ಇಂಡೋ-ಕಿವೀಸ್ ಸೆಮಿಫೈನಲ್; ಭಾರತದ 3 ವಿಕೆಟ್ ಪತನ, ಸಂಕಷ್ಟದಲ್ಲಿ ಕೊಹ್ಲಿ ಸೈನ್ಯ!

By Web Desk  |  First Published Jul 10, 2019, 3:58 PM IST

ಭಾರತ ಹಾಗೂ  ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಇದೀಗ ಭಾರತೀಯರ ಕನಸಿನ ಗೋಪುರವನ್ನೇ ಕೆಡವುತ್ತಿದೆ. ಆರಂಭದಲ್ಲೇ ಭಾರತ 3 ವಿಕೆಟ್ ಪತನಗೊಂಡಿದ್ದು, ತೀವ್ರ ಸಂಕಷ್ಟದಲ್ಲಿದೆ.


ಮ್ಯಾಂಚೆಸ್ಟರ್(ಜು.10): ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಟೇಬಲ್ ಟಾಪರ್ ಆಗಿದ್ದ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಭಾರಿ ಹಿನ್ನಡೆ ಅನುಭವಿಸಿಸಿದೆ.  240 ರನ್ ಟಾರ್ಗೆಟ್ ಪಡದ ಟೀಂ ಇಂಡಿಯಾ 5 ರನ್ ಸಿಡಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 

ಮೀಸಲು ದಿನದಲ್ಲಿ ನ್ಯೂಜಿಲೆಂಡ್ ತಂಡವನ್ನು 240 ರನ್‌ಗೆ ಕಟ್ಟಿಹಾಕಿದ ಭಾರತ, ಸುಲಭ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಚೇಸ್ ಮಾಡಲು ಕ್ರೀಸಿಗಿಳಿದ ಕೊಹ್ಲಿ ಸೈನ್ಯ ಇದುವರೆಗೆ ಅನುಭವಿಸಿದ ವೈಫಲ್ಯ ಕಂಡಿತು. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಒಂದೊಂದು ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

Tap to resize

Latest Videos

ಮ್ಯಾಟ್ ಹೆನ್ರಿ ಹಾಗೂ ಟ್ರೆಂಟ್ ಬೋಲ್ಡ್ ದಾಳಿಗೆ ಟೀಂ ಇಂಡಿಯಾ ತತ್ತರಿಸಿದೆ. 3ನೇ ಓವರ್‌ನಲ್ಲಿ ಭಾರತದ 3 ವಿಕೆಟ್ ಪತನಗೊಂಡಿದ್ದು, ಸೆಮಿಫೈನಲ್ ಗೆಲುವಿನ ಹಾದಿ ಕಠಿಣವಾಗುತ್ತಿದೆ.
 

click me!