ಇಂಡೋ-ಕಿವೀಸ್ ಸೆಮಿಫೈನಲ್; ಮೀಸಲು ದಿನದಲ್ಲಿ ಭಾರತಕ್ಕೆ 240 ರನ್ ಟಾರ್ಗೆಟ್!

By Web DeskFirst Published Jul 10, 2019, 3:22 PM IST
Highlights

ಭಾರತ ಹಾಗೂ ನ್ಯೂಜೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಮೀಸಲು ದಿನದಲ್ಲಿ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದೆ. ನ್ಯೂಜಿಲೆಂಡ್ 239 ರನ್ ಸಿಡಿಸಿದೆ. ಈ ಮೂಲಕ ಭಾರತಕ್ಕೆ 240 ರನ್ ಟಾರ್ಗೆಟ್ ನೀಡಿದೆ. 

ಮ್ಯಾಂಚೆಸ್ಟರ್(ಜು.10): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ಮೀಸಲು ದಿನದಲ್ಲಿ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಜುಲೈ 9 ರಂದ ಆಯೋಜಿಸಿದ್ದ ಸೆಮೀಸ್ ಹೋರಾಟಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಜುಲೈ 10ಕ್ಕೆ ಪಂದ್ಯ ಮೂಂದೂಡಲಾಗಿತ್ತು. ಮೀಸಲ ದಿನದಲಲ್ಲಿ ನ್ಯೂಜಿಲೆಂಡ್ 46.2 ಓವರ್‌ನಿಂದ ಇನ್ನಿಂಗ್ಸ್ ಮುಂದುವರಿಸಿತು. ಅಂತಿಮ 23 ಎಸೆತ ಎದುರಿಸಿದ ಕಿವೀಸ್ 8 ವಿಕೆಟ್ ನಷ್ಟಕ್ಕೆ 239 ರನ್ ಸಿಡಿಸಿದೆ.

ಜುಲೈ 9 ರಂದು ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಭಾರತದ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿದ  ಕಿವೀಸ್ ಎಚ್ಚರಿಕೆಯ ಹೆಜ್ಜೆ ಇಟ್ಟಿತು.  ಮಾರ್ಟಿನ್ ಗಪ್ಟಿಲ್ 1 , ಹೆನ್ರಿ ನಿಕೋಲಸ್   28 , ನಾಯಕ ಕೇನ್ ವಿಲಿಯಮ್ಸನ್ 67,  ಜೇಮ್ಸ್ ನೀಶನ್ 12, ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ 16 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ರಾಸ್ ಟೇಲರ್ ಅಜೇಯ 67 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದರು. 46.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ 211 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಹೀಗಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು. 

ಮೀಸಲು ದಿನದಲ್ಲಿ ದಿಟ್ಟ ಹೋರಾಟ ನೀಡಿದ ರಾಸ್ ಟೇಲರ್‌ 74 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ರವೀಂದ್ರ ಜಡೇಜಾ ಡೈರೆಕ್ಟ್ ಹಿಟ್, ಟೇಲರ್ ವಿಕೆಟ್ ಕಬಳಿಸಿತು. ಇದರ ಬೆನ್ನಲ್ಲೇ ಟಾಮ್ ಲಾಥಮ್ 10 ರನ್ ಸಿಡಿಸಿ ಔಟಾದರು. ಮ್ಯಾಟ್ ಹೆನ್ರಿ ಕೇವಲ 1 ರನ್‌ಗೆ ಸುಸ್ತಾದರು. ಈ ಮೂಲಕ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 239 ರನ್  ಸಿಡಿಸಿತು. 
 

click me!