ಛೇ, ಎಬಿಡಿಗೆ ಹೀಗಾಗಬಾರದಿತ್ತು...!

By Web Desk  |  First Published Jun 6, 2019, 4:19 PM IST

ದಕ್ಷಿಣ ಆಫ್ರಿಕಾದ ಸೂಪರ್-ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿ ನಿವೃತ್ತಿ ಹಿಂಪಡೆದು ವಿಶ್ವಕಪ್ ಆಡುತ್ತೇನೆ ಎಂದರೂ ಆಯ್ಕೆ ಸಮಿತಿ ಅವಕಾಶ ನೀಡಿರಲಿಲ್ಲ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಯಾಕೆ ಹೀಗೆ ನೀವೇ ನೋಡಿ... 


ಲಂಡನ್[ಜೂ.06]: ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ಮತ್ತೆ ನಿವೃತ್ತಿ ವಾಪಾಸ್ ಪಡೆದು ಕಡೇ ಘಳಿಗೆಯಲ್ಲಿ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಬಯಸಿದ್ದರಂತೆ. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಡಳಿತ ಮಂಡಳಿ ಎಬಿಡಿ ಮನವಿಯನ್ನು ತಳ್ಳಿಹಾಕಿತ್ತು ಎಂಬ ಆಘಾತಕಾರಿ ಮಾಹಿತಿಯೀಗ ಹೊರಬಿದ್ದಿದೆ.

ಹೌದು, ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿ 2018ರ ಮೇ ತಿಂಗಳಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. ಆದರೆ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಆಯ್ಕೆ ಮಾಡುವ 24 ಗಂಟೆ ಮೊದಲು ರಾಷ್ಟ್ರೀಯ ತಂಡದ ಪರ ಆಡಲು ರೆಡಿ ಇದ್ದೇನೆ ಎಂದು ಎಬಿಡಿ ಹೇಳಿದ್ದರಂತೆ. 

Tap to resize

Latest Videos

undefined

ಅಷ್ಟಕ್ಕೂ ಆಗಿದ್ದೇನು..?
35 ವರ್ಷದ ಎಬಿಡಿ, ನಾಯಕ ಫಾಫ್ ಡುಪ್ಲೆಸಿಸ್, ಕೋಚ್ ಒಟ್ಟೀಸ್ ಗಿಬ್ಸನ್ ಹಾಗೂ ಆಯ್ಕೆ ಸಮಿತಿ ಸದಸ್ಯ ಲಿಂಡಾ ಜೊಂಡಿ ಬಳಿ, ತಾವು 2019ರ ಏಕದಿನ ವಿಶ್ವಕಪ್ ಆಡುವ ಇಂಗಿತ ವ್ಯಕ್ತಪಡಿಸಿದ್ದರಂತೆ. ಆದರೆ ಎಬಿಡಿ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಲಾಗಿತ್ತಂತೆ.

2023ರ ವಿಶ್ವಕಪ್ ಆಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ಎಬಿಡಿ..!

ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಆಟಗಾರ ದೇಶದ ಪರ ದೇಶಿಯ ಟೂರ್ನಿಯಲ್ಲಿ ಪಾಲ್ಗೊಂಡಿರಬೇಕು, ಇಲ್ಲವೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡಿರಬೇಕು ಎನ್ನುವ ನಿಯಮವಿದೆ.  ಇದಷ್ಟೇ ಅಲ್ಲದೇ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ತಿಂಗಳುಗಳು ಇರುವಾಗ ಎಬಿಡಿ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರತಿನಿಧಿಸಿದ್ದ ರಸ್ಸಿ ವ್ಯಾನ್ ಡರ್ ಡ್ಯುಸೇನ್ ಆಡಿದ ಮೊದಲ 4 ಪಂದ್ಯಗಳಲ್ಲಿ 3 ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಹೀಗಾಗಿ ಅಂತಹ ಆಟಗಾರರನ್ನು ಕೈಬಿಟ್ಟು ಎಬಿಡಿಗೆ ಸ್ಥಾನ ನೀಡುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. 

ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಆಡಿದ ಮೊದಲ ಮೂರು ಪಂದ್ಯಗಳಲ್ಲಿ[ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಭಾರತ] ಸೋತು ಮುಖಭಂಗ ಅನುಭವಿಸಿದೆ. ಹೀಗಾಗಿ ಎಬಿಡಿಗೆ ತಂಡದಲ್ಲಿ ಚಾನ್ಸ್ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲೂ ಒತ್ತಡಗಳು ಕೇಳಿ ಬರುತ್ತಿವೆ.  

ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ 228 ಪಂದ್ಯಗಳನ್ನಾಡಿ 25 ಶತಕ ಹಾಗೂ 53 ಅರ್ಧಶತಕಗಳ ನೆರವಿನಿಂದ 9577 ರನ್ ಬಾರಿಸಿದ್ದರು. ಇನ್ನು 12ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು.
ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...

click me!