ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಣಿಸಿದ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿಶ್ವಕಪ್ ಇತಿಹಾಸದಲ್ಲೇ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡ ಕಾರಣ ಸೂಪರ್ ಓವರ್ನಲ್ಲಿ ಇಂಗ್ಲೆಂಡ್ ವಿಶ್ವಕಪ್ ಟ್ರೋಫಿ ಗೆಲ್ಲೋ ಮೂಲಕ ಹೊಸ ದಾಖಲೆ ಬರೆದಿದೆ.
ಲಾರ್ಡ್ಸ್(ಜು.14): ನ್ಯೂಜಿಲೆಂಡ್ ಇಂಗ್ಲೆಂಡ್ ಈಗ ವಿಶ್ವ ಕ್ರಿಕೆಟ್‌ನ ಹೊಸ ಚಾಂಪಿಯನ್. ಇದೇ ಮೊದಲ ಬಾರಿಗೆ ನನನನ ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ. ಈ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಇಂಗ್ಲೆಂಡ್ ಕೂಡ 241 ರನ್ ಸಿಡಿಸಿ ಆಲೌಟ್ ಆಯಿತು. ಹೀಗಾಗಿ ಪಂದ್ಯ ಟೈಗೊಂಡಿತು. ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಸೂಪರ್ ಓವರ್‌ನಲ್ಲೂ ಟೈಗೊಂಡಿತು. ಹೀಗಾಗಿ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ರೋಚಕ ಗೆಲುವು ಸಾಧಿಸಿತು.
ಗೆಲುವಿಗೆ 242 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕಿವೀಸ್ ಬೌಲರ್‌ಗಳ ಬೆಂಕಿ ಚೆಂಡು ಆಂಗ್ಲರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಜೇಸನ್ ರಾಯ್ 17 ರನ್ ಸಿಡಿಸಿ ಔಟಾದರು. ಜೂ ರೂಟ್ ಕೇವಲ 7 ರನ್‌ಗೆ ಔಟಾದರು. ಆದರೆ ಜಾನಿ ಬೈರ್‌ಸ್ಟೋ 36 ರನ್ ಕಾಣಿಕೆ ನೀಡಿದರು.
undefined
ನಾಯಕ ಇಯಾನ್ ಮಾರ್ಗನ್ ಹೋರಾಟ 9 ರನ್‌ಗೆ ಅಂತ್ಯವಾಯಿತು. 86 ರನ್‌ಗೆ 4 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಹೋರಾಟ ಇಂಗ್ಲೆಂಡ್ ತಂಡಕ್ಕೆ ಹೊಸ ಆಸೆ ಚಿಗುರಿಸಿತು. ಸ್ಟೋಕ್ಸ್ ಹಾಗೂ ಬಟ್ಲರ್ ತಲಾ ಹಾಫ್ ಸೆಂಚುರಿ ಸಿಡಿಸಿದರು. ಬಟ್ಲರ್ 59 ರನ್ ಸಿಡಿಸಿ ಔಟಾದರು.
ಕ್ರಿಸ್ ವೋಕ್ಸ್ ಕೇವಲ 2 ರನ್‌ಗೆ ಔಟಾದರು. ಇಂಗ್ಲೆಂಡ್ ಗೆಲುವಿಗೆ 18 ಎಸೆತ 34 ರನ್ ಬೇಕಿತ್ತು. ಸ್ಟೋಕ್ಸ್ ಸಿಕ್ಸರ್ ಸಿಡಿಸೋ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಇತ್ತ ಲಿಯಾಮ್ ಪ್ಲಂಕೆಟ್ 10 ರನ್ ಸಿಡಿಸಿ ಔಟಾದರು. ಜೋಫ್ರಾ ಆರ್ಚರ್ ಶೂನ್ಯ ಸುತ್ತಿದರು. 8 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಗೆಲುವಿಗೆ 6 ಎಸೆತದಲ್ಲಿ 15 ರನ್ ಬೇಕಿತ್ತು.
ಆರಂಭಿಕ 2 ಎರಡು ಎಸೆತದಲ್ಲಿ ಯಾವುದೇ ರನ್ ಬಂದಿಲ್ಲ, ಆದರೆ 3ನೇ ಎಸೆತದಲ್ಲಿ ಸ್ಟೋಕ್ಸ್ ಸಿಕ್ಸರ್ ಸಿಡಿಸಿದರೆ, ನಾಲ್ಕನೇ ಎಸತದಲ್ಲಿ ಓವರ್ ಥ್ರೋ ಇಂಗ್ಲೆಂಡ್‌ಗೆ ಮತ್ತೆ 6 ರನ್ ನೀಡಿತು. ಆದಿಲ್ ರಶೀದ್ ರನೌಟ್ ಬಳಿಕ, ಅಂತಿ 1 ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ 2ನೇ ರನ್‌ಗೆ ಯತ್ನಿಸಿದ ಪ್ಲಂಕೆಟ್ ರನೌಟ್‌ಗೆ ಬಲಿಯಾದರು. ಈ ಮೂಲಕ ಇಂಗ್ಲೆಂಡ್ 241 ರನ್‌ಗೆ ಆಲೌಟ್ ಆಯಿತು. ಸ್ಟೋಕ್ಸ್ ಅಜೇಯ 84 ರನ್ ಸಿಡಿಸಿದರು. ಈ ಮೂಲಕ ಪಂದ್ಯ ಟೈಗೊಂಡಿತು.ಹೀಗಾಗಿ ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು.
ಸೂಪರ್ ಓವರ್ನಲ್ಲಿ ಇಂಗ್ಲೆಂಡ್ 15 ರನ್ ಸಿಡಿಸಿತು. ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಅಬ್ಬರಿಸಿದರು. 2 ಬೌಂಡರಿ ನೆರವಿನಿಂದ ನ್ಯೂಜಿಲೆಂಡ್‌ಗೆ 16 ರನ್ ಟಾರ್ಗೆಟ್ ನೀಡಲಾಯಿತು. ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ ಹಾಗೂ ಜೇಮ್ಸ್ ನೀಶಮ್ ರನ್ ಚೇಸ್ ಮಾಡಲು ಕಣಕ್ಕಿಳಿದರು. ಜೇಮ್ಸ್ ನೀಶನ್ ಭರ್ಜರಿ ಸಿಕ್ಸರ್ ಪಂದ್ಯಕ್ಕೆ ರೋಚಕ ತಿರುವು ನೀಡಿತು. ಆದರೆ ಅಂತಿಮ 1 ಎಸೆತದಲ್ಲಿ 2 ರನ್ ಬೇಕಿತ್ತು. 2ನೇ ರನ್‌ಗೆ ಪ್ರಯತ್ನಿಸಿದ ಗಪ್ಟಿಲ್ ರನೌಟ್‌ಗೆ ಬಲಿಯಾದರು.ಪಂದ್ಯ ಮತ್ತೆ ಟೈಗೊಂಡಿತು. ಆದರೆ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತು. ಕ್ರಿಕೆಟ್ ಜನಕರು ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದಿಕೊಂಡಿತು. ಆದರೆ ದಿಟ್ಟ ಹೋರಾಟ ನೀಡಿದರೂ ನ್ಯೂಜಿಲೆಂಡ್‌ಗೆ ಅದೃಷ್ಠ ಕೈಹಿಡಿಯಲಿಲ್ಲ. ಸತತ 2ನೇ ಬಾರಿ ನ್ಯೂಜಿಲೆಂಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.