ಕ್ರೀಡೆಗೆ ಬರಬೇಡಿ; ವಿಶ್ವಕಪ್ ಬಳಿಕ ಮಕ್ಕಳಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗನ ಮನವಿ!

Published : Jul 15, 2019, 05:46 PM IST
ಕ್ರೀಡೆಗೆ ಬರಬೇಡಿ; ವಿಶ್ವಕಪ್ ಬಳಿಕ ಮಕ್ಕಳಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗನ ಮನವಿ!

ಸಾರಾಂಶ

ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯ ಸೋತ ನ್ಯೂಜಿಲೆಂಡ್ ತಂಡ ತೀವ್ರ ಆಘಾತಕ್ಕೊಳಗಾಗಿದೆ. ಸೋಲಿನ ನೋವಿನ ಬೆನ್ನಲ್ಲೇ ನ್ಯೂಜಿಲೆಂಡ್ ಕ್ರಿಕೆಟಿಗ ಜೇಮ್ಸ್ ನೀಶನ್ ಮಕ್ಕಳಲ್ಲಿ ಮನವಿ ಮಾಡಿದ್ದಾರೆ. ಇಲ್ಲಿದೆ ವಿವರ.

ಲಾರ್ಡ್ಸ್(ಜು.15): ವಿಶ್ವಕಪ್ ಫೈನಲ್ ಪಂದ್ಯ ಇಂಗ್ಲೆಂಡ್ ತಂಡ ಹಾಗೂ ಅಭಿಮಾನಿಗಳಿಗೆ ಹೆಚ್ಚಿನ ಖುಷಿ ನೀಡಿದರೆ, ನ್ಯೂಜಿಲೆಂಡ್ ತಂಡ ಹಾಗೂ ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ನೋವು ನೀಡಿದೆ. ಎರಡೂ ತಂಡ ಪ್ರಶಸ್ತಿ ಗೆಲ್ಲಲು ಅರ್ಹವಾಗಿತ್ತು. ಪಂದ್ಯ ಟೈ ಆಗಿ, ಸೂಪರ್ ಓವರ್‌ನಲ್ಲೂ ಟೈ ಆದ ಕಾರಣ ಗರಿಷ್ಠ ಬೌಂಡರಿ  ಆಧಾರದಲ್ಲಿ ಇಂಗ್ಲೆಂಡ್ ಗೆಲುವು ಘೋಷಿಸಲಾಯಿತು. ಉಭಯ ತಂಡಗಳಿಗೂ ಟ್ರೋಫಿ ಹಂಚಬೇಕಿತ್ತು ಅನ್ನೋ ವಾದವಿದೆ. ಕಠಿಣ ಹೋರಾಟ ನೀಡಿ, ತನ್ನದ್ದಲ್ಲದ  ತಪ್ಪಿಗೆ ನ್ಯೂಜಿಲೆಂಡ್ ಸೋಲು ಕಂಡಿದೆ. ಇದು ತಂಡಕ್ಕೆ ತೀವ್ರ ಆಘಾತ ನೀಡಿದೆ. ಸೋಲಿನ ಬಳಿಕ ನ್ಯೂಜಿಲೆಂಡ್ ಕ್ರೆಟಿಗ ಜೇಮ್ಸ್ ನೀಶಮ್ ಮಕ್ಕಳಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಇತಿಹಾಸದಲ್ಲೇ ರೋಚಕ ಪಂದ್ಯ; ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್!

ಐಸಿಸಿ ನಿಯಮ, ಅಂಪೈರ್ ತೀರ್ಪುಗಳೆಲ್ಲವೂ ನ್ಯೂಜಿಲೆಂಡ್‌ಗೆ ವಿರುದ್ಧವಾಗಿತ್ತು. ಹೀಗಾಗಿ ನೋವಿನಲ್ಲೇ ಜೇಮ್ಸ್ ನೀಶನ್ ಟ್ವೀಟ್ ಮೂಲಕ ಮಕ್ಕಳಲ್ಲಿ ಮನವಿ ಮಾಡಿದ್ದಾರೆ. ಯಾರೂ ಕೂಡ ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಬೇಡಿ. ನಿಮಗಿಷ್ಟ ಬಂದ ಹಾಗೆ ಇರಿ. ನಿಮಗಿಷ್ಟವಾದದನ್ನು ತಿನ್ನಿರಿ, 60 ವರ್ಷ ಹಾಯಾಗಿರಿ ಎಂದು ಮೊದಲ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಫಿಟ್ನೆಸ್, ಅಭ್ಯಾಸ ಹಾಗೂ ಪಂದ್ಯಕ್ಕಾಗಿ ಶಿಸ್ತಿನ ಸಿಪಾಯಿಯಂತೆ ದಿನಚರಿ ಪಾಲಿಸಿದರೂ ಯಾರದ್ದೂ ತಪ್ಪಿಗೆ ಗೆಲುವು ಸಿಗಲಿಲ್ಲ. ಹೀಗಾಗಿ ಕ್ರೀಡೆ ಬಂದು ಈ ನೋವು ಅನುಭವಿಸುವುದಕ್ಕಿಂತ  ಹಾಯಾಗಿರಿ ಎಂದು ನೀಶಮ್ ಪರೋಕ್ಷವಾಗಿ ಹೇಳಿದ್ದಾರೆ.

 

ಇದನ್ನೂ ಓದಿ: ಸೂಪರ್ ಓವರ್ ನಿಯಮಗಳೇನು..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ವಿಶ್ವಕಪ್ ಫೈನ್, ಅಥವಾ ಕೊನೆಯ 2 ಓವರ್ ಯಾವುತ್ತೂ ನೆನಪಿಸಿಕೊಳ್ಳುವುದಿಲ್ಲ. ಆಘಾತವಾಗಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ತಂಡವನ್ನು ಬೆಂಬಲಿಸಿ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ. ನಿಮ್ಮ ನಿರೀಕ್ಷೆಯನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ, ಕ್ಷಮಿಸಿ ಎಂದಿದ್ದಾರೆ.

 

ವಿಶ್ವಕಪ್ ಫೈನಲ್ ಪಂದ್ಯದ ರೋಚಕ ಹೈಲೈಟ್ಸ್‌ಗೆ ಇಲ್ಲಿ ಕ್ಲಿಕ್ ಮಾಡಿ:
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!