ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

By Web Desk  |  First Published Jul 15, 2019, 8:43 PM IST

ನ್ಯೂಜಿಲೆಂಡ್ ವಿರುದ್ದ ವಿಶ್ವಕಪ್ ಗೆಲುವಿನಲ್ಲಿ ಇಂಗ್ಲೆಂಡ್ ಅಲ್ರೌಂಡರ್ ಬೆನ್ ಸ್ಟೋಕ್ಸ್ ಪಾತ್ರ ಪ್ರಮುಖವಾಗಿದೆ. ಸೋಲಿನ ಸುಳಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಸ್ಟೋಕ್ಸ್ ಅಜೇಯ 84 ರನ್ ಸಿಡಿಸಿದ್ದರು. ಗೆಲುವಿನ ಬಳಿಕ ಎದುರಾಳಿ ನಾಯಕ ಕೇನ್ ವಿಲಿಯಮ್ಸನ್ ಬಳಿಕ ಸ್ಟೋಕ್ಸ್ ಕ್ಷಮೆ ಯಾಚಿಸಿದ್ದಾರೆ.


ಲಾರ್ಡ್ಸ್(ಜು.15):  ವಿಶ್ವಕಪ್ ಫೈನಲ್ ಪಂದ್ಯ ಹಲವು ರೋಚಕ ತಿರುವು, ಎರಡೆರಡು ಟೈ ಬಳಿಕ ಇಂಗ್ಲೆಂಡ್ ಗೆಲುವು ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಕಠಿಣ ಪ್ರಯತ್ನದ ಜೊತೆ ಅದೃಷ್ಠ ಕೂಡ ಕೈ ಹಿಡಿದಿತ್ತು. ಬೆನ್ ಸ್ಟೋಕ್ಸ್  2 ರನ್‌ಗಾಗಿ ಪ್ರಯತ್ನಿಸಿದ ವೇಳೆ ರನೌಟ್ ತಪ್ಪಿಸಲು ಡೈವ್ ಮಾಡಿದ್ದರು. ಆದರೆ ಥ್ರೋ ನೇರವಾಗಿ ಸ್ಟೋಕ್ಸ್ ಬ್ಯಾಟ್‌ಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಹೀಗಾಗಿ 2 + 4 ಒಟ್ಟು 6 ರನ್ ನಿಡಲಾಗಿತ್ತು. ಇದು ಪಂದ್ಯದ ಗತಿಯನ್ನೇ ಬದಲಿಸಿತು. 

ಇದನ್ನೂ  ಓದಿ: ಬಲಿಷ್ಠ ICC ವಿಶ್ವಕಪ್ ತಂಡ ಪ್ರಕಟ: ಇಬ್ಬರು ಭಾರತೀಯರಿಗೆ ಸ್ಥಾನ..!

Latest Videos

undefined

ಇಂಗ್ಲೆಂಡ್ ರೋಚಕ ಗೆಲುವಿನ ಬಳಿಕ  ಸ್ಟೋಕ್ಸ್, ತನಗೆ ಅರಿವಿಲ್ಲದಂತೆ ಈ ರೀತಿಯಾಗಿದೆ. ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ಅದರೂ  ಜೀವನದುದ್ದಕ್ಕೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಳಿ ಕ್ಷಮೆ ಕೇಳುತ್ತೇನೆ ಎಂದು ಸ್ಟೋಕ್ಸ್ ಹೇಳಿದ್ದಾರೆ.

ಇದನ್ನೂ  ಓದಿ: ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!

ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 241 ರನ್ ಸಿಡಿಸಿತ್ತು. 242 ರನ್ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 241 ರನ್‌ಗೆ ಆಲೌಟ್ ಆಗೋ ಮೂಲಕ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ 15 ರನ್ ಸಿಡಿಸಿದರೆ, ನ್ಯೂಜಿಲೆಂಡ್ ಕೂಡ 15 ರನ್ ಸಿಡಿಸಿ ಟೈ ಮಾಡಿಕೊಂಡಿತು. ಎರಡು ಬಾರಿ ಟೈ ಆದ ಕಾರಣ ಗರಿಷ್ಠ  ಬೌಂಡರಿ ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್‌ಗೆ ಗೆಲುವು ದಾಖಲಿಸಿತು.

click me!