
ಓವಲ್(ಜೂ.09): ವಿಶ್ವಕಪ್ ಟೂರ್ನಿಯಲ್ಲಿ ಬಾಲ್ ಟ್ಯಾಂಪರಿಂಗ್ ಅನುಮಾನ ಕಾಡುತ್ತಿದೆ. ಭಾರತ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲೂ ಝಂಪಾ ಟ್ಯಾಂಪರಿಂಗ್ ಕುರಿತ ವೀಡಿಯೋ ವೈರಲ್ ಆಗುತ್ತಿದೆ.
ಝಂಪಾ ತಮ್ಮ ಓವರ್‌ನ ಪ್ರತಿ ಎಸೆತಕ್ಕೂ ಮುನ್ನ ಜೇಬಿನೊಳಗಿನಿಂದ ವಸ್ತುವೊಂದನ್ನ ತೆಗೆಯುತ್ತಿರು ವಿಡಿಯೋ ಇದೀಗ ಅನುಮಾನಗಳಿಗೆ ಕಾರಣವಾಗಿದೆ. ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗದ ಕಾರಣ ಈ ಪ್ರಯತ್ನ ಮುಂದಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.