ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪ್ರಕಟ- ಅಗ್ರಸ್ಥಾನದಲ್ಲಿ 'ಕೊಹ್ಲಿ' ಬಾಯ್ಸ್!

Published : Jul 07, 2019, 06:05 PM ISTUpdated : Jul 07, 2019, 06:10 PM IST
ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪ್ರಕಟ- ಅಗ್ರಸ್ಥಾನದಲ್ಲಿ 'ಕೊಹ್ಲಿ' ಬಾಯ್ಸ್!

ಸಾರಾಂಶ

ವಿಶ್ವಕಪ್ ಟೂರ್ನಿ ಲೀಗ್ ಹಂತ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದ್ಲಲಿ ಯಾರಿದ್ದಾರೆ. ಇಲ್ಲಿದೆ ವಿವರ.

ದುಬೈ(ಜು.07): ವಿಶ್ವಕಪ್ ಟೂರ್ನಿ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದೆ. ಜುಲೈ 9 ರಿಂದ ಸೆಮಿಫೈನಲ್ ಪಂದ್ಯಗಳು ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ ಐಸಿಸಿ ಏಕದಿನ ಕ್ರಿಕೆಟ್ ಆಟಗಾರರ ರ‍್ಯಾಂಕಿಂಗ್ ಪ್ರಕಟಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರೇ ಅಗ್ರಸ್ಥಾನದಲ್ಲಿ ಅಲಂಕೃತರಾಗಿದ್ದಾರೆ.

ಇದನ್ನೂ ಓದಿ: ನಮ್ಮ ಬೆಂಬಲ ಭಾರತಕ್ಕೆ, ವಿರಾಟ್ ಪಡೆ ವಿಶ್ವಕಪ್ ಗೆಲ್ಲಲಿ ಎಂದ ಪಾಕ್ ವೇಗಿ..!

ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಸ್ಫೋಟಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಕೊಹ್ಲಿ ಹಾಗೂ ರೋಹಿತ್ ಹೊರತು ಪಡಿಸಿದರೆ ಟಾಪ್ 10 ಪಟ್ಟಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಕಾಣಿಸಿಕೊಂಡಿಲ್ಲ. 

 

ಇದನ್ನೂ ಓದಿ: ಆಸೀಸ್ ವಿರುದ್ಧದ ಗೆಲುವಿನ ಬೆನ್ನಲ್ಲೇ ಸೆಮಿ ಫೈನಲ್ ಭವಿಷ್ಯ ನುಡಿದ ಡುಪ್ಲೆಸಿಸ್!

ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಕೀ ಪ್ಲೇಯರ್ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ.  ಸ್ಪಿನ್ನರ್ ಕುಲ್ದೀಪ್ ಯಾದವ್ 8ನೇ ಪಡೆದಿದ್ದಾರೆ. ಈ ಇಬ್ಬರು ಬೌಲರ್‌ಗಳನ್ನು ಹೊರತು  ಪಡಿಸಿದರೆ ಟಾಪ್ 10 ಪಟ್ಟಿಯಲ್ಲಿ ಇತರ ಭಾರತೀಯ ಬೌಲರ್‌ಗಳು ಸ್ಥಾನ ಪಡೆದಿಲ್ಲ.  

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!