ಹಾಡಿನ ಮೂಲಕ ಅಭಿಮಾನಿಗಳ ಮನಗೆಲ್ಲೋ ಪ್ರಯತ್ನ ಮಾಡಿದ ಮಂಜ್ರೇಕರ್!

By Web Desk  |  First Published Jul 5, 2019, 9:30 PM IST

ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಸದಾ ಒಂದಲ್ಲೊಂದು ವಿವಾದಿಂದಲೇ ಸುದ್ದಿಯಾಗುತ್ತಾರೆ. ಟ್ವಿಟರ್‌ನಲ್ಲಿ ಟ್ರೋಲ್ ಆಗಿದ್ದೇ ಹೆಚ್ಚು. ಈ ವಿಶ್ವಕಪ್ ಟೂರ್ನಿಯಲ್ಲೂ ಮಂಜ್ರೇಕರ್ ಹಣೆಬರಹ ಬದಲಾಗಿಲ್ಲ. ಆದರೆ ಮಂಜ್ರೇಕರ್ ಇದೀಗ ಅದ್ಭುತ ಹಾಡೊಂದು ಹಾಡಿ  ಟ್ರೋಲಿಗರ ಮನಸ್ಸಿಗೆ ತಂಪೆರೆಯೋ ಪ್ರಯತ್ನ ಮಾಡಿದ್ದಾರೆ.
 


ಲಂಡನ್(ಜು.05): ವಿಶ್ವಕಪ್ ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಕಮೆಂಟರಿಗೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದರ ಜೊತೆಗೆ ಮಂಜ್ರೇಕರ್ ಟ್ವಿಟರ್ ಪೋಸ್ಟ್‌ಗೂ ಕೂಡ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ.  ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾಗೆ ಕೈಯಲ್ಲೂ ಮಂಗಳಾರಾತಿ ಮಾಡಿಸಿಕೊಂಡ ಮಂಜ್ರೇಕರ್ ಇದೀಗ ಹಾಡಿನ ಮೂಲಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ.

ಇದನ್ನೂ ಓದಿ: 7 ರನ್ ಗಡಿ ದಾಟಿದ ಬಾಂಗ್ಲಾದೇಶ- ಪಾಕಿಸ್ತಾನ ಟೂರ್ನಿಯಿಂದ ಔಟ್!

Tap to resize

Latest Videos

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಂಜ್ರೇಕರ್ ಕಮೆಂಟರಿಗೆ ಅಭಿಮಾನಿಗಳು ಮಾರುದ್ದ ದೂರ ಹೋಗುತ್ತಿರುವುದು ಸುಳ್ಳುಲ್ಲ. ಆದರೆ ಮಂಜ್ರೇಕರ್ ಅದ್ಭುತ ಹಾಡುಗಾರ ಅನ್ನೋದು ಮೆಚ್ಚಲೇ ಬೇಕು. ಈಗಾಗಲೇ ಬಂಗಾಳಿ ಭಾಷೆಯಲ್ಲಿ ಆಲ್ಬತ್ ಗೀತೆಗಳನ್ನು ಹೊರತಂದಿರುವ ಮಂಜ್ರೇಕರ್ ಇದೀಗ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ನಿರೂಪಕಿ ಜೊತೆ ಬಾಲಿವುಡ್ ಹಾಡು ಹೇಳಿ ಗಮನಸೆಳೆದಿದ್ದಾರೆ.

 

ಇದನ್ನೂ ಓದಿ: ಶ್ರೀಲಂಕಾ ಪಂದ್ಯಕ್ಕೂ ಮುನ್ನ ಕೊಹ್ಲಿ -ಅನುಷ್ಕಾ ಜಾಲಿ ರೌಂಡ್ಸ್!

ಸಲ್ಮಾನ್ ಖಾನ್ ಅಭಿನಯದ ಟೈಗರ್ ಝಿಂದಾ ಹೈ ಚಿತ್ರದ ದಿಲ್ ದಿಯಾನ್ ಗಲ್ಲಾನ್ ಹಾಡು ಹೇಳಿದ್ದಾರೆ. ಅದ್ಭುತವಾಗಿ ಹಾಡಿದ ಮಂಜ್ರೇಕರ್ ಟ್ವಿಟರ್ ಸಮರದಿಂದ ಟ್ರೋಲಿಗರ ಮನಸ್ಸು ಬೇರೆಡೆ ಕೊಂಡೊಯ್ಯ ಪ್ರಯತ್ನ ಮಾಡಿದ್ದಾರೆ. ಹಾಡಿನ ಮೂಲಕ ಟ್ರೋಲಿಗರ ಮನಸ್ಸಿಗೆ ತಂಪೆರೆಯೋ ಮಂಜ್ರೇತರ್ ಯತ್ನಕ್ಕೆ ಯಶಸ್ಸು ಸಿಗುತ್ತಾ ಅನ್ನೋದು ಮತ್ತಷ್ಟು ಕುತೂಹಲ ಕೆರಳಿಸಿದೆ.

click me!