VS ನ್ಯೂಜಿಲೆಂಡ್)
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಅದ್ಭುತ ಕ್ಯಾಚ್ ಹಿಡಿದ್ದಾರೆ. ವಿಶೇಷ ಅಂದರೆ ಸ್ಟೀವ್ ಸ್ಮಿತ್ ನೀಡಿದ ಕ್ಯಾಚ್ ಹಿಡಿಯೋ ಮೂಲಕ ಗಪ್ಟಿಲ್ ತಿರುಗೇಟು ನೀಡಿದ್ದರು.

ಶೆಲ್ಡಾನ್ ಕಾಟ್ರೆಲ್(ವೆಸ್ಟ್ ಇಂಡೀಸ್ VS ಆಸ್ಟ್ರೇಲಿಯಾ)
ರೋಚಕ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಸಿಡಿಸಿದ ಫ್ಲಿಕ್ ಶಾಟ್‌ನ್ನು ಶೆಲ್ಡಾನ್ ಕಾಟ್ರೆಲ್ ಡೈವ್ ಮೂಲಕ ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮುಸ್ತಾಫಿಝುರ್ ರೆಹಮಾನ್(ಬಾಂಗ್ಲಾದೇಶ VS ಪಾಕಿಸ್ತಾನ)
ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್ ರಹಮಾನ್ ಯಾರ್ಕರ್ ಎಸೆತವನ್ನು ಡಿಫೆನ್ಸ್ ಮಾಡಲು ಪಾಕ್ ಬ್ಯಾಟ್ಸ್‌ಮನ್ ಶದಬ್ ಖಾನ್ ಪರದಾಡಿದರು. ಬಾಲ್ ಎಡ್ಜ್ ಆಗಿ ನೇರವಾಗಿ ಬೌಲರತ್ತ ಚಿಮ್ಮಿತು. ತಕ್ಷಣವೇ ಅದ್ಭುತ ಕ್ಯಾಚ್ ಹಿಡಿದ ರಹಮಾನ್ ವಿಕೆಟ್ ಕಬಳಿಸಿದರು.

click me!