ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಬ್ಬರಿಸಿ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬೆನ್ ಸ್ಟೋಕ್ಸ್‌ಗೆ ಬ್ರಿಟನ್ ಸರ್ಕಾರ್ ಮಹತ್ವದ ಗೌರವ ನೀಡಿದೆ. ನ್ಯೂಜಿಲೆಂಡ್ ಮೂಲದ ಸ್ಟೋಕ್ಸ್ ಇದೀಗ ಇಂಗ್ಲೆಂಡ್‌ನಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.
ಲಂಡನ್(ಜು.17): ಇಂಗ್ಲೆಂಡ್‌ನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್‌ಗೆ ಬ್ರಿಟನ್‌ನ ಅತ್ಯುನ್ನತ ನೈಟ್‌ಹುಡ್ ಗೌರವ ಸಿಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಅವರು ‘ಸರ್’ ಬೆನ್ ಸ್ಟೋಕ್ಸ್ ಎಂದು ಕರೆಸಿಕೊಳ್ಳುವ ನಿರೀಕ್ಷೆ ಇದೆ. ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸ್ಟೋಕ್ಸ್ ಅಜೇಯ 84 ರನ್ ಗಳಿಸಿ, ಇಂಗ್ಲೆಂಡ್ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: 2016ರಲ್ಲಿ ವಿಲನ್ ಆಗಿದ್ದ ಸ್ಟೋಕ್ಸ್, 2019ರಲ್ಲಿ ಹೀರೋ!
undefined
ಬಳಿಕ ಸೂಪರ್ ಓವರ್‌ನಲ್ಲೂ ಅವರು 8 ರನ್ ಗಳಿಸಿದರು. ಸ್ಟೋಕ್ಸ್ ಪ್ರದರ್ಶನ ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿಗಳಾದ ಬೋರಿಸ್ ಜಾನ್ಸನ್ ಹಾಗೂ ಜೆರೆಮಿ ಹಂಟ್ ಇಬ್ಬರ ಮನ ಸೆಳೆದಿದೆ. ಈ ತಿಂಗಳ ಅಂತ್ಯಕ್ಕೆ ಹಾಲಿ ಪ್ರಧಾನಿ ಥೆರೇಸಾ ಮೇ ಅವಧಿ ಮುಕ್ತಾಯಗೊಳ್ಳಲಿದ್ದು, ಬೋರಿಸ್ ಇಲ್ಲವೇ ಜೆರೆಮಿ ಇಬ್ಬರಲ್ಲಿ ಒಬ್ಬರು ನೂತನ ಪ್ರಧಾನಿಯಾಗಲಿದ್ದಾರೆ. ಇಬ್ಬರೂ ಸ್ಟೋಕ್ಸ್‌ಗೆ ನೈಟ್‌ಹುಡ್ ಗೌರವ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಕಾರಣವಾದ ಆ 5 ಅಂಶಗಳಿವು..!
ಈ ವರೆಗೂ 11 ಕ್ರಿಕೆಟಿಗರು ನೈಟ್‌ಹುಡ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್ ಕುಕ್ ಇತ್ತೀಚೆಗಷ್ಟೇ ಈ ಗೌರವ ಪಡೆದಿದ್ದರು.