ಟೀಂ ಇಂಡಿಯಾಗೆ ಅಂಟಿಕೊಂಡಿತಾ ಚೋಕರ್ಸ್ ಪಟ್ಟ?

By Web DeskFirst Published Jul 14, 2019, 10:02 PM IST
Highlights

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಸೋಲಿನ  ಬಳಿಕ ಟೀಂ ಇಂಡಿಯಾಗೆ ಚೋಕರ್ಸ್ ಹಣೆ ಪಟ್ಟಿ ಅಂಟಿಕೊಂಡಿದೆ. ಒಂದು ಸೋಲಿನಿಂದ ಟೀಂ ಇಂಡಿಯಾ ಚೋಕರ್ಸ್ ಆಗಿದ್ದು ಹೇಗೆ? ಇಲ್ಲಿದೆ ನೋಡಿ.

World cup Final: ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದ ಸ್ಕೋರ್ ಎಷ್ಟು?

ಬೆಂಗಳೂರು(ಜು.14): ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತೆ ಅನ್ನೋ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಇಷ್ಟೇ ಅಲ್ಲ, ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಈಗ ಹೊಸ ಚೋಕರ್ಸ್ ಅನ್ನೋ ಮಾತುಗಳು ಕೇಳಿಬಂದಿದೆ.

ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾ ತಂಡ ಚೋಕರ್ಸ್ ಅನ್ನೋ ಅಪಖ್ಯಾತಿಗೆ ಗುರಿಯಾಗಿತ್ತು. ಇದೀಗ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಪ್ರದರ್ಶನ ಚೋಕರ್ಸ್ ಪಟ್ಟಿಯನ್ನು ನೆನಪಿಸುವಂತಿದೆ. 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಇದುವರೆಗೂ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದೇ ಕಾರಣಕ್ಕೆ ಚೋಕರ್ಸ್ ಅನ್ನೋ ಹೆಸರು ಕೇಳಿಬರುತ್ತಿದೆ.

2014ರ ಬಳಿಕ ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಪ್ರದರ್ಶನ:
2014 -ಟಿ20 ವಿಶ್ವಕಪ್ ಫೈನಲ್    -ಲಂಕಾ ವಿರುದ್ದ 6 ವಿಕೆಟ್ ಸೋಲು
2015 -ವಿಶ್ವಕಪ್ ಸೆಮಿಫೈನಲ್    - ಆಸ್ಟ್ರೇಲಿಯಾ ವಿರುದ್ದ 95 ರನ್ ಸೋಲು
2015 -ಟಿ20 ವಿಶ್ವಕಪ್ ಸೆಮಿಫೈನಲ್     - ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಸೋಲು
2017-ಚಾಂಪಿಯನ್ಸ್ ಟ್ರೋಫಿ ಫೈನಲ್ - ಪಾಕಿಸ್ತಾನ ವಿರುದ್ಧ 180 ರನ್ ಸೋಲು
2019-ವಿಶ್ವಕಪ್ ಸೆಮಿಫೈನಲ್    - ನ್ಯೂಜಿಲೆಂಡ್ ವಿರುದ್ದ 18 ರನ್ ಸೋಲು
 

click me!